ನಕಲಿ ಖಾತೆಗಳ ಮೂಲಕ ಮಹಿಳೆಯರಿಗೆ ಕಿರುಕುಳ: ಸಂಡೂರಿನಲ್ಲಿ 13,500 ಸ್ಕ್ರೀನ್ಶಾಟ್ಗಳೊಂದಿಗೆ ವ್ಯಕ್ತಿ ಬಂಧನ

ಮುಂಬೈ: ಮಹಿಳೆಯರ ಹೆಸರಿನಲ್ಲಿನಕಲಿ ಖಾತೆಗಳನ್ನು ರಚಿಸಿ, ಅವರ ಮಾನಹಾನಿ ಉಂಟುಮಾಡುವ ಉದ್ದೇಶದಿಂದ ಅಶ್ಲೀಲ ವಿಷಯವನ್ನು ಪೋಸ್ಟ್ ವ್ಯಕ್ತಿಯೊಬ್ಬನನ್ನು ಕರ್ನಾಟಕದ ಸಂಡೂರಿನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಶುಭಂ ಕುಮಾರ್ಮನೋಜ್ ಪ್ರಸಾದ್ ಸಿಂಗ್ (25) ಬಂಧಿತ. ಈತ ದೆಹಲಿಯಲ್ಲಿ ಕಂಪ್ಯೂಟರ್ ಸಾಫ್ಟ್ಸ್ಟಿಲ್ಸ್ ನಲ್ಲಿ ಡಿಪ್ಲೋಮಾ ಪಡೆದಿದ್ದ. ಸಂಡೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
‘ತನ್ನ ಹೆಸರಲ್ಲಿನಕಲಿ ಖಾತೆ ರಚಿಸಿ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವುದಾಗಿ ವಿದ್ಯಾರ್ಥಿನಿಯೊಬ್ಬಳು ದೂರು ದಾಖಲಿಸಿದ ಬಳಿಕ ಈತನಿಗೆ ಬಲೆ ಬೀಸಿದೆವು. ಗೂಗಲ್ನಿಂದ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ ಬಂಧಿಸಿದೆವು. ಈತ ಮಹಿಳೆಯರ ಹೆಸರಿನಲ್ಲಿ ಇಂಥ 11 ನಕಲಿ ಖಾತೆಗಳನ್ನು ಹಾಗೂ 100ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಸೃಷ್ಟಿಸಿರುವುದು ತಿಳಿದುಬಂದಿದೆ.
ಈತನ ಫೋನ್ನಿಂದ ಮಹಿಳೆಯರ 13,500 ಸ್ಟೀನ್ ಶಾಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.’ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಮಹಿಳೆಯರಿಗೆ ಕಿರುಕುಳ ಕೊಡುತ್ತಿದ್ದೆ. ಅವರು ಒಪ್ಪದಾಗ ನಕಲಿ ಖಾತೆ ಸೃಷ್ಟಿಸಿ ಮಾನಹಾನಿ ಮಾಡುತ್ತಿದ್ದೆ’ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.