Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಐತಿಹಾಸಿಕ ಜಿಗಿತ: ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ!

Spread the love

Image Credit: Google

ನವದೆಹಲಿ: ವಿಶ್ವದ ನಾಲ್ಕನೇಯ ಅತಿ ದೊಡ್ಡ ಆರ್ಥಿಕತೆಯನ್ನು (Economy) ಹೊಂದಿದ ದೇಶವಾಗಿ ಭಾರತ (India) ಹೊರಹೊಮ್ಮಿದೆ. ಆರ್ಥಿಕ ಸುಧಾರಣೆಗಳಿಂದ ಭಾರತ ಜಪಾನ್‌ (Japan) ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಗಾತ್ರವು 4.18 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.  4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ 2.5 ರಿಂದ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ. 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ ದೇಶವಾಗಲಿದೆ ಎಂದಿದೆ.

ದೇಶೀಯ ಬೇಡಿಕೆ, ವಿದೇಶಿ ಹೂಡಿಕೆ, ಹಣದುಬ್ಬರ ಇಳಿಕೆ, ನಿರುದ್ಯೋಗ ಇಳಿಕೆ, ರಫ್ತು ಹೆಚ್ಚಳ ಕಾರಣದಿಂದ ದೇಶದ ಜಿಡಿಪಿ ದರ ಏರಿಕೆಯಾಗಿದೆ. ವಾಣಿಜ್ಯ ವಲಯಕ್ಕೆ ಆರೋಗ್ಯಕರ ಸಾಲದ ಹರಿವಿನೊಂದಿಗೆ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಸರ್ಕಾರ ತಿಳಿಸಿದೆ. 

ಯಾವ ದೇಶದ ಜಿಡಿಪಿ ಗಾತ್ರ ಎಷ್ಟು?
*ಟ್ರಿಲಿಯನ್‌ ಡಾಲರ್‌ ಲೆಕ್ಕದಲ್ಲಿ
1. ಅಮೆರಿಕ – 30.507
2. ಚೀನಾ – 19.213
3. ಜರ್ಮನಿ – 4.744
4. ಭಾರತ – 4.744
5. ಜಪಾನ್‌ – 4.186
6. ಯುಕೆ – 3.839
7. ಫ್ರಾನ್ಸ್‌ – 3.211
8. ಇಟಲಿ – 2.422
9. ಕೆನಡಾ – 2.225
10. ಬ್ರೆಜಿಲ್‌ – 2.125


Spread the love
Share:

administrator

Leave a Reply

Your email address will not be published. Required fields are marked *