ಗೂಗಲ್ ನಿಂದ ಜಾಹೀರಾತು ನಿಯಮ ಉಲ್ಲಂಘನೆ : ಮೂವತ್ತು ಸಾವಿರ ಕೋಟಿ ರೂ.ದಂಡ

ವಾಷಿಂಗ್ಟನ್: ಟೆಕ್ ದಿಗ್ಗಜ ಗೂಗಲ್ ಸಂಸ್ಥೆಗೆ ಐರೋಪ್ಯ ಒಕ್ಕೂಟ (ಇ.ಯು.)ವು ಬರೋಬ್ಬರಿ 30,000 ಕೋಟಿ ರೂ.ಗಳ ಭಾರೀ ದಂಡ ವಿಧಿಸಿದೆ. ತನ್ನದೇ ಜಾಹೀರಾತು ತಂತ್ರಜ್ಞಾನ ಸೇವಾದಾರರಿಂಗ ಆದ್ಯತೆ ನೀಡುವ ಮೂಲಕ ಪ್ರತಿಸ್ಪರ್ಧಿ ಜಾಹಿರಾತು ತಂತ್ರಜ್ಞಾನ ಒದಗಿಸುವವರಿಗೆ ಅನ್ಯಾಯವಾಗುವಂತೆ ಗೂಗಲ್ ಕಾರ್ಯನಿರ್ವಹಿಸುತ್ತಿದೆ.

ಈ ಮೂಲಕ ತನ್ನ ಪ್ರಾಬಲ್ಯವನ್ನು ಗೂಗಲ್ ದುರುಪಯೋಗಪಡಿಸಿಕೊಂಡಿದೆ ಎಂದು ಇ.ಯು. ಆರೋಪಿಸಿದೆ. ಗೂಗಲ್‌ನ ಜಾಹಿರಾತು ಸೇವೆಗಷ್ಟೇ ಈ ದಂಡ ಹಾಕಲಾಗಿದ್ದು, ಗೂಗಲ್‌ನ ವಿವಿಧ ಸೇವೆಗಳ ವಿರುದ್ಧ ಇ.ಯು. ವಿಧಿಸಿದಂತಹ ಒಟ್ಟಾರೆ ದಂಡದ ಮೊತ್ತ 1 ಲಕ್ಷ ಕೋಟಿ ರೂ.ಗಳನ್ನು ಮೀರಿದಂತಾಗಿದೆ. ಏತನ್ಮಧ್ಯೆ, ಈ ದಂಡ ವನ್ನು ಅನ್ಯಾಯ ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಸುಂಕ ಹೆಚ್ಚಿಸುವ ಬೆದರಿಕೆ ಒಡ್ಡಿದ್ದಾರೆ.
