ಕೇರಳದಲ್ಲಿ ಮದ್ಯ ನಿಷೇಧದ ಪರಿಣಾಮ – ಕರ್ನಾಟಕದ ಗಡಿಭಾಗದಲ್ಲಿ ಕೇರಳಿಗರ ಮದ್ಯಪಾನ ಹಾವಳಿ!

ಮೈಸೂರು : ಕೇರಳದಲ್ಲಿ ಮದ್ಯ ನಿಷೇಧ ಎಫೆಕ್ಟ್ ನಿಂದ ರಾಜ್ಯದ ಗಡಿ ಭಾಗಕ್ಕೆ ಬಂದು ಪಾನಮತ್ತರಾಗಿ ಕೇರಳಿಗರು ತೂರಾಡುತ್ತಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಮದ್ಯದಂಗಡಿಗಳಿಗೆ ಕೇರಳಿಗರು ಆಗಮಿಸಿದ್ದಾರೆ.
ಮದ್ಯದ ನಶೆಯಲ್ಲಿ ಎಲ್ಲೆಂದರಲ್ಲಿ ಬಿದ್ದು ಕುಡುಕರು ಒದ್ದಾಡುತ್ತಿದ್ದಾರೆ.
ಕಾಡು ಪ್ರಾಣಿಗಳು ಓಡಾಡುವ ಸ್ಥಳಗಳಲ್ಲೂ ನಶೆಯಲ್ಲಿ ಮದ್ಯಪ್ರಿಯರು ತೇಲಾಡುತ್ತಿದ್ದಾರೆ.
ಬಾವಲಿ ಚೆಕ್ ಪೋಸ್ಟ್ ಮುಖಾಂತರ ತಂಡೋಪತಂಡವಾಗಿ ಕರ್ನಾಟಕಕ್ಕೆ ಬಂದು ಕೇರಳಿಗರು ಮದ್ಯ ಸೇವನೆ ಮಾಡುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.