ಆಪಲ್ ಕಂಪನಿಯಲ್ಲಿ ಭಾರತೀಯ ಮೂಲದ ಹೊಸ ಸಿಒಒ ನೇಮಕ

ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ ನಂತಹ ಉತ್ಪನ್ನಗಳಿಗೆ ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಆಯಪಲ್ ಇದೀಗ ಒಂದು ದೊಡ್ಡ ಘೋಷಣೆವೊಂದು ಮಾಡಿದೆ.

ಹೌದು, ಕಂಪನಿಯು ಭಾರತೀಯ ಮೂಲದ ಸಬಿಹ್ ಖಾನ್ ಅವರನ್ನು ತನ್ನ ಹೊಸ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಆಗಿ ನೇಮಿಸಿದೆ.
ಇದು ಬಹಳ ಮುಖ್ಯವಾದ ಹುದ್ದೆಯಾಗಿದೆ, ಏಕೆಂದರೆ COO ಕಂಪನಿಯ ಎಲ್ಲಾ ಪ್ರಮುಖ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ಈ ಹುದ್ದೆಯನ್ನು ಇಲ್ಲಿಯವರೆಗೆ ಜೆಫ್ ವಿಲಿಯಮ್ಸ್ ನಿರ್ವಹಿಸುತ್ತಿದ್ದರು, ಅವರು ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ.
1996ರಲ್ಲಿ ಉತ್ತರಪ್ರದೇಶದ ಮೊರಾಬಾದ್ನಲ್ಲಿ ಜನಿಸಿದರು. ಇವರ ಬಾಲ್ಯದ ಶಿಕ್ಷಣ ಮೊರಾದಬಾದ್ನಲ್ಲಿ ಮಾಡಿದ್ದಾರೆ. ಆದರೆ, ಅವರ ತಂದೆ ಇವರ ವ್ಯಾಸಂಗವನ್ನು ಅರ್ಥಕ್ಕೆ ಮೊಟಕುಗೊಳಿಸಿ ಸಿಂಗಾಪುರಕ್ಕೆ ಶಿಫ್ಟ್ ಆದರು. ನಂತರ ಅವರು ಅಮೆರಿಕದಲ್ಲಿ ನೆಲೆಸಿದರು. ಇದರ ನಂತರ, ಸಬಿಹ್ ಖಾನ್ ಅವರ ಶಿಕ್ಷಣ ಮತ್ತು ವೃತ್ತಿಜೀವನದ ಪ್ರಯಾಣವು ಅಮೆರಿಕದಲ್ಲಿ ಮುಂದುವರೆಯಿತು, ಅಲ್ಲಿ ಅವರು ಉನ್ನತ ಶಿಕ್ಷಣವನ್ನು ಪಡೆದರು ಮತ್ತು ತಮ್ಮ ಕಠಿಣ ಪರಿಶ್ರಮದಿಂದ ತಂತ್ರಜ್ಞಾನದ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಗಳಿಸಿದರು.
ಆಯಪಲ್ ಜತೆ 30 ವರ್ಷ ಸುದೀರ್ಘ ಪಯಣ
ಸಬಿಹ್ ಖಾನ್ ಕಳೆದ 30 ವರ್ಷಗಳಿಂದ ಆಯಪಲ್ ಜತೆ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಕಂಪನಿಗೆ ಅನೇಕ ಪ್ರಮುಖ ಕೆಲಸಗಳನ್ನು ಮಾಡಿದ್ದಾರೆ. ಜಾಗತಿಕ ಪೂರೈಕೆ ಸರಪಳಿಯಂತೆ, ಅಂದರೆ ಪ್ರಪಂಚದಾದ್ಯಂತ ಆಪಲ್ ಉತ್ಪನ್ನಗಳನ್ನು ಸಮಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ತಲುಪಿಸುವುದು, ಪೂರೈಕೆದಾರರ ಜವಾಬ್ದಾರಿ ಕಾರ್ಯಕ್ರಮವನ್ನು ನೋಡಿಕೊಳ್ಳುವುದು.
ಗಳಿಕೆ ಎಷ್ಟು?
ಬ್ಯಾರನ್ ವರದಿ ಪ್ರಕಾರ, ಇಲ್ಲಿಯವರೆಗೆ ಜೆಫ್ ವಿಲಿಯಮ್ಸ್ ಸಿಒಒ ಆಗಿ ನಿರ್ವಹಿಸುತ್ತಿದ್ದರು. ಅವರಿಗೆ ಮೂಲ ವೇತನ ಸುಮಾರು 8 ಕೋಟಿ ರೂ. ಪಡೆಯುತ್ತಿದ್ದರು. ಇದಲ್ಲದೆ, ಬೋನಾಸ್ ಮತ್ತು ಇತರೆ ಸೌಲಭ್ಯಗಳು ಸೇರಿ ಒಟ್ಟು ಗಳಿಕೆ 23 ಮಿಲಿಯನ್ ಅಂದರೆ ಸುಮಾರು 191 ಕೋಟಿ ರೂ,(ವರ್ಷಕ್ಕೆ) ಪಡೆಯುತ್ತಿದ್ದರು. ಇದೀಗ ಇದರ ಅಸಾಪಾಸುನಲ್ಲೇ ಇರಬಹುದು ಎಂದು ಲೆಕ್ಕ ಹಾಕಲಾಗುತ್ತಿದೆ. ಆದರೆ, ವೇತನ ಬಗ್ಗೆ ಆಯಪಲ್ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
