Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಹಸುವಿನ ಸಗಣಿಗೆ ವಿದೇಶದಲ್ಲಿ ಬಂಪರ್ ಮಾರುಕಟ್ಟೆ

Spread the love

ನವದೆಹಲಿ : ಭಾರತದಲ್ಲಿ, ಹಸುಗಳನ್ನು ಶತಮಾನಗಳಿಂದ ಹಾಲಿಗೆ ಬಳಸಲಾಗುತ್ತಿದೆ, ಆದರೆ ಅವುಗಳ ಸಗಣಿಯೂ ಅನೇಕ ಗುಣಗಳನ್ನು ಹೊಂದಿದ್ದು, ಕೃಷಿಯಲ್ಲಿ ಗೊಬ್ಬರ, ಗ್ಯಾಸ್ ಸೇರಿದಂತೆ ನಾನಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಇದೀಗ ವಿದೇಶದಲ್ಲಿ ಕೂಡ ಈ ಪ್ರವೃತ್ತಿ ಹೆಚ್ಚಾಗಿದ್ದು, ಸಗಣಿಗೆ ಭಾರೀ ಬೇಡಿಕೆಯಿದೆ

ಸಗಣಿಗೆ ವಿಶೇಷವಾಗಿ ಕುವೈತ್ ಸೇರಿದಂತೆ ಅರಬ್ ರಾಷ್ಟ್ರಗಳು ಹಸುವಿನ ಸಗಣಿಗೆ ಬಾರಿ ಬೇಡಿಕೆ ಇಡುತ್ತಿದ್ದು, ಇದರಿಂದ ಭಾರತಕ್ಕೆ ಸಗಣಿ ಚಿನ್ನದ ಗಟ್ಟಿಯಂತೆ ಭಾಸವಾಗುತ್ತಿದೆ. ಭಾರತದ ಹಸುವಿನ ಸಗಣಿ ಹೆಚ್ಚು ಗೋಮಯದ ಗುಣಗಳನ್ನು ಹೊಂದಿದೆ. ಹೀಗಾಗಿ ಭಾರತಕ್ಕೆ ಬೇಡಿಕೆ ಹೆಚ್ಚಾಗಿದೆ.

ಗಲ್ಫ್ ರಾಷ್ಟ್ರಗಳಿಗೆ ಹಸುವಿನ ಸಗಣಿ ರಫ್ತು ಮಾಡುತ್ತಿದೆ, ರಫ್ತು 2023-24ರ ಹಣಕಾಸು ವರ್ಷದಲ್ಲಿ ಸುಮಾರು 400 ಕೋಟಿ ರೂ. ಗೆ ಏರಿದೆ. ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇ ಬೇಡಿಕೆಯಲ್ಲಿ ಮುಂಚೂಣಿಯಲ್ಲಿದೆ.

ಇತರ ದೇಶಗಳಂತೆ, ಅರಬ್ ರಾಷ್ಟ್ರಗಳಲ್ಲಿಯೂ ಸಹ, ಹಸುವಿನ ಸಗಣಿ ಹೆಚ್ಚಾಗಿ ಕೃಷಿಗೆ ಬಳಸಲಾಗುತ್ತದೆ. ಅರಬ್ ನಲ್ಲಿ ಖರ್ಜೂರವನ್ನು ಹೆಚ್ಚಾಗಿ ಬೆಳೆಯುವುದರಿಂದ ಹೆಚ್ಚಿನ ಪೌಷ್ಠಿಕಾಂಶ ಅಗತ್ಯವಿರುವುದರಿಂದ ಭಾರತದಿಂದ ಗೊಬ್ಬರವನ್ನು ಆಗದು ಮಾಡಿಕೊಂಡು ಬಳಸಲಾಗುತ್ತಿದೆ ಎಂದು ವರದಿಯಾಗಿದೆ.

ಕುವೈತ್‌ನಲ್ಲಿ ನಡೆಸಿದ ಸಂಶೋಧನೆಯು ಹಸುವಿನ ಸಗಣಿ ಪುಡಿ ರೂಪದಲ್ಲಿ ಬಳಸಿದರೆ, ಖರ್ಜೂರದ ಬೆಳೆ ಉತ್ತಮವಾಗುವುದಲ್ಲದೆ, ಅದರ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಅಂದಿನಿಂದ ಅರಬ್ ದೇಶಗಳಲ್ಲಿ ಹಸುವಿನ ಸಗಣಿ ಬೇಡಿಕೆ ಹೆಚ್ಚಾಗಿದೆ.

ವರದಿಗಳ ಪ್ರಕಾರ, ಭಾರತವು 2024 ರಲ್ಲಿ 400 ಕೋಟಿ ರೂ. ಮೌಲ್ಯದ ಹಸುವಿನ ಸಗಣಿ ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳನ್ನು ರಫ್ತು ಮಾಡಿದೆ. 2023 ರಲ್ಲಿ, ಭಾರತವು ಒಟ್ಟು 125 ಕೋಟಿ ರೂ. ಮೌಲ್ಯದ ತಾಜಾ ಹಸುವಿನ ಸಗಣಿ ರಫ್ತು ಮಾಡಿದೆ. ಇದಲ್ಲದೆ, ಹಸುವಿನ ಸಗಣಿಯಿಂದ ತಯಾರಿಸಿದ ಗೊಬ್ಬರವನ್ನು ಸಹ ಕಳುಹಿಸಲಾಯಿತು.

2023 ರಲ್ಲಿ ಭಾರತವು 386 ಕೋಟಿ ರೂ. ಮೌಲ್ಯದ ಗೋಮಯವನ್ನು ಇತರ ದೇಶಗಳಿಗೆ ಮಾರಾಟ ಮಾಡಿತು. ಭಾರತದಿಂದ ಹಸುವಿನ ಸಗಣಿ ಖರೀದಿಸುವ ಟಾಪ್ 10 ದೇಶಗಳ ಪೈಕಿ ಮಾಲ್ಡೀವ್ಸ್ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನ, ಮೂರನೇ ಸ್ಥಾನದಲ್ಲಿ ಸಿಂಗಾಪುರ ಇದೆ.

ಇನ್ನುಳಿದಂತೆ ಚೀನಾ, ನೇಪಾಳ, ಬ್ರೆಜಿಲ್, ಅರ್ಜೆಂಟೀನಾ, ಆಸ್ಟ್ರೇಲಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಕ್ರಮವಾಗಿ ಸ್ಥಾನವನ್ನು ಪಡೆದಿದೆ. ಆದಾಗ್ಯೂ, ಕುವೈತ್ ಸೇರಿದಂತೆ ಅರಬ್ ದೇಶಗಳಲ್ಲಿ ಇದರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *