ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ; 8 ದಿನಗಳಲ್ಲಿ 100 ಗ್ರಾಂಗೆ ₹34,900 ಕುಸಿತ!

ಬೆಂಗಳೂರು: ಕಳೆದ 8 ದಿನದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಇಂದು ಸಹ ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡು ಬಂದಿದೆ. ಗೂಡ್ಸ್ ರಿಟರ್ನ್ ವರದಿ ಪ್ರಕಾರ, 24 ಕ್ಯಾರಟ್ 100 ಗ್ರಾಂ ಚಿನ್ನದಲ್ಲಿ 34,900 ರೂಪಾಯಿ ಇಳಿಕೆಯಾಗಿದೆ. ಭವಿಷ್ಯದಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರಗಳು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಲೈವ್ ಮಿಂಟ್ ಪ್ರಕಾರ ಭಾರತದಲ್ಲಿಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,931 ರೂಪಾಯಿ (15 ರೂ. ಇಳಿಕೆ)
8 ಗ್ರಾಂ: 71,450.40 ರೂಪಾಯಿ (120 ರೂ. ಇಳಿಕೆ)
10 ಗ್ರಾಂ: 89,313 ರೂಪಾಯಿ (150 ರೂ. ಇಳಿಕೆ)
100 ಗ್ರಾಂ: 8,93,130 ರೂಪಾಯಿ (1500 ರೂ. ಇಳಿಕೆ)
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,742.30 ರೂಪಾಯಿ (16 ರೂ. ಇಳಿಕೆ)
8 ಗ್ರಾಂ: 77,938.40 ರೂಪಾಯಿ (128 ರೂ. ಇಳಿಕೆ)
10 ಗ್ರಾಂ: 97,243 ರೂಪಾಯಿ (160 ರೂ. ಇಳಿಕೆ)
100 ಗ್ರಾಂ: 9,74,230 ರೂಪಾಯಿ (1,600 ರೂ. ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಬೆಂಗಳೂರು: 89,155 ರೂಪಾಯಿ, ಚೆನ್ನೈ: 89,161 ರೂಪಾಯಿ, ದೆಹಲಿ: 89,313 ರೂಪಾಯಿ, ಕೋಲ್ಕತ್ತಾ: 89,165 ರೂಪಾಯಿ, ಮುಂಬೈ: 89,167 ರೂಪಾಯಿ ಮತ್ತು ಪುಣೆ: 89,173 ರೂಪಾಯಿ

ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
ಇಂದು ಹೂಡಿಕೆದಾರರು ಚಿನ್ನದ ಜೊತೆ ಬೆಳ್ಳಿ ಮೇಲೆಯೂ ಅಧಿಕವಾಗಿ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಬೆಳ್ಳಿ ಬೆಲೆಯೂ 1 ಲಕ್ಷ ರೂ. ಗಡಿ ದಾಟಿದೆ. ಇಂದಿನ ಬೆಲೆ ಹೀಗಿದೆ.
10 ಗ್ರಾಂ: 1190 ರೂಪಾಯಿ
100 ಗ್ರಾಂ: 11,900 ರೂಪಾಯಿ
1000 ಗ್ರಾಂ: 1,19,000 ರೂಪಾಯಿ
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದು ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು. ಹೀಗಾಗಿಯೇ ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ. ಅಲ್ಲದೇ ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಚಿನ್ನದ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ.
