Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾನೂನು ಸುವ್ಯವಸ್ಥೆ ಸುಧಾರಣೆಯಾದ್ದರಿಂದ ಹೂಡಿಕೆಗಳ ಹೆಚ್ಚಳ: ಸಿಎಂ ಸ್ಪಷ್ಟನೆ

Spread the love

ಬೆಂಗಳೂರು: ನಮ್ಮ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರಾಜ್ಯ ಮಾದಕ ವಸ್ತು ಮುಕ್ತವಾಗಬೇಕು. ನಿನ್ನೆಯಷ್ಟೇ 75 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ .ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ಹೂಡಿಕೆಗಳು ಹೆಚ್ಚಾಗಿದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ. ಇವರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಲಾಗುವುದು.ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಮುಖ್ಯಮಂತ್ರಿಗಳು ಅಂಕಿ ಅಂಶಗಳನ್ನು ಇಟ್ಟು ಸ್ಪಷ್ಟಪಡಿಸಿದರು.ಅಪರಾಧಗಳಿಲ್ಲವೇ ಇಲ್ಲ ಎಂದು ಹೇಳಲ್ಲ. ಆದರೆ ಕಡಿಮೆಯಾಗಿವೆ ಎಂದರು.
ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿ ಯವರಿಗೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದೇ ದ್ವೇಷದ ರಾಜಕಾರಣ. ಇದನ್ನು ಮಾಡಬಾರದು. ಇದನ್ನು ಹುಟ್ಟುಹಾಕಿದ್ದು ಆರ್.ಎಸ್.ಎಸ್ ನವರು ಎಂದದ್ದಕ್ಕೆ ಗಲಾಟೆ ನೀವು ಮಾಡಿದಿರಿ ಎಂದು ಆರೋಪಿಸಿದರು.

ಹಾಲಿನ ದರದ ಏರಿಕೆ ಬಗ್ಗೆ ಮಾತನಾಡಿದ ಸಿಎಂ, 600 ಕೋಟಿ ರೂ ಉಳಿಸಿ ಹೋದವರು ನೀವು ಬಿಜೆಪಿ ಯವರು. ಆದರೆ ನಾವು ಈ ವರ್ಷ 1500 ಕೋಟಿ ಕೊಟ್ಟಿದ್ದು, ಮುಂದಿನ ವರ್ಷ 1500 ಕೋಟಿ ಮೀಸಲಿಟ್ಟಿದೆ.

ಹಂತ ಹಂತವಾಗಿ ಪ್ರೋತ್ಸಾಹ ಧನವನ್ನು ಹೆಚ್ಚು ಮಾಡಲಾಗಿದೆ. 341 ಕೋಟಿ ರೂಪಾಯಿ ಇದ್ದದ್ದು, 1300 ಕೋಟಿ ಹೆಚ್ಚಾಗಿದೆ. ಈ ಪ್ರಗತಿಗೆ ನಮ್ಮ ಸರ್ಕಾರ ಕಾರಣ ಎಂದರು.

ವಿರೋಧ ಪಕ್ಷದ ನಾಯಕರು ಬಸ್ಸಿನ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ. 2008-2013 ವರೆಗೆ ಸಾರಿಗೆ ಸಚಿವರಾಗಿದ್ದ ಅಶೋಕ್ ಅವರು ಶೇ 47% ರಷ್ಟು ದರ ಏರಿಸಿದ್ದರು ಎಂದರು.

ನಾವು ಬಸ್ಸಿನ ದರ ಶೇ 15% ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಸಿಬ್ಬಂದಿ ವೇತನ, ಡೀಸಲ್ ಬೆಲೆ ಏರಿಕೆಯಾದ ಕಾರಣಕ್ಕೆ ನಾವು ಬಸ್ಸಿನ ದರ ಹೆಚ್ಚಳ ಮಾಡಬೇಕಾಗುತ್ತದೆ ಎಂದು ವಿವರಿಸಿದರು.


Spread the love
Share:

administrator

Leave a Reply

Your email address will not be published. Required fields are marked *