ಜಿಎಸ್‌ಟಿ 2.0: ಈ ಅಗತ್ಯ ಸರಕು-ಸೇವೆಗೆ ತೆರಿಗೆ ವಿನಾಯಿತಿ

ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯ 56ನೇ ಸಭೆಯು ಸರಕಾರವು ಹೆಸರಿಸಿರುವಂತೆ ಜಿಎಸ್‌ಟಿ 2.0 ಅಡಿ ತೆರಿಗೆ ಬದಲಾವಣೆಗಳ ಸುದೀರ್ಘ ಪಟ್ಟಿಯನ್ನು ಅನುಮೋದಿಸಿದೆ.

ಅನೇಕ ಅಗತ್ಯ ಸರಕುಗಳು ಮತ್ತು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯತಿ ನೀಡಿರುವುದು,ಅವುಗಳನ್ನು ಶೂನ್ಯ ತೆರಿಗೆ ವರ್ಗಕ್ಕೆ ಸ್ಥಳಾಂತರಿಸಿರುವುದು ಸುಧಾರಣೆಗಳ ಪ್ರಮುಖ ಭಾಗವಾಗಿದೆ.
ಇವುಗಳಲ್ಲಿ ಆಹಾರ ಮತ್ತು ಶಿಕ್ಷಣ ಸಾಮಗ್ರಿಗಳು,ಔಷಧಿಗಳು,ವಿಮೆ ಹಾಗೂ ಕೆಲವು ರಕ್ಷಣಾ ಮತ್ತು ವಾಯುಯಾನ ಆಮದುಗಳೂ ಸೇರಿವೆ.
ಯಾವುದಕ್ಕೆಲ್ಲ ಶೂನ್ಯ ತೆರಿಗೆ?
►ಆಹಾರ: ಪಾಶ್ಚರೀಕರಿಸಿದ ಹಾಲು,ಮೊದಲೇ ಪ್ಯಾಕ್ ಮಾಡಲಾದ ಚೆನಾ(ಚೀಸ್‌ನ ಒಂದು ರೂಪ)/ಪನೀರ್,ಚಪಾತಿ,ರೋಟಿ, ಪರಾಠಾ,ಪರೋಟಾ,ಖಾಖ್ರಾ,ಪಿಜ್ಜಾ ಬ್ರೆಡ್
►ಆರೋಗ್ಯ ರಕ್ಷಣೆ ಮತ್ತು ಔಷಧಿಗಳು: 33 ಜೀವರಕ್ಷಕ ಔಷಧಿಗಳು(ಮೊದಲು ಶೇ.12),ಕ್ಯಾನ್ಸರ್/ಅಪರೂಪದ ಕಾಯಿಲೆಗಳು/ದೀರ್ಘಕಾಲಿಕ ಆರೋಗ್ಯ ಸ್ಥಿತಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಮೂರು ವಿಶೇಷ ಔಷಧಿಗಳು(ಮೊದಲು ಶೇ.5)
►ವಿಮೆ: ಮರುವಿಮೆ ಮತ್ತು ಕುಟುಂಬ ವಿಮೆ ಸೇರಿದಂತೆ ಎಲ್ಲ ವೈಯಕ್ತಿಕ ಆರೋಗ್ಯ ಮತ್ತು ಜೀವವಿಮೆ ಪಾಲಿಸಿಗಳು
►ಶಿಕ್ಷಣ ಮತ್ತು ಸ್ಟೇಷನರಿ: ನೋಟ್ ಬುಕ್,ಗ್ರಾಫ್ ಬುಕ್,ಲ್ಯಾಬ್ ನೋಟ್‌ಬುಕ್,ನೋಟ್‌ಬುಕ್‌ಗಳಿಗೆ ಬಳಸಲಾಗುವ ಅನ್‌ಕೋಟೆಡ್ ಕಾಗದ,ನಕಾಶೆ,ಅಟ್ಲಾಸ್,ಗ್ಲೋಬ್,ಪೆನ್ಸಿಲ್ ಶಾರ್ಪನರ್, ಇರೇಸರ್,ಪೆನ್ಸಿಲ್,ಕ್ರೇಯಾನ್ ಅಥವಾ ಮೇಣದ ಬಳಪ,ಬಣ್ಣದ ಬಳಪ,ಡ್ರಾಯಿಂಗ್ ಚಾರ್‌ಕೋಲ್,ದರ್ಜಿಗಳ ಚಾಕ್‌ಗಳು,ಕೈಯಿಂದ ತಯಾರಿಸಿದ ಕಾಗದ ಮತ್ತು ಪೇಪರ್ ಬೋರ್ಡ್‌ಗಳು
►ರಕ್ಷಣಾ ಮತ್ತು ವಾಯುಯಾನ ಆಮದುಗಳು: ಫ್ಲೈಟ್ ಮೋಷನ್ ಮತ್ತು ಟಾರ್ಗೆಟ್ ಮೋಷನ್ ಸಿಮ್ಯುಲೇಟರ್‌ಗಳು,ರಕ್ಷಣಾ ಬಿಡಿಭಾಗಗಳು,ಡ್ರೋನ್,ಮಾನವರಹಿತ ಬೋಟ್,ಕ್ಷಿಪಣಿ, ರಾಕೆಟ್,ಇಜೆಕ್ಷನ್ ಸೀಟ್,ಸಿ-130/ಸಿ-295 ಎಂಡಬ್ಲ್ಯು ವಿಮಾನಗಳು,ಆಳದಲ್ಲಿ ಚಲಿಸುವ ಹಡಗುಗಳು,ಸೋನೋಬಾಯ್ ಮತ್ತು ವಿಶೇಷ ಹೆಚ್ಚಿನ ಕಾರ್ಯಕ್ಷಮತೆಯ ಬ್ಯಾಟರಿಗಳು
ವಿನಾಯಿತಿ ಪಡೆದ ಸರಕುಗಳು,ನೈಸರ್ಗಿಕವಾಗಿ ಕತ್ತರಿಸಲಾದ ಮತ್ತು ಹೊಳಪು ನೀಡದ ವಜ್ರಗಳಿಗೆ ತಾಂತ್ರಿಕ ದಾಖಲಾತಿಗಳ ಆಮದುಗಳಿಗೆ 25 ಸೆಂಟ್‌ಗಳವರೆಗೆ ವಿನಾಯಿತಿ ನಿಡಲಾಗಿದೆ. ಪ್ರದರ್ಶನಗಳಿಗಾಗಿ ತರಲಾಗುವ ಕಲಾಕೃತಿಗಳು ಮತ್ತು ಪ್ರಾಚೀನ ವಸ್ತುಗಳನ್ನೂ ಈ ವರ್ಗದಲ್ಲಿ ಸೇರಿಸಲಾಗಿದೆ.
