ಭಾರತೀಯ ಮೂಲದ ಪೈಲಟ್ ಗೆ ಕಾಕ್‌ಪಿಟ್ ನುಗ್ಗಿ ಕೋಳ ಹಾಕಿ ಬಂಧಿಸಿದ್ದೇಕೆ?

ವಿಮಾನ ಏರ್‌ಫೋರ್ಟ್‌ನಲ್ಲಿ ಲ್ಯಾಂಡ್ ಆಗಿ ಪ್ರಯಾಣಿಕರು ಇಳಿಯುವ ಮೂದಲೇ ವಿಮಾನದ ಕಾಕ್‌ಪಿಟ್‌ಗೆ ನುಗ್ಗಿದ ಪೊಲೀಸರು ಹಾಗೂ ಅಧಿಕಾರಿಗಳು ವಿಮಾನದ ಪೈಲಟ್‌ಗೆ ಕೋಳ ತೊಡಿಸಿ ಕರೆದುಕೊಂಡು ಹೋದಂತಹ ಘಟನೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಬಂಧಿತ ಪೈಲಟ್ ಭಾರತೀಯ ಮೂಲದ ರುಸ್ತುಂ ಭಾಗ್ವಾಗರ್ ಎಂದು ಗುರುತಿಸಲಾಗಿದೆ.

ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಲಟ್‌ನನ್ನು ಬಂಧಿಸಲಾಗಿದೆ.
ಮಿನ್ನೆಯಾಪೊಲಿಸ್‌ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದ ಡೆಲ್ಟಾ ಫ್ಲೈಟ್ 2809 ಬೋಯಿಂಗ್ 757-300ದಲ್ಲಿ ಈ ಘಟನೆ ನಡೆದಿದೆ. ವಿಮಾನ ಸ್ಯಾನ್ ಫ್ರಾನ್ಸಿಸ್ಕೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅಲ್ಲಿ ಸಿದ್ಧರಿದ್ದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ತನಿಖಾ ತಂಡ ಹಾಗೂ ಕೊಂಟ್ರಾ ಕೊಸ್ಟಾ ಕಂಟ್ರಿ ಶರಿಫ್(ಸ್ಥಳೀಯ ನ್ಯಾಯಲಯದ) ವಿಭಾದ ಅಧಿಕಾರಿಗಳು ಕಾಕ್‌ಫಿಟ್‌ಗೆ ನುಗ್ಗಿ ವಿಮಾನದ ಪೈಲಟ್ 34 ವರ್ಷದ ರುಸ್ತುಂ ಭಾಗ್ವಾಗರ್‌ನನ್ನು ಬಂಧಿಸಿದ್ದಾರೆ.
ವಿಮಾನ ಲ್ಯಾಂಡ್ ಆದ ನಂತರ ಪ್ರಯಾಣಿಕರು ಇಳಿಯುವುದಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ 10 ಡಿಹೆಚ್‌ಎಸ್ ಸಿಬ್ಬಂದಿ ವಿಮಾನವನ್ನು ಏರಿದ್ದು, ಪೈಲಟ್‌ನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋಗೆ ಒಬ್ಬರು ಪ್ರಯಾಣಿಕರು ಪ್ರತಿಕ್ರಿಯಿಸಿದ್ದು, ತನಿಖಾಧಿಕಾರಿಗಳು ಹಾಗೂ ಏಜೆಂಟ್‌ಗಳು ಬ್ಯಾಡ್ಜ್ ಧರಿಸಿ ಕೈಯಲ್ಲಿ ಗನ್ ಹಿಡಿದುಕೊಂಡಿದ್ದರು. ಪೈಲಟ್‌ನನ್ನು ಬಂಧಿಸಿ ಕರೆದುಕೊಂಡು ಹೋಗುವ ಮೊದಲು ಕೈಗೆ ಕೋಳ ಧರಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ರುಸ್ತುಂ ಭಾಗ್ವರ್ ಸಹ ಪೈಲಟ್ ಪ್ರತಿಕ್ರಿಯಿಸಿದ್ದು, ಪೊಲೀಸರು ಹಾಗೂ ತನಿಖಾ ತಂಡ ಕಾಕ್‌ಪಿಟ್‌ಗೆ ಆಗಮಿಸಿ ತಮ್ಮ ಸಹೋದ್ಯೋಗಿಯನ್ನು ಬಂಧಿಸಿದ್ದು, ನೋಡಿ ಅಚ್ಚರಿಯಾಗಿತ್ತು. ನಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿರಲಿಲ್ಲ. ಆತ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ಬಗ್ಗೆ ವಿಮಾನದ ಇತರ ಸಿಬ್ಬಂದಿಗೂ ಹೇಳಿರಲಿಲ್ಲ ಅವರು ಆತನಿಗೆ ಮಾಹಿತಿ ನೀಡಿದರೆ ಎಂಬ ಕಾರಣಕ್ಕೆ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಕೊಂಟ್ರಾ ಕೋಸ್ಟಾ ಶರೀಫ್ ಫೇಸ್‌ಬುಕ್ ಪೋಸ್ಟ್ ಪ್ರಕಾರ, ತನಿಖಾ ತಂಡಗಳು ಕಳೆದ ಏಪ್ರಿಲ್‌ನಿಂದಲೂ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿದ್ದಾರೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಕೇಳಿ ಬಂದ ನಂತರ ಆರೋಪಿ ವಿರುದ್ಧ ಬಂಧನ ವಾರೆಂಟ್ ಕೂಡ ಕಳಿಸಲಾಗಿತ್ತು.
10 ವರ್ಷದೊಳಗಿನ ಮಗುವಿನ ಜೊತೆ ಆರೋಪಿ ಐದು ಬಾರಿ ಮೌಖಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಆರೋಪಿ ರುಸ್ತುಂ ಭಾಗ್ವರ್‌ಗೆ, ಮಾರ್ಟಿನ್ಜ್ ಬಂಧನ ಕೇಂದ್ರದಿಂದ 5 ಮಿಲಿಯನ್ ಶೂರಿಟಿ ಪಡೆದು ಬೇಲ್ ನೀಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಡೆಲ್ಟಾ ಏರ್‌ಲೈನ್ಸ್ ಪ್ರಕಟಣೆ ಬಿಡುಗಡೆ ಮಾಡಿದ್ದು, ಡೆಲ್ಟಾ ಅಪರಾಧಿ ಕೃತ್ಯಗಳ ಆರೋಪಿಗಳನ್ನು ಸಹಿಸುವುದಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಸ್ಥೆಯೊಂದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಬಂಧನಕ್ಕೆ ಕಾರಣವಾದ ಆರೋಪಗಳನ್ನು ಕೇಳಿ ಆಘಾತವಾಗಿದೆ. ಆರೋಪಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.