ಭೂಮಿಯೊಳಗಿನಿಂದ ಚಿನ್ನದ ಸೋರಿಕೆ: ಸಂಶೋಧಕರಿಂದ ಹೊಸ ಅನಾವರಣ

ಚಿನ್ನ ಎಂದರೆ ಸಾಕು, ಬಹುತೇಕ ಮಂದಿಯ ಕಣ್ಣಲ್ಲಿ ಕೋಲ್ಮಿಂಚು ಹರಿದುಬಿಡುತ್ತದೆ. ಬಂಗಾರ ಎಂದಾಕ್ಷಣ ಮಹಿಳೆಯರ ವಿಷಯ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಇಂದು ಪುರುಷರೂ ಕೂಡ ಚಿನ್ನಾಭರಣ ಧರಿಸುವಿಲ್ಲಿ ಹಿಂದೆ ಬಿದ್ದಿಲ್ಲ. ಚಿನ್ನದ ರೇಟ್ ಲಕ್ಷ ಲಕ್ಷದ ಗಡಿ ದಾಟಿದರೂ ಹಲವರಿಗೆ ಇದು ಲೆಕ್ಕವೇ ಅಲ್ಲ. ಅದರಲ್ಲಿಯೂ ಹಬ್ಬದ ದಿನಗಳಲ್ಲಿ ಕೆಲವೊಂದು ಆಭರಣಗಳ ಮಳಿಗೆಯನ್ನು ನೋಡಿದರೆ, ಚಿನ್ನಾಭರಣ ಕೊಳ್ಳಲು ಜಾತ್ರೆಯೇ ಸೇರಿರುತ್ತದೆ.ಅಷ್ಟು ಮಹತ್ವ ಚಿನ್ನಕ್ಕಿದೆ. ಇನ್ನು ಭೂಮಿಯ ಒಳಗಿನಿಂದಲೇ ಚಿನ್ನದ ಸೋರಿಕೆ ಆಗುತ್ತಿದೆ ಎಂದು ತಿಳಿದರೆ? ಆದರೆ ಇದೀಗ ಸಂಶೋಧಕರು ಭೂಮಿಯ ಒಳಗಿನಿಂದ ಚಿನ್ನದ ಸೋರಿಕೆ ಆಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಹವಾಯಿಯನ್ ಜ್ವಾಲಾಮುಖಿ ಪ್ರದೇಶದಲ್ಲಿ ಭೂಮಿಯ ಮಧ್ಯಭಾಗದಿಂದ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಮೇಲಿನ ಮೇಲ್ಮೈಗೆ ಸೋರಿಕೆಯಾಗುತ್ತಿರುವುದು ಬಹಿರಂಗಪಟ್ಟಿದೆ. ಭೂಮಿಯ ಶೇಕಡಾ 99.99 ಕ್ಕೂ ಹೆಚ್ಚು ಚಿನ್ನ ಮತ್ತು ರುಥೇನಿಯಮ್ನಂತಹ ಅಮೂಲ್ಯ ಲೋಹಗಳ ನಿಕ್ಷೇಪಗಳು 3,000 ಕಿಮೀ ಘ.ನ ಬಂಡೆಯ ಕೆಳಗೆ ಮತ್ತು ಮಾನವಕುಲದ ವ್ಯಾಪ್ತಿಯಿಂದ ದೂರದಲ್ಲಿ ಲಾಕ್ ಆಗಿವೆ. ಅದು ಈಗ ಸೋರಿಕೆ ಆಗುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಅಷ್ಟಕ್ಕೂ ಚಿನ್ನದ ನಿಜವಾದ ಹುಟ್ಟಿನ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಇದಕ್ಕೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮಧ್ಯ ಮತ್ತು ಉತ್ತರ ಅಮೆರಿಕದಲ್ಲಿ ಜ್ವಾಲಾಮುಖಿಯಿಂದ ಚಿನ್ನ ರೂಪುಗೊಂಡಿದೆ ಎಂದು ಹೇಳುವ ಕೆಲವು ಸಂಶೋಧನೆಗಳು ಇವೆ. ಈ ಭಾಗಗಳಲ್ಲಿ ಕಬ್ಬಿಣಕ್ಕೂ ಮೊದಲೇ ಚಿನ್ನ ಕಂಡುಬಂದಿದ್ದು, ಅಲ್ಲಿನ ಜನರು ಉಪಯೋಗಿಸುತ್ತಿದ್ದ ಪಾತ್ರೆಗಳು, ಕುರ್ಚಿಗಳು, ಚಮಚಗಳು, ಎಲ್ಲವೂ ಚಿನ್ನದಿಂದ ಮಾಡಲ್ಪಟ್ಟವು. ಯುರೋಪಿಯನ್ನರ ದಾಳಿ ನಂತರ ಇಲ್ಲಿನ ಚಿನ್ನವನ್ನೆಲ್ಲಾ ದೋಚಿದರು ಎಂದು ಹೇಳಲಾಗುತ್ತದೆ.
ಅಮೆರಿಕದ ಸೌತ್ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಸಂಶೋಧಕ ಸಿಮೋನ್ ಮಾರ್ಚ್ ಪ್ರಕಾರ, ಭೂಮಿಯ ಹೊರಪದರದಲ್ಲಿನ ಬಿರುಕುಗಳ ಮೂಲಕ ಹರಿಯುವ ಶಾಖ, ಖನಿಜಗಳ ಸಮೃದ್ಧವಾಗಿರುವ ದ್ರವಗಳಿಂದ ರೂಪುಗೊಳ್ಳುತ್ತದೆ. ಈ ದ್ರವ ತಣ್ಣಗಾದಾಗ ಚಿನ್ನದ ಅದಿರಾಗಿ ರೂಪುಗೊಳ್ಳುತ್ತವೆ ಎಂದು ಹೇಳಿದ್ದರು. ಈ ಭೂಮಿಯ ರಚನೆಯ ಸಮಯದಲ್ಲಿ, ಚಂದ್ರನ ಗಾತ್ರದ ಬೃಹತ್ ಗ್ರಹಗಳ ತುಣುಕು ಭೂಮಿಗೆ ಡಿಕ್ಕಿ ಹೊಡೆದು ಅದರೊಳಗೆ ನುಗ್ಗಿತು. ಆ ಸಂದರ್ಭದಲ್ಲಿ ಚಿನ್ನ ಮತ್ತು ಪ್ಲಾಟಿನಂನಂತಹ ಲೋಹಗಳು ಭೂಮಿಯ ಒಳಭಾಗದಲ್ಲಿ ವಿವಿಧ ಪ್ರಕ್ರಿಯೆಗಳಿಂದ ರೂಪುಗೊಂಡವು ಎಂದು ಅವರು ಬಹಿರಂಗಪಡಿಸಿದ್ದಾರೆ. ‘ಚಿನ್ನ ಮತ್ತು ಪ್ಲಾಟಿನಂನಂತಹ ಅಮೂಲ್ಯ ಲೋಹಗಳ ರಚನೆಯಲ್ಲಿ ಭೂಮಿಗೆ ಅಪ್ಪಳಿಸುವ ಬೃಹತ್ ತುಣುಕುಗಳ ಪಾತ್ರವನ್ನು ನಮ್ಮ ಸಂಶೋಧನೆ ಸ್ಪಷ್ಟಪಡಿಸಿದೆ. ಭೂಮಿಯಲ್ಲಿರುವ ಲೋಹಗಳ ಪ್ರಮಾಣವು ಈ ಹಿಂದೆ ಅಂದಾಜಿಸಲಾಗಿದ್ದಕ್ಕಿಂತ ಎರಡರಿಂದ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ತಿಳಿಸಿತ್ತು.