ಬೆಂಗಳೂರಲ್ಲಿ ಭೀಕರ ಅಪಘಾತ: ಕೆಟ್ಟು ನಿಂತ ಕಾರಿಗೆ, ಕ್ಯಾಂಟರ್ ಡಿಕ್ಕಿಯಾಗಿ ಡ್ಯಾನ್ಸರ್ ಸುಧೀಂದ್ರ ಸಾವು!

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಕೆಟ್ಟು ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಡ್ಯಾನ್ಸರ್ ಸುಧೀಂದ್ರ ಸಾವನಪ್ಪಿದ್ದಾರೆ. ರಸ್ತೆಯ ಮಧ್ಯೆ ಡ್ಯಾನ್ಸರ್ ಸುಧೀಂದ್ರ ಅವರ ಕಾರು ಕೆಟ್ಟು ನಿಂತಿತು. ಕಾರು ಪರಿಶೀಲನೆಯ ವೇಳೆ ವೇಗವಾಗಿ ಬಂದಂತಹ ಕ್ಯಾಂಟರ್ ಡಿಕ್ಕಿ ಹೊಡೆದಿದೆ.

ನೆಲಮಂಗಲ ತಾಲೂಕಿನ ಪೇಮ್ಮನಹಳ್ಳಿ ಬಳಿ ಈ ಒಂದು ದುರ್ಘಟನೆ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ ಕ್ಯಾಂಟರ್ ಗುದ್ದಿದ ರಬಸಕ್ಕೆ ಸ್ಥಳದಲ್ಲೇ ಡ್ಯಾನ್ಸರ ಸುಧೀಂದ್ರ ಸಾವನಪ್ಪಿದ್ದಾರೆ.ಮೃತ ಸುಧೀಂದ್ರ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು.ಅಪಘಾತದ ಕುರಿತು ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.