ಕಾಶ್ಮೀರ ದಲ್ಲಿ ಉಗ್ರರಿಂದ ಹಿಂದೂ ಯುವಕ ನಾ ಹತ್ಯೆ :ಹಿಂದೂ ಮಹಾ ಸಭಾ ಖಂಡನೆ

ಮಂಗಳೂರು : ಕಾಶ್ಮೀರದಲ್ಲಿ ಪ್ರವಾಸದಲ್ಲಿದ್ದ ಶಿವಮೊಗ್ಗದ ಹಿಂದೂ ದಂಪತಿಯ ಗಂಡನನ್ನು ಉಗ್ರರು ಗುಂಡಿಟ್ಟು ಕೊಂದು, ಹೆಂಡತಿಗೆ “ನಿನ್ನನ್ನು ಬಿಡುತ್ತೆನೆ ಮೋದಿಗೆ ಹೋಗಿ ಈ ಸುದ್ದಿ ತಲುಪಿಸು” ಎಂಬ ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಂದೂ ಮಹಾಸಭಾ ಕರ್ನಾಟಕ ಘಟಕ, “ಯಾವ ಸರ್ಕಾರ ಬಂದರೂ ಹಿಂದೂಗಳ ರಕ್ಷಣೆ ಮಾತ್ರ ಶೂನ್ಯ. ಸರ್ಕಾರದ ವೈಫಲ್ಯವನ್ನು ಈ ಘಟನೆಯೇ ಸಾರುತ್ತಿದೆ” ಎಂದು ಭಾರೀ ಆರೋಪ ಮಾಡಿದೆ.

ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂದೂಗಳ ಮೇಲೆ ನಡೆಯಿರುವ ಹಲ್ಲೆ, ಕೊಲೆ, ಹಾಗೂ ಆಸ್ತಿ ದರೋಡೆ ನಿಗ್ರಹಕ್ಕೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಕೂಡ ಅವರ ಅಭಿಪ್ರಾಯ.
“ಹಿಂದೂಗಳು ಯಾವ ಸರ್ಕಾರ ರಕ್ಷಣೆ ನೀಡುತ್ತದೆ ಎಂದು ನಂಬಿದ್ದರು, ಆದರೆ ಇಂದು ಆ ಸರ್ಕಾರವೇ ನೋಡುಗರಾಗಿದೆಯಾ?” ಎಂದು ಜನ ಸಾಮಾನ್ಯರು ಕಹಿ ಪ್ರಶ್ನೆ ಎಸೆದಿದ್ದಾರೆ.
ಹೆಚ್ಚು ಸಮಯ ಕಳೆದುಹೋಗುವುದಕ್ಕೂ ಮುನ್ನ, ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕು. ಈ ನಿರ್ದಯ ಹತ್ಯೆಗೆ ಪ್ರತಿಯಾಗಿ ಕನಿಷ್ಠ 10 ಉಗ್ರರ ಶಿರಚ್ಛೇದ 24 ಗಂಟೆಗಳೊಳಗೆ ನಡೆಯಬೇಕೆಂಬುದು ಹಿಂದೂ ಮಹಾಸಭೆಯ ಬೇಡಿಕೆ. “ಇಂತಹ ಪಾಪಿಗಳಿಗೆ ಕಾನೂನು ಪದ್ಧತಿ ಸಾಲದು, ಗುಂಡಿನ ನ್ಯಾಯವೇ ಸೂಕ್ತ” ಎಂದು ರಾಜ್ಯಾಧ್ಯಕ್ಷ ಡಾ. ಎಲ್.ಕೆ. ಸುವರ್ಣ ಒತ್ತಾಯಿಸಿದ್ದಾರೆ.
“ಈ ಕಾರ್ಯಗಳು ನಡೆದಿಲ್ಲ ಎಂದರೆ, ಜನತೆ ಇತ್ತವರೆಗೆ ಕೇಂದ್ರ ಸರ್ಕಾರದ ಮೇಲೆ ಇಟ್ಟುಕೊಂಡಿರುವ ನಂಬಿಕೆ ಸಂಪೂರ್ಣವಾಗಿ ನಾಶವಾಗುತ್ತದೆ” ಎಂಬ ತೀವ್ರ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
