ಹಾಲಿವುಡ್ ನಟಿ ಎಮ್ಮಾ ಥಾಂಪ್ಸನ್ ಡೇಟಿಂಗ್ ಆಹ್ವಾನವನ್ನು ತಿರಸ್ಕರಿಸಿದ್ದರು: ಡೊನಾಲ್ಡ್ ಟ್ರಂಪ್ ಅವರ ರಹಸ್ಯ ಬಹಿರಂಗ

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರೀ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ವಿಶ್ವದಲ್ಲೇ ಹೆಚ್ಚು ಸದ್ದು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಇವರು ವಿದೇಶಗಳ ಮೇಲೆ ಹೊರಿಸುತ್ತಿರುವ ಸುಂಕದ ಹೊರೆ.

ಎಸ್, ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಅವರು, ತಾವು ಏನು ಮಾಡುತ್ತಿದ್ದಾರೆ ಅನ್ನೋದನ್ನ ಮರೆತವರ ರೀತಿ ವರ್ತಿಸುತ್ತಿದ್ದಾರೆ.
ಯಾಕಂದ್ರೆ ಒಂದಾದ ನಂತರ ಒಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದು, ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ಭಾರೀ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕದ ಅಧ್ಯಕ್ಷರ ಈ ರೀತಿಯ ವರ್ತನೆ ಬಗ್ಗೆ ಸ್ವತಃ ಅಮೆರಿಕದ ನೆಲದಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದು ರಾಜಕೀಯ ಒಂದೆಡೆ ಆದ್ರೆ ಟ್ರಂಪ್ ಅವರು ವೈಯಕ್ತಿಕ ವಿಚಾರದಲ್ಲೂ ಈಗ ಸುದ್ದಿಯಲ್ಲಿದ್ದಾರೆ. ಅದೇನೆಂದು ನಿಮಗೆ ಸಂಪೂರ್ಣವಾಗಿ ತಿಳಿಸ್ತೀವಿ ಈ ಸುದ್ದಿ ಪೂರ್ತಿ ಓದಿ. ಹೌದು, ನಾನೇ ದೊಡ್ಡಣ್ಣ, ನಾನೇ ಮೇಧಾವಿ ಎಂದು ಮೆರೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗೊಂದು ವೈಯಕ್ತಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.
ಹಾಲಿವುಡ್‌ನ ಪ್ರಸಿದ್ಧ ನಟಿ ಮತ್ತು ‘ಹ್ಯಾರಿ ಪಾಟರ್’ ಖ್ಯಾತಿಯ ಎಮ್ಮಾ ಥಾಂಪ್ಸನ್ ಇತ್ತೀಚೆಗೆ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ, ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮಗೆ ಕರೆ ಮಾಡಿದ್ದನ್ನು ಬಹಿರಂಗಪಡಿಸಿದರು.
ಅದರಲ್ಲಿ ಟ್ರಂಪ್ ತಮ್ಮ ಐಷಾರಾಮಿ ಸ್ಥಳಕ್ಕೆ ಬಂದು ಒಟ್ಟಿಗೆ ಊಟ ಮಾಡುವಂತೆ ಕೇಳಿಕೊಂಡಿದ್ದರು, ಟ್ರಂಪ್ ಡೇಟಿಂಗ್ಗೆ ಕರೆದಿದ್ದರು ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ ಟ್ರಂಪ್ ಅವರೊಂದಿಗೆ ಡೇಟಿಂಗ್ ಮಾಡಲು ಒಪ್ಪಿಕೊಂಡಿದ್ದರೆ, ಅಮೆರಿಕದ ರಾಜಕೀಯದ ಮುಖವೇ ಬದಲಾಗುತ್ತಿತ್ತು ಎಂದು ನಟಿ ಹೇಳಿದ್ದಾರೆ.
ಎಮ್ಮಾ ಥಾಂಪ್ಸನ್ ಇತ್ತೀಚೆಗೆ ತಮ್ಮ ‘ಪ್ರೈಮರಿ ಕಲರ್ಸ್’ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಡೊನಾಲ್ಡ್ ಟ್ರಂಪ್ ತಮಗೆ ಕರೆ ಮಾಡಿದ್ದರು ಮತ್ತು ಆ ಸಮಯದಲ್ಲಿ ಅವರು ಕೆನ್ನೆತ್ ಬ್ರಾನಾಗ್‌ನಿಂದ ವಿಚ್ಛೇದನ ಪಡೆದಿದ್ದರು ಎಂದು ಬಹಿರಂಗಪಡಿಸಿದ್ದಾರೆ. “ನಾನು ನನ್ನ ವ್ಯಾನ್‌ನಲ್ಲಿ ಕುಳಿತಿದ್ದಾಗ, ಫೋನ್ ರಿಂಗಾಯಿತು. ಇನ್ನೊಂದು ಕಡೆಯಿಂದ ಒಂದು ಧ್ವನಿ ಬಂದಿತು, ಹಲೋ, ನಾನು ಡೊನಾಲ್ಡ್ ಟ್ರಂಪ್, ಆದರೆ ಅದು ತಮಾಷೆ ಎಂದು ನಾನು ಭಾವಿಸಿದೆ.
“ನಾನು ನಿಮಗೆ ಹೇಗೆ ಸಹಾಯ ಮಾಡಲಿ ಎಂದು ಕೇಳಿದೆ. ಆಗ ಅವರು, ನೀವು ನನ್ನ ಐಷಾರಾಮಿ ಸ್ಥಳಗಳಲ್ಲಿ ಒಂದಕ್ಕೆ ಬಂದು ತಂಗಬೇಕೆಂದು ನಾನು ಬಯಸುತ್ತೇನೆ. ಬಹುಶಃ ನಾವು ಒಟ್ಟಿಗೆ ಊಟ ಮಾಡಬಹುದು” ಎಂದರು. ಆದರೆ ನಾನು ಯಾವುದೇ ಹಿಂಜರಿಕೆಯಿಲ್ಲದೆ “ಇದು ತುಂಬಾ ಚೆನ್ನಾಗಿದೆ. ತುಂಬಾ ಧನ್ಯವಾದಗಳು. ನಾನು ನಿಮ್ಮನ್ನು ಮತ್ತೆ ಸಂಪರ್ಕಿಸುತ್ತೇನೆ” ಎಂದು ಕರೆ ಕಟ್ ಮಾಡಿದೆ ಎಂದು ನಟಿ ಹೇಳಿದ್ದಾರೆ.
ಈ ಮೂಲಕ ಟ್ರಂಪ್ ಅವರ ಡೇಟಿಂಗ್ ಸೀಕ್ರೆಟ್ ಅನ್ನು ನಟಿ ರಿವೀಲ್ ಮಾಡಿದ್ದಾರೆ..
