Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಪಿಎಲ್‌ ಕಾರ್ಡ್ ವಂಚಿತ ಅರ್ಹರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಎಪಿಎಲ್‌ಗೆ ಬದಲಾದವರಿಗೆ 45 ದಿನಗಳಲ್ಲಿ ಮತ್ತೆ ‘ಬಿಪಿಎಲ್‌ ಭಾಗ್ಯ’!

Spread the love

ಬೆಂಗಳೂರು: ಎಪಿಎಲ್‌ಗೆ (APL) ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ (BPL Card) ಭಾಗ್ಯ ಸಿಗಲಿದೆ. ಹೌದು, ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಮಧ್ಯೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಅರ್ಹತೆ ಇದ್ರೂ ಎಪಿಎಲ್‌ಗೆ ಬದಲಾಗಿ ವಂಚಿತರಾದವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ‌.

45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರ ಆಹಾರ ಇಲಾಖೆಗೆ ಗಡುವು ಕೊಟ್ಟಿದೆ. ಎಪಿಎಲ್‌ಗೆ ಬದಲಾದವರು ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಒಂದು ಕಡೆ ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆ ಮಾಡಿ ಎಪಿಎಲ್‌ ಕಾರ್ಡ್‌ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇನ್ನೊಂದು ಕಡೆ ಅರ್ಹ ಬಿಪಿಎಲ್‌ ಕಾರ್ಡ್‌ದಾರರು ಎಪಿಎಲ್‌ಗೆ ಬದಲಾಗಿದ್ರೆ ಅಂಥವರಿಗೆ ನ್ಯಾಯ ಕೊಡಲು ಮುಂದಾಗಿದೆ.

7,76,206 ಪಡಿತರ ಚೀಟಿಗಳು ರಾಜ್ಯದಲ್ಲಿ ಅನರ್ಹವೆಂದು ಕೇಂದ್ರ ಸರ್ಕಾರ ಗುರುತು ಮಾಡಿದೆ. ಆದರೆ, ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ. ಇಂತಹ ಅನರ್ಹ ಚೀಟಿಗಳನ್ನು ಬಿಪಿಎಲ್‌ ಬದಲಿಗೆ ಎಪಿಎಲ್‌ ಆಗಿ ಪರಿವರ್ತಿಸುವ ಕೆಲಸ ನಡೀತಿದೆ.‌‌ ಇದರ ಮಧ್ಯೆ ಒಂದು ವೇಳೆ ಅರ್ಹರ ಕಾರ್ಡ್‌ ಎಪಿಎಲ್‌ಗೆ ಬದಲಾಗಿದ್ದಲ್ಲಿ ಅಂಥವರಿಗೆ ಬ್ಯಾಕ್ ಟು ಬಿಪಿಎಲ್‌ ಭಾಗ್ಯವೂ ಸಿಗಲಿದೆ. ಇದಕ್ಕಾಗಿ 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಹರಿದ್ದಲ್ಲಿ ಅಂಥವರಿಗೆ ಬಿಪಿಎಲ್‌ ಕಾರ್ಡ್‌ ನೀಡಲು ಸರ್ಕಾರ ಸೂಚನೆ ಕೊಟ್ಟಿದೆ.

ಇದೇ ವೇಳೆ ಬಿಎಪಿಎಲ್‌ಗೆ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವವರಿಗೂ ಗುಡ್ ನ್ಯೂಸ್ ಇದೆ. ಹೊಸದಾಗಿ ಪಡಿತರ ಚೀಟಿಗೆ ಈಗಾಗಲೇ 2.96 ಲಕ್ಷ ಅರ್ಜಿ ಸಲ್ಲಿಕೆ ಆಗಿವೆ. ಈ ಅರ್ಜಿಗಳ ವಿಲೇವಾರಿ ಮಾಡುವವರೆಗೆ ಬಿಪಿಎಲ್‌ಗೆ ಹೊಸದಾಗಿ ಅರ್ಜಿ ಆಹ್ವಾನಿಸಬಾರದು ಎಂದು ಸರ್ಕಾರ ನಿರ್ದೇಶಿಸಿದೆ. ಸದ್ಯದಲ್ಲೇ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆಗೂ ಕ್ರಮದ ಭರವಸೆ ಕೊಡಲಾಗಿದೆ.

ಎಪಿಎಲ್‌ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ ಭಾಗ್ಯ!
* ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
* ಬಿಪಿಎಲ್ ಕಾರ್ಡ್ ವಂಚಿತ ಅರ್ಹರಿಗೆ ಗುಡ್ ನ್ಯೂಸ್!
* 45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್!
* ಎಪಿಎಲ್‌ಗೆ ಬದಲಾದವರಿಗೆ ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್
* ಕೇಂದ್ರದ ಪ್ರಕಾರ ರಾಜ್ಯದಲ್ಲಿ 7,76,206 ಪಡಿತರ ಚೀಟಿಗಳಿವೆ
* ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳು
* 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು
* ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲಿಸಿ ಅರ್ಹರಿದ್ದಲ್ಲಿ ಬಿಪಿಎಲ್‌ ಕಾರ್ಡ್
* ಹೊಸದಾಗಿ ಪಡಿತರ ಚೀಟಿಗೆ ಸಲ್ಲುಸಿರೋ 2.96 ಲಕ್ಷ ಅರ್ಜಿಗಳ ವಿಲೇವಾರಿಗೂ ಕ್ರಮ
* ಹಳೆಯ ಅರ್ಜಿಗಳ ವಿಲೇವಾರಿವರೆಗೂ ಬಿಪಿಎಲ್‌ಗೆ ಹೊಸಗಿ ಅರ್ಜಿ ಆಹ್ವಾನವಿಲ್ಲ


Spread the love
Share:

administrator

Leave a Reply

Your email address will not be published. Required fields are marked *