Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕದಲ್ಲಿ ಹೆತ್ತ ಮಕ್ಕಳನ್ನೇ ಕೊಂದ ಭಾರತೀಯ ಮೂಲದ ಮಹಿಳೆ!

Spread the love

ತನ್ನ ಇಬ್ಬರು ಗಂಡು ಮಕ್ಕಳನ್ನು ಹತ್ಯೆಗೈದ ಆರೋಪದಲ್ಲಿ ಭಾರತೀಯ ಮೂಲದ ಮಹಿಳೆಯೋರ್ವರನ್ನು ಬಂಧಿಸಲಾಗಿದೆ. ನ್ಯೂಜೆರ್ಸಿಯಲ್ಲಿ 35 ವರ್ಷದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಘಟನೆ ನಡೆದಿದೆ.

“ತನ್ನ ಹೆಂಡತಿ ಅವರಿಗೆ ಏನೋ ಮಾಡಿದ್ದಾಳೆ” ಎಂದು ತಿಳಿದು ಪತಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಘಟನಾ ಸ್ಥಳಕ್ಕೆ ಬಂದ ನಂತರ ಪೊಲೀಸರು ಮನೆಯೊಳಗಿನ ಮಲಗುವ ಕೋಣೆಯಲ್ಲಿ ಇಬ್ಬರು ಮೃತ ಮಕ್ಕಳನ್ನು ಪತ್ತೆ ಮಾಡಿದರು. ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು. ಪೊಲೀಸರು ಕೂಡಲೇ ಮಹಿಳೆಯನ್ನು ಬಂಧಿಸಿ ತನಿಖೆ ನಡೆಸಿದರು.

ಮಹಿಳೆ ಮೇಲೆ ಶಸ್ತ್ರಾಸ್ತ್ರವನ್ನು ಹೊಂದಿದ ಆರೋಪ ಹಾಗೂ ಕೊಲೆ ಮಾಡಿದ ಎರಡು ಆರೋಪಗಳನ್ನು ಹೊರಿಸಲಾಯಿತು. ನಂತರ ಹಿಲ್ಸ್ಬರೋ ಪೊಲೀಸ್ ಅಧಿಕಾರಿಗಳು ಆಕೆಯನ್ನು ಬಂಧಿಸಿ ಸೋಮರ್ಸೆಟ್ ಕೌಂಟಿ ಜೈಲಿಗೆ ಶಿಫ್ಟ್ ಮಾಡಿದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ, ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *