ಭಾರತ-ಪಾಕ್ ಪರಮಾಣು ಯುದ್ಧ ತಡೆದಿದ್ದೇ ನಾನು; ರಾಷ್ಟ್ರವನ್ನುದ್ದೇಶಿಸಿ ಟ್ರಂಪ್ ರೋಚಕ ಹೇಳಿಕೆ.

ವಾಷಿಂಗ್ಟನ್: ನನ್ನ ಮಧ್ಯಸ್ಥಿಕೆ ಇಲ್ಲದೇ ಇದ್ದಿದ್ರೆ, ಭಾರತ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಪ್ರಧಾನಿ (Pakistan PM) ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.

ತಮ್ಮ 2ನೇ ಅವಧಿಯ ಸರ್ಕಾರಕ್ಕೆ (Trump Government) 1 ವರ್ಷ ತುಂಬಿದ ಹಿನ್ನೆಲೆ 2026ರ ರಾಷ್ಟ್ರೀಯ ಒಕ್ಕೂಟವನ್ನುದ್ದೇಶಿಸಿ ಅವರು ಮಾತನಾಡಿದರು. ನಮ್ಮ ರಾಷ್ಟ್ರವು ಗತವೈಭವಕ್ಕೆ ಮರಳಿದೆ. ಹಿಂದೆಂದಿಗಿಂತಲೂ ದೊಡ್ಡ, ಉತ್ತಮ, ಶ್ರೀಮಂತ ಮತ್ತು ಬಲಶಾಲಿ ದೇಶವಾಗಿದೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ. ಇದೇ ವೇಳೆ ಭಾರತ – ಪಾಕ್ ಯುದ್ಧ (India Pakistan War) ನಿಲ್ಲಿಸಿದ್ದಾಗಿ ಮತ್ತೆ ಹೇಳಿದ್ದಾರೆ.
ನನ್ನ ಮೊದಲ 10 ತಿಂಗಳ ಅವಧಿಯಲ್ಲೇ ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದ್ರಲ್ಲೂ ಪಾಕಿಸ್ತಾನ ಮತ್ತು ಭಾರತದ್ದು ಪರವಾಣು ಯುದ್ಧವಾಗಿರುತ್ತಿತ್ತು. ನಾನು ಮಧ್ಯಸ್ಥಿಕೆ ವಹಿಸದೇ ಇದ್ದಿದ್ದರೇ ಪಾಕಿಸ್ತಾನದ ಪ್ರಧಾನಿ ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಮುಂದುವರಿದು… ಕಳೆದ 9 ತಿಂಗಳಲ್ಲಿ ಅಮೆರಿಕಕ್ಕೆ ಯಾರೊಬ್ಬರೂ ಅಕ್ರಮವಾಗಿ ಪ್ರವೇಶಿಸಿಲ್ಲ. ಅಕ್ರಮ ವಲಸಿಗರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಬೇರೆ ದೇಶಗಳ ಜನರನ್ನು ಕಾನೂನುಬದ್ದವಾಗಿ ಮಾತ್ರ ಅಮೆರಿಕಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತಿದೆ ಎಂದು ತಿಳಿಸಿದ್ರು

ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕು ಈ ಜುಲೈ 4ಕ್ಕೆ ಎರಡೂವರೆ ಶತಮಾನ ಕಳೆಯುತ್ತಿದೆ. ಆ ಹೊತ್ತಿಗೆ ನಾವು ಭೂಮಿಯ ಮೇಲೆ ಅತ್ಯಂತ ಅದ್ಭುತ, ಅಸಾಧಾರಣ. ಪ್ರಗತಿಪರ ರಾಷ್ಟ್ರವಾಗಿ ಹೊರಹೊಮ್ಮುತ್ತೇವೆ. ಈ ವರೆಗೂ ಕಾಣದ್ದನ್ನ ದೇಶದ ಜನ ಕಾಣುತ್ತಾರೆ. ಅಲ್ಲದೇ ಈ ಹಿಂದೆ ದೇಶದಲ್ಲಿ ಹತ್ಯೆ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿತ್ತು. ಈಗ ಕೊಲೆ ಪ್ರಮಾಣವು ಇತಿಹಾಸದಲ್ಲಿ ಅತಿದೊಡ್ಡ ಕುಸಿತ ಕಂಡಿದೆ ಎಂದು ಶ್ಲಾಘಿಸಿದರು.
ಕನಿಷ್ಠ ಮಟ್ಟಕ್ಕಿಳಿದ ಹಣದುಬ್ಬರ
ಮೂಲ ಹಣದುಬ್ಬರ ಕಳೆದ 5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದ್ದು, 2025ರ ಕೊನೆಯ ತ್ರೈಮಾಸಿಕದಲ್ಲಿ ಇದು ಶೇ1.75 ಕ್ಕೆ ಕುಸಿದಿದೆ ಎಂದಿದ್ದಾರೆ. ಅನಿಲ ಬೆಲೆ ಗ್ಯಾಲನ್ಗೆ 1.85 ಡಾಲರ್ಗೆ ಬಂದಿದೆ. ಕೇವಲ 1 ವರ್ಷದಲ್ಲಿ ವಿಶಿಷ್ಟ ಅಡಮಾನದ ವಾರ್ಷಿಕ ವೆಚ್ಚ 5,000 ಡಾಲರ್ಗಳಷ್ಟು ಕಡಿಮೆಯಾಗಿದೆ. ಷೇರು ಮಾರುಕಟ್ಟೆ ಒಂದೇ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಹೂಡಿಕೆದಾರರೆಲ್ಲರೂ ಲಾಭಗಳಿಸುತ್ತಿದ್ದಾರೆ ಎಂದ ಟ್ರಂಪ್, ಮಾಝೀ ಅಧ್ಯಕ್ಷ ಜೋ ಬೈಡನ್ ಸರ್ಕಾರದ ನೀತಿಗಳನ್ನ ಟೀಕಿಸಿದ್ರು.