ನೀರಿಗೆ ಬಿದ್ದ ಪತ್ನಿಯನ್ನು ರಕ್ಷಿಸಿದ ಪತಿ: ಸರಳ ಪ್ರೀತಿಯ ದಂಪತಿಗಳ ವಿಡಿಯೋ ವೈರಲ್

ನನ್ನ ಹೆಂಡತಿಗೆ ಈಜು ಬಾರದ ಕಾರಣ ಅಳುತ್ತಿದ್ದಳು. ಒಬ್ಬ ಪುರುಷನಾಗಿ, ನನ್ನ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ ಮೊದಲು ನನ್ನ ಹೆಂಡತಿಯನ್ನು ಉಳಿಸುವುದು. ಅವಳನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ಈ ವಿಡಿಯೋ ನೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಯಾವುದೇ ಪ್ರಣಯ ಭಾವನೆಗಳು ಅಥವಾ ಗಂಭೀರ ಪ್ರತಿಜ್ಞೆಗಳಿಲ್ಲದೆ, ಸರಳ ಜೀವನವನ್ನು ನಡೆಸುತ್ತಿರುವ ದಂಪತಿಗಳು ಇವರು ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ಗಂಡನನ್ನು ಪಡೆಯಲು ಆಕೆ ತುಂಬಾ ಪುಣ್ಯ ಮಾಡಿರಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಎಷ್ಟು ಮದುವೆಗಳು ಚಿಕ್ಕ ಚಿಕ್ಕ ಕಾರಣಕ್ಕೆ ಮುರಿದು ಹೋಗಿದೆ. ಇನ್ನು ಕೆಲವು ಕಡೆ ದೀರ್ಘಕಾಲ ಸಂಬಂಧವನ್ನೇ ಮುರಿಕೊಂಡು ಹೋಗುತ್ತಾರೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
