ಭೀಕರ ಅಪಘಾತ: ಲಾರಿ ಚಕ್ರಗಳಡಿ ಸಿಲುಕಿ ಕಾಲೇಜು ವಿದ್ಯಾರ್ಥಿ ಸಾವು

ಭಟ್ಕಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನಗುಂಡಿ ಕ್ರಾಸ್ ಬಳಿ ಬುಧವಾವಾರ ತಡರಾತ್ರಿ ಸಂಭವಿಸಿದೆ. ಭಟ್ಕಳ ಫಿರ್ದೌಸ್ ನಗರ ನಿವಾಸಿ ಅನೀಸ್ ಮೊಹ್ತಿಶಂ ಎಂಬವರ ಪುತ್ರ ಮುಹಮ್ಮದ್ ಮೊಹ್ತೆಶಾಂ (18) ಮೃತಪಟ್ಟ ಯುವಕ
ತೆಂಗಿನಗುಂಡಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಮುಹಮ್ಮದ್ ಮೊಹ್ತೆಶಾಂ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹೆದ್ದಾರಿ ಪ್ರವೇಶಿಸಿದ ವೇಳೆ ಕೇರಳದಿಂದ ಮುಂಬೈನತ್ತ ಸಾಗುತ್ತಿದ್ದ ಪ್ಲೈವುಡ್ ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ , ಲಾರಿಯ ಚಕ್ರಗಳಡಿ ಸಿಲುಕಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮುಹಮ್ಮದ್ ಮೊಹ್ತೆಶಾಂ ಅಲಿ ಪಬ್ಲಿಕ್ ಪಬ್ಲಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಈ ಕುರಿತು ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
