ಸ್ಕ್ಯಾಮರ್‌ಗಳಿಂದ ನಿಮ್ಮ ಜಿಮೇಲ್ ಖಾತೆ ರಕ್ಷಿಸಲು ಇವೇ ಮುಖ್ಯ ಸಲಹೆಗಳು

ಬೆಂಗಳೂರು: ಜಿಮೇಲ್ಹ್ಯಾಕ್ (Gmail Hack) ಮಾಡುವುದು ಇಂದು ತುಂಬಾ ಸುಲಭ. ನಿಮ್ಮ ಗೌಪ್ಯತೆಯನ್ನು ನೀವು ನೋಡಿಕೊಳ್ಳದಿದ್ದರೆ ಸ್ಕ್ಯಾಮರ್‌ಗಳು ಜಿಮೇಲ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಇಂದು ಜಿಮೇಲ್ ಕೇವಲ ಇಮೇಲ್‌ಗೆ ಸೀಮಿತವಾಗಿಲ್ಲ. ನಿಮ್ಮ ಯೂಟ್ಯೂಬ್, ಗೂಗಲ್ ಡ್ರೈವ್, ಫೋಟೋಗಳು, ಡಾಕ್ಸ್ ಮತ್ತು ಬ್ಯಾಂಕಿಂಗ್ ವಿವರಗಳನ್ನು ಸಹ ಇದಕ್ಕೆ ಲಿಂಕ್ ಮಾಡಬಹುದು.

ಜಿಮೇಲ್ ಹ್ಯಾಕ್ ಆದಲ್ಲಿ, ನಿಮ್ಮ ವೈಯಕ್ತಿಕ ಡೇಟಾ ಸೋರಿಕೆ ಆಗುತ್ತದೆ. ಇಮೇಲ್‌ಗಳು, ದಾಖಲೆಗಳು, ಫೋಟೋಗಳು ಅಥವಾ ಕಾಂಟೆಕ್ಟ್ ಎಲ್ಲವೂ ಹ್ಯಾಕರ್ಗಳ ಕೈ ಸೇರುತ್ತದೆ. ಬ್ಯಾಂಕ್ ವಂಚನೆಯ ಅಪಾಯ ಕೂಡ ಇದೆ. ಜಿಮೇಲ್ ಅಥವಾ ಬ್ಯಾಂಕ್ ವಿವರಗಳಿಗೆ ಸಂಬಂಧಿಸಿದ OTP ಮೂಲಕ ನೀವು ವಂಚನೆಗೊಳಗಾಗಬಹುದು.
ಅಷ್ಟೇ ಅಲ್ಲದೆ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೂಡ ಹ್ಯಾಕ್ ಮಾಡಬಹುದು. ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಜಿಮೇಲ್ಗೆ ಲಿಂಕ್ ಆಗಿದ್ದರೆ, ಅವುಗಳು ಸಹ ಅಪಾಯಕ್ಕೆ ಸಿಲುಕುತ್ತದೆ. ಫಿಶಿಂಗ್ ಅಥವಾ ಸ್ಪ್ಯಾಮ್ ಕಳುಹಿಸಬಹುದು. ಹ್ಯಾಕರ್‌ಗಳು ನಿಮ್ಮ ಖಾತೆಯಿಂದ ಇತರರಿಗೆ ನಕಲಿ ಇಮೇಲ್‌ಗಳನ್ನು ಕಳುಹಿಸಬಹುದು.
ನಿಮ್ಮ ಜಿಮೇಲ್ ಹ್ಯಾಕ್ ಆಗಿದೆಯೇ ಎಂದು ತಿಳಿಯುವುದು ಹೇಗೆ?
ನಿಮ್ಮ ಜಿಮೇಲ್ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸಲು ಮೊದಲು ನೀವು ಲಾಸ್ಟ್ ಅಕೌಂಟ್ ಪರಿಶೀಲಿಸಬೇಕು. ಇದಕ್ಕಾಗಿ, ನಿಮ್ಮ ಜಿಮೇಲ್ ತೆರೆಯಿರಿ. ಕೆಳಗಿನ ಬಲಭಾಗದಲ್ಲಿ ನೀಡಲಾದ ಲಾಸ್ಟ್ ಅಕೌಂಟ್ ಚಟುವಟಿಕೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಲಾಗಿನ್ ಹಿಸ್ಟರಿ ಅನ್ನು ವೀಕ್ಷಿಸಲು ವಿವರಗಳ ಮೇಲೆ ಕ್ಲಿಕ್ ಮಾಡಿ ನೋಡಿ. ಅಥವಾ ಲಿಂಕ್‌ಗೆ ಹೋಗಿ https://myaccount.google.com/security-checkup .
ಲಾಗಿನ್ ಸಾಧನ, ಅಪ್ಲಿಕೇಶನ್‌ಗಳು, ಪಾಸ್‌ವರ್ಡ್‌ಗಳು ಆಯ್ಕೆಗಳನ್ನು ಇಲ್ಲಿಂದ ಪರಿಶೀಲಿಸಿ. ಇದರಲ್ಲಿ ನೀವು ಅಸಾಮಾನ್ಯ ಚಟುವಟಿಕೆ ಎಚ್ಚರಿಕೆಯನ್ನು ನೋಡುತ್ತೀರಿ. ಅನುಮಾನಾಸ್ಪದ ಲಾಗಿನ್ ಇದ್ದಾಗ ಗೂಗಲ್ ಸಾಮಾನ್ಯವಾಗಿ ನಿಮಗೆ ಇಮೇಲ್ ಕಳುಹಿಸುತ್ತದೆ.
ಜಿಮೇಲ್ ಹ್ಯಾಕಿಂಗ್ ತಡೆಯುವುದು ಹೇಗೆ?
ನಿಮ್ಮ ಜಿಮೇಲ್ ಐಡಿಗೆ ಬಲವಾದ ಪಾಸ್‌ವರ್ಡ್ ಹೊಂದಿಸಿ. ಈ ರೀತಿಯ Aa45#x@z ಪಾಸ್‌ವರ್ಡ್ ಬಳಸಿ. ಟು- ಸ್ಟೆಪ್ ವೆರಿಫಿಕೇಷನ್ ಅನ್ನು (2FA) ಆನ್ ಮಾಡಿ. ಇದಲ್ಲದೆ, ನಕಲಿ ಇಮೇಲ್‌ಗಳು ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಸಾರ್ವಜನಿಕ ವೈ- ಫೈ ಮೂಲಕ ಜಿಮೇಲ್‌ಗೆ ಲಾಗಿನ್ ಆಗಬೇಡಿ. ಆಂಟಿವೈರಸ್ ಮತ್ತು ಮೊಬೈಲ್ ಭದ್ರತಾ ಅಪ್ಲಿಕೇಶನ್‌ಗಳನ್ನು ಬಳಸಿ.
ನಿಮ್ಮ ಜಿಮೇಲ್ ಅನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಯಾವುದೇ ಡೇಟಾವನ್ನು ಕದ್ದಿದ್ದಾರೆಯೇ? ಎಂಬುದನ್ನು ಪರಿಶೀಲಿಸಲು ಮತ್ತೊಂದು ವಿಧಾನ ಕೂಡ ಇದೆ. ಹ್ಯಾವ್ ಐ ಬೀನ್ ಪನ್ಡ್ ಎಂಬ ಉಚಿತ, ವಿಶ್ವಾಸಾರ್ಹ ವೆಬ್‌ಸೈಟ್‌ನ ಸಹಾಯದಿಂದ ನೀವು ಅದನ್ನು ಸುಲಭವಾಗಿ ಪರಿಶೀಲಿಸಬಹುದು. ನಿಮ್ಮ ಇಮೇಲ್ ಐಡಿ ಯಾವುದೇ ಡೇಟಾ ಉಲ್ಲಂಘನೆಯ ಭಾಗವಾಗಿದೆಯೇ ಎಂದು ಈ ವೆಬ್‌ಸೈಟ್ ನಿಮಗೆ ತಿಳಿಸುತ್ತದೆ.
