Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಿಂದೂ ಮಹಾಸಭಾ ಹೋರಾಟ ಆರಿಕ್ಕಾಡಿ ಟೋಲ್ ವಿವಾದಕ್ಕೆ ಬಿಗ್ ವಿಕ್ಟರಿ

Spread the love

ಆರಿಕ್ಕಾಡಿ: ಸಪ್ತಭಾಷಾ ಸಂಗಮ ಭೂಮಿಯ ಜನರ ದೀರ್ಘಕಾಲದ ಹೋರಾಟಕ್ಕೆ ಇಂದು ದೊಡ್ಡ ಮಟ್ಟದ ಜಯ ಸಿಕ್ಕಿದೆ. ಆರಿಕ್ಕಾಡಿ ಭಾಗದಲ್ಲಿ ನಡೆಯುತ್ತಿದ್ದ ಜನವಿರೋಧಿ ಟೋಲ್ ಸಂಗ್ರಹದ ವಿರುದ್ಧ ಹಿಂದೂ ಮಹಾಸಭಾ – ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ‘ಟೋಲ್ ಗೆ ಲಗ್ಗೆ ಇಟ್ಟಿತ್ತು. ಜನಸಾಮಾನ್ಯರ ಮೇಲೆ ಹೇರಲಾಗುತ್ತಿದ್ದ ಈ ಆರ್ಥಿಕ ಹೊರೆಯ ವಿರುದ್ಧ ಸಂಘಟನೆಯು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು.

ಹಿಂದೂ ಮಹಾಸಭಾದ ಮನವಿಗೆ ಮತ್ತು ಜನರ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರವು, ಕೇವಲ 48 ಗಂಟೆಗಳ ಒಳಗಾಗಿ ಟೋಲ್ ಸಂಗ್ರಹವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಕ್ರಮ ಕೈಗೊಂಡ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ (Ministry of Road Transport and Highways) ನಾವು ಈ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ. ಎಲ್. ಕೆ. ಸುವರ್ಣ ಅವರು, “ಇದು ಕೇವಲ ಸಂಘಟನೆಯ ಜಯವಲ್ಲ, ಬದಲಾಗಿ ಅರಿಕ್ಕಾಡಿಯ ಪ್ರತಿಯೊಬ್ಬ ನಾಗರಿಕನ ಮತ್ತು ಸಪ್ತಭಾಷಾ ಸಂಗಮ ಭೂಮಿಯ ಸಮಸ್ತ ಜನತೆಯ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ. ಇದರಿಂದ ಇತರ ಪಕ್ಷಗಳ ಒಳಸಂಚಿನ ರಾಜಕಾರಣ ಹಾಗೂ ಧರ್ಮ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿದ್ದ ನಟನೆಯ ರಾಜಕಾರಣಕ್ಕೆ ಹಿಂದೂ ಮಹಾಸಭಾ ಪೂರ್ಣವಿರಾಮ ನೀಡಿದೆ. ಧರ್ಮ ಮತ್ತು ಜನಹಿತಕ್ಕಾಗಿ ನಮ್ಮ ಹೋರಾಟ ನಿರಂತರ” ಎಂದು ಡಾ. ಎಲ್. ಕೆ. ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *