Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳದಲ್ಲಿ ಹಿಜಾಬ್ ಪ್ರಕರಣ: ಅನುಮತಿ ನಿರಾಕರಣೆಯಿಂದ ಮಾನಸಿಕವಾಗಿ ಕುಗ್ಗಿದ ವಿದ್ಯಾರ್ಥಿನಿ; ಶಾಲೆ ತೊರೆದು ಟಿಸಿ ಪಡೆದು ನಿರ್ಗಮನ

Spread the love

ತಿರುವನಂತಪುರಂ : ಕೇರಳದ ಶಾಲೆಯೊಂದರಲ್ಲಿ ಹಿಜಾಬ್ ಪ್ರಕರಣ ಭಾರೀ ಸದ್ದನ್ನು ಮಾಡುತ್ತಿದೆ. ಈ ವಿದ್ಯಮಾನಕ್ಕೆ ರಾಜಕೀಯ ಬಣ್ಣ ಬಂದಿರುವುದು, ಕೇರಳ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಹಿಜಾಬ್ ಧರಿಸುವುದಕ್ಕೆ ಶಾಲೆಯಲ್ಲಿ ಅನುಮತಿಯನ್ನು ನೀಡಬೇಕು ಎನ್ನುವ ಆದೇಶಕ್ಕೆ, ಆಡಳಿತ ಮಂಡಳಿ ಪಾಲಿಸಲು ಸಾಧ್ಯವಿಲ್ಲ ಎಂದಿದೆ.

ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಶಾಲೆಯೊಂದರ ವಿದ್ಯಾರ್ಥಿನಿ, ಹಿಜಾಬ್ ಧರಿಸಲು ಅನುಮತಿಯನ್ನು ಕೇಳಿದ್ದಳು. ಅದಕ್ಕೆ, ಶಾಲಾ ಆಡಳಿತ ಮಂಡಳಿ ನಿರಾಕರಿಸಿರುವ ಹಿನ್ನಲೆಯಲ್ಲಿ, ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಳು. ಸರ್ಕಾರದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಬೇಡಿಕೆಯನ್ನು ಈಡೇರಿಸುವಂತೆ ಸೂಚಿಸಿದ್ದರು. ಆದರೆ, ಸಮವಸ್ತ್ರ ಪದ್ದತಿಯ ಹಿನ್ನಲೆಯಲ್ಲಿ, ಸರ್ಕಾರದ ಆದೇಶವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ ಎಂದು ಶಾಲೆ ಹೇಳಿದೆ.

ಈ ವಿಚಾರವನ್ನು ಧಾರ್ಮಿಕ ಮತ್ತು ರಾಜಕೀಯವಾಗಿ ಬಳಸಿಕೊಳ್ಳಲು ಕೆಲವರು ಮುಂದಾದ ಹಿನ್ನಲೆಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ವಿದ್ಯಾರ್ಥಿನಿ, ಆ ಶಾಲೆಯನ್ನು ತೊರೆದಿದ್ದಾಳೆ. ಅಲ್ಲಿಂದ ಟಿಸಿ ( ವರ್ಗಾವಣೆ ಪತ್ರ ) ಪಡೆದು ಬೇರೊಂದು ಶಾಲೆಗೆ ಹೋಗಲು ನಿರ್ಧರಿಸಿದ್ದಾಳೆ.

ವಿದ್ಯಾರ್ಥಿನಿಯ ತಂದೆ ಅನಸ್ ನೈನಾ ಅವರು, ತಮ್ಮ ಮಗಳಿಗೆ ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸುವುದಾಗಿ ಹೇಳಿದ್ದಾರೆ. ಇವರು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಘಟನೆಯ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯ ನಿರ್ಧಾರ ನೋವು ತಂದಿದೆ ಎಂದಿದ್ದಾರೆ.

“ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದು ನಿಮ್ಮ ಮೂಲಭೂತ ಹಕ್ಕು ಎಂದೇ ಸರ್ಕಾರವೇ ಹೇಳಿತ್ತು. ಆದರೆ, ಹಿಜಾಬ್ ಧರಿಸಲು ಅನುಮತಿಯನ್ನು ನೀಡಿದರೆ, ಇತರ ವಿದ್ಯಾರ್ಥಿಗಳು ಹೆದರಬಹುದು ಎಂದು ಶಾಲೆಯ ಶಿಕ್ಷಕರು, ನನ್ನ ಮಗಳಿಗೆ ಹೇಳಿದ್ದಾರೆ. ಶಿಕ್ಷಕರ ಮಾತು ಆಕೆಗೆ ತೀವ್ರ ನೋವನ್ನು ತಂದಿದೆ” ಎಂದು ಅನಸ್ ನೈನಾ, ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷರ ಹಸ್ತಕ್ಷೇಪ ಧಾರ್ಮಿಕ ಸ್ವರೂಪ ಪಡೆದಿರುವುದು ನಮಗೆ ನೋವನ್ನು ತಂದಿದೆ. ನನ್ನ ಮಗಳಿಗೆ ಈ ಘಟನೆ, ಮಾನಸಿಕ ಯಾತನೆಯನ್ನು ಉಂಟು ಮಾಡಿದೆ. ಇದರಿಂದಾಗಿ, ಬೇರೆ ಶಾಲೆಗೆ ವರ್ಗಾಯಿಸುವ ನಿರ್ಧಾರಕ್ಕೆ ಬರಬೇಕಾಯಿತು ಎಂದು ಅನಸ್ ಹೇಳಿದ್ದಾರೆ.

ಶಾಲೆಯ ಆಡಳಿತ, ಶಿಕ್ಷಕರ ಸಂಘ ಮತ್ತು ಇತರರು ನಮ್ಮ ಹೆಸರು ಮತ್ತು ಧರ್ಮವನ್ನು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಕದಡಲು ಬಳಸಿಕೊಳ್ಳಬಾರದು ಎಂದು ಅನಸ್ ಮನವಿಯನ್ನು ಮಾಡಿದ್ದಾರೆ. CBSE ಸಿಲ್ಲಬಸ್ ಹೊಂದಿರುವ ಸೈಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ಈ ವಿದ್ಯಮಾನ ನಡೆದಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿ, ಸುಮಾರು ನಾಲ್ಕು ತಿಂಗಲು ಶಾಲಾ ಯೂನಿಫಾರಂನಲ್ಲೇ ಬಂದಿದ್ದಳು. ಆದರೆ, ಅಕ್ಟೋಬರ್ ಏಳರಂದು ಇದ್ದಕ್ಕಿದ್ದಂತೆಯೇ, ಹಿಜಾಬ್ ಧರಿಸಿ ಬಂದಿದ್ದಳು.


Spread the love
Share:

administrator

Leave a Reply

Your email address will not be published. Required fields are marked *