ಸಿನಿಮಾ ಶೂಟಿಂಗ್ ದೃಶ್ಯಕ್ಕೆ ಆಸ್ಪತ್ರೆ ಬಣ್ಣ: ಸುಳ್ಳು ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ ನೋಡಿ.

ನವದೆಹಲಿ: ಕಳೆದ ಮೂರು ದಿನಗಳಿಂದ ಬಿಹಾರದ ಖಾಸಗಿ ಆಸ್ಪತ್ರೆಯದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರೋಗಿಗಳನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಈ ರೀತಿಯ ಸಮವಸ್ತ್ರ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಿನಿ ಸ್ಕರ್ಟ್, ಸ್ಲೀವ್‌ಲೆಸ್ ಟಾಪ್ ಧರಿಸಿರುವ ಮಹಿಳಾ ನರ್ಸ್‌ಗಳು ಆಸ್ಪತ್ರೆಯಲ್ಲಿ ಓಡಾಡುತ್ತಿರುವ ಮೂರ್ನಾಲ್ಕು ವಿಡಿಯೋಗಳು ಹರಿದಾಡುತ್ತಿವೆ. ಬಹುತೇಕರು ವಿಡಿಯೋ ಶೀರ್ಷಿಕೆಯನ್ನು ಸತ್ಯವೆಂದು ನಂಬಿ, ಆಕ್ರೋಶದಿಂದ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ವಿಡಿಯೋಗಳ ಅಸಲಿ ಸತ್ಯವೇ ಬೇರೆಯಾಗಿದೆ.

ಈ ವಿಡಿಯೋಗಳು ಯಾವುದೇ ಆಸ್ಪತ್ರೆಯದ್ದಲ್ಲ. ಕೆಲ ಎಡಿಟೆಡ್ ವಿಡಿಯೋಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಈ ರೀತಿಯ ತಪ್ಪಾದ ವಿಷಯದೊಂದಿಗೆ ವಿಡಿಯೋಗಳು ವೈರಲ್ ಆಗುತ್ತಿವೆ. ಇದನ್ನೇ ನಿಜ ಅಂತ ನಂಬಿರುವ ನೆಟ್ಟಿಗರು, ನಾವು ಅವರನ್ನು ಸಿಸ್ಟರ್ಸ್ ಎಂದು ಕರೆಯುತ್ತವೆ. ಆದ್ರೆ ಇಂತಹ ಸಮವಸ್ತ್ರದ ಮೂಲಕ ಆಸ್ಪತ್ರೆ ಕೀಳುಮಟ್ಟಕ್ಕೆ ಇಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಪಡ್ಡೆಹುಡುಗರು ಒಂದು ಹೆಜ್ಜೆ ಮುಂದೆ ಹೋಗಿ, ಈ ಆಸ್ಪತ್ರೆ ಎಲ್ಲಿದೆ ಹೇಳಿ? ನಾವು ಹೋಗಿ ಅಡ್ಮಿಟ್ ಆಗುತ್ತೇವೆ? ಇವರನ್ನು ನೋಡಿದ್ರೆ ನಮಗೆ ಜ್ವರ ಬರುತ್ತೆ ಎಂದು ಪೋಲಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಅಸಲಿ ವಿಡಿಯೋದಲ್ಲಿ ಏನಿದೆ?
ಅಲೋನ್ (@loveraj1122) ಹೆಸರಿನ ಎಕ್ಸ್ ಖಾತೆಯಲ್ಲಿ ವೈರಲ್ ನರ್ಸ್‌ಗಳ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾದಕ ನರ್ಸ್ ಸುತ್ತಮುತ್ತ ಕ್ಯಾಮೆರಾ, ಲೈಟಿಂಗ್ ಅಳವಡಿಕೆ ಮಾಡಿರೋದನ್ನು ಗಮನಿಸಬಹುದು. ಓರ್ವ ವ್ಯಕ್ತಿ, ನರ್ಸ್‌ಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂಬುದನ್ನು ತೋರಿಸುತ್ತಿದ್ದಾರೆ. ಇದೆಲ್ಲವೂ ಇದೊಂದು ಶೂಟಿಂಗ್ ಎಂಬುದನ್ನು ದೃಢಪಡಿಸುತ್ತದೆ. ವೈರಲ್ ಆಗಿರುವ ಮೂರ್ನಾಲ್ಕು ವಿಡಿಯೋಗಳಲ್ಲಿ ಹೆಗಲಿಗೆ ಬ್ಯಾಗ್ ಹಾಕಿಕೊಂಡಿರುವ ವ್ಯಕ್ತಿಯನ್ನು ನೋಡಬಹುದು.ಈ ಶೂಟಿಂಗ್ ಯಾವ ಸಿನಿಮಾದ್ದು ಮತ್ತು ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದ್ರೆ ಕೆಲವರು ತಪ್ಪಾದ ಶೀರ್ಷಿಕೆ ಜೊತೆ ವಿಡಿಯೋ ಶೇರ್ ಮಾಡಿಕೊಂಡಿರುವ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು.