Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್

Spread the love

ಪಾಟ್ನಾ: ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಶಾಕಿಂಗ್‌ ಘಟನೆಯೊಂದು ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ (Postmortem) ಕೊಂಡು ಹೋಗುವಾಗ ಆಸ್ಪತ್ರೆಯ ಸಿಬ್ಬಂದಿ ನೆಲದಲ್ಲಿಯೇ ಎಳೆದುಕೊಂಡು ಹೋಗಿರುವ‌ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಬೆಟ್ಟಿಯಾ ಪಟ್ಟಣದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (GMCH) ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿ ಅಪರಿಚಿತ ಶವವೊಂದನ್ನು ಸ್ಟ್ರೆಚರ್‌ ಬಳಸದೇ ನೆಲದಲ್ಲೇ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಶವವನ್ನು ಒಂದು ಮಹಡಿಯಿಂದ ಮೇಲಿನ ಮಹಡಿಗೆ ಮೆಟ್ಟಿಲುಗಳ ಮೂಲಕ ಎಳೆದುಕೊಂಡು ಹೋಗುವುದು ಕಾಣಿಸಿಕೊಂಡಿದೆ. ಮೆಟ್ಟಿಲುಗಳ ಕೆಳೆಗೆ ಸ್ಟ್ರೆಚರ್‌ ಕೂಡಾ ಇರುವುದು ಕಂಡುಬಂದಿದೆ.

ಬಹುಶಃ ಸಿಬ್ಬಂದಿ ಮೆಟ್ಟಿಲು ಪ್ರಾರಂಭವಾಗುವವರೆಗೆ ಶವವನ್ನು ಸ್ಟ್ರೆಚರ್‌ನಲ್ಲಿ ತಂದು, ನಂತರ ಮೆಟ್ಟಿಲು ಹತ್ತುವಾಗ ಶವವನ್ನು ನೆಲಕ್ಕೆ ಇಳಿಸಿ, ಅಲ್ಲಿಂದ ಎಳೆದುಕೊಂಡು ಹೋಗಿರಬಹುದು ಎನ್ನಲಾಗಿದೆ. ಈ ಶಾಕಿಂಗ್‌ ವಿಡಿಯೋವನ್ನು ಸ್ಥಳದಲ್ಲಿ ನೆರೆದಿದ್ದ ಜನರು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಶಾಕಿಂಗ್‌ ವಿಡಿಯೋ ನಿನ್ನೆಯೇ ನನ್ನ ಗಮನಕ್ಕೆ ಬಂತು. ನಾನು ಆಸ್ಪತ್ರೆಯ ಆಡಳಿತದಿಂದ ಘಟನೆಯ ಬಗ್ಗೆ ವರದಿ ಕೇಳಿದೆ. ವಿಡಿಯೋದಲ್ಲಿ ಕಂಡುಬಂದ ಶವಾಗಾರ ಸಹಾಯಕನನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ನನಗೆ ತಿಳಿಸಿದ್ದಾರೆ. ಇದರಲ್ಲಿ ಒಬ್ಬ ಪೊಲೀಸ್ ಕೂಡ ಭಾಗಿಯಾಗಿದ್ದಾನೆ. ಸೂಕ್ತ ಕ್ರಮ ಕೈಗೊಳ್ಳಲು ನಾವು ಎಸ್‌ಪಿಗೆ ಪತ್ರ ಬರೆದಿದ್ದೇವೆ ಎಂದು ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಕ್ರಮಗಳನ್ನು ಜಾರಿಗೊಳಿಸುವಂತೆ ಸಮಿತಿಯನ್ನು ಸಹ ರಚಿಸಲಾಗಿದೆ. 72 ಗಂಟೆಗಳ ಒಳಗೆ ಆಸ್ಪತ್ರೆ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಅಸ್ಸಾಂನಲ್ಲಿ ‘ಮುನ್ನಾ ಭಾಯ್ ಎಂಬಿಬಿಎಸ್’ ಸಿನಿಮಾದಂತೆ ನೈಜ ಘಟನೆ ನಡೆದಿದ್ದು, ಸಿಸೇರಿಯನ್ (ಸಿ-ಸೆಕ್ಷನ್) ಮತ್ತು ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ನಕಲಿ ವೈದ್ಯನೊಬ್ಬನನ್ನು ಸಿಲ್ಚಾರ್‌ನಲ್ಲಿ ಬಂಧಿಸಲಾಗಿದೆ.

ಆರೋಪಿ ಮಲಾಕರ್, ಕಳೆದ 10 ವರ್ಷಗಳಿಗೂ ಹೆಚ್ಚು ಕಾಲ ನಕಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದನು. ಈ ಅವಧಿಯಲ್ಲಿ ಆತ ಆ ಪ್ರದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ 50 ಸಿ-ಸೆಕ್ಷನ್‌ಗಳು ಮತ್ತು ಇತರ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾನೆ. ಎಂಬಿಬಿಎಸ್ ಮತ್ತು ಸಿಡಿಎಂ (ವಿಪತ್ತು ನಿರ್ವಹಣೆ ಪ್ರಮಾಣಪತ್ರ) ಸೇರಿದಂತೆ ವೈದ್ಯಕೀಯ ಪದವಿಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಮತ್ತು ಅಸ್ಸಾಂ ಆರೋಗ್ಯ ಅಧಿಕಾರಿಗಳ ತನಿಖೆಯ ಬಳಿಕ ಆತನ ಎಲ್ಲಾ ದಾಖಲೆಗಳು ನಕಲಿ ಎಂದು ಕಂಡುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *