ಕೇರಳಕ್ಕೆ ಬಂದಿದ್ದ ಜರ್ಮನ್ ಪ್ರಜೆ ಲೀಸಾ ವೈಸ್ ನಾಪತ್ತೆ: ಬ್ರಿಟನ್ ವ್ಯಕ್ತಿಗಾಗಿ ಇಂಟರ್‌ಪೋಲ್ ನೆರವು ಕೋರಿದ ಪೊಲೀಸರು

ತಿರುವನಂತಪುರ: ಜರ್ಮನ್ ಪ್ರಜೆ ಲೀಸಾ ವೈಸ್ ನಾಪತ್ತೆ ಪ್ರಕರಣ (German Woman Liza Weiss Missing Case) ಹೊಸ ತಿರುವು ಪಡೆದುಕೊಂಡಿದೆ. 2019 ರ ಮಾರ್ಚ್‌ನಲ್ಲಿ ಕೇರಳಕ್ಕೆ ಬಂದಿದ್ದ ಲೀಸಾ ವೈಸ್ ನಾಪತ್ತೆಯಾಗಿದ್ದರು. ಲೀಸಾ ಜೊತೆಗೆ ಕೇರಳಕ್ಕೆ ಬಂದು ನಂತರ ಒಬ್ಬಂಟಿಯಾಗಿ ವಾಪಸ್ಸಾದ ಬ್ರಿಟನ್ ಪ್ರಜೆ ಮೊಹಮ್ಮದ್ ಅಲಿ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮೊಹಮ್ಮದ್ ಅಲಿ ಈಗ ಬ್ರಿಟನ್ ನಲ್ಲಿದ್ದಾನೆ. ಭಾರತ-ಬ್ರಿಟನ್ ಅಪರಾಧಿ ವರ್ಗಾವಣೆ ಒಪ್ಪಂದದ ಪ್ರಕಾರ, ಮೊಹಮ್ಮದ್ ಅಲಿಯನ್ನು ಬ್ರಿಟನ್ ನಿಂದ ಕೇರಳಕ್ಕೆ ಕರೆತರಲು ಪೊಲೀಸರು ಇಂಟರ್ಪೋಲ್ ನ ಸಹಾಯ ಕೋರಿದ್ದಾರೆ.
ಆರೋಪಿ ಮೊಹಮ್ಮದ್ ಅಲಿಗಾಗಿ ಕೇರಳ ಪೊಲೀಸರ ಹುಡುಕಾಟ
ತನಿಖೆಯನ್ನು ತ್ವರಿತಗೊಳಿಸುವುದಾಗಿ ಮತ್ತು ಮೊಹಮ್ಮದ್ ಅಲಿಯನ್ನು ಬೇಗ ಕಂಡುಹಿಡಿಯಲು ಪ್ರಯತ್ನಿಸುವುದಾಗಿ ಇಂಟರ್ಪೋಲ್ ಕೇರಳ ಪೊಲೀಸರಿಗೆ ಭರವಸೆ ನೀಡಿದೆ. ಭಾರತ-ಬ್ರಿಟನ್ ಒಪ್ಪಂದದ ಪ್ರಕಾರ, ಆರೋಪಿಯನ್ನು ಬ್ರಿಟನ್ ನಿಂದ ವಶಕ್ಕೆ ಪಡೆದು ಕೇರಳಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಲೀಸಾ ವೈಸ್ ನಾಪತ್ತೆಯಲ್ಲಿ ಮೊಹಮ್ಮದ್ ಅಲಿಗೆ ನೇರ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇಸ್ಲಾಂಗೆ ಮತಾಂತರಗೊಂಡದ್ರು ಲೀಸಾ
ಇಸ್ಲಾಂನಲ್ಲಿ ಆಕರ್ಷಿತಳಾದ ಲೀಸಾ 2011 ರಲ್ಲಿ ಮತಾಂತರಗೊಂಡಿದ್ದರು. ಈಜಿಪ್ಟ್ ನ ಕೈರೋದಲ್ಲಿ ಭೇಟಿಯಾದ ವ್ಯಕ್ತಿಯನ್ನು ವಿವಾಹವಾದ ನಂತರ ಅಮೆರಿಕದಲ್ಲಿ ನೆಲೆಸಿದ್ದರು. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಪತಿಯೊಂದಿಗಿನ ಸಂಬಂಧ ಹದಗೆಟ್ಟ ನಂತರ ಲೀಸಾ ಜರ್ಮನಿಗೆ ಹೋಗಿದ್ದರು.
2019 ರ ಮಾರ್ಚ್ 5 ರಂದು ಲೀಸಾ ಭಾರತಕ್ಕೆ ಬಂದಿದ್ದರು. ಕೋವಳಂನಲ್ಲಿ ಕೊಲೆಯಾದ ಲಾಟ್ವಿಯನ್ ಯುವತಿಯ ಸಹೋದರಿ, ಲೀಸಾ ಅವರ ಸಂಬಂಧಿಕರೊಂದಿಗೆ ಮಾತನಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ಪ್ರಕಾರ, ಲೀಸಾ ತೀವ್ರ ಮಾನಸಿಕ ಒತ್ತಡದಲ್ಲಿದ್ದರು.
ಕೇರಳಕ್ಕೆ ಬಂದ ಲೀಸಾ ಮಿಸ್ಸಿಂಗ್
ತನ್ನ ಸಹೋದರಿ ಕರೋಲಿನಾಳಿಗೆ ಭಾರತಕ್ಕೆ ಹೋಗುತ್ತಿರುವುದಾಗಿ ಲೀಸಾ ಹೇಳಿದ್ದರು. ಲೀಸಾ ಕೇರಳಕ್ಕೆ ಬಂದಿದ್ದರು ಎಂದು ನಂತರ ದೃಢಪಟ್ಟಿತು. ತ್ರಿಶೂರಿರನ ಮಾಲ್ ಸಿಸಿಟಿವಿ ದೃಶ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ಲೀಸಾ ವರ್ಕಲದಲ್ಲಿ ವಾಸಿಸುತ್ತಿದ್ದರು ಎಂಬುದೂ ತಿಳಿದುಬಂದಿದೆ. ನಂತರ ಲೀಸಾ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಮಾರ್ಚ್ 15 ರಂದು ಲೀಸಾ ಜೊತೆ ಕೇರಳಕ್ಕೆ ಬಂದಿದ್ದ ಮೊಹಮ್ಮದ್ ಅಲಿ ಬ್ರಿಟನ್ ಗೆ ವಾಪಸ್ಸಾಗಿದ್ದ. ಮಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಜೂನ್ ನಲ್ಲಿ ಲೀಸಾಳ ತಾಯಿ ಜರ್ಮನ್ ಕಾನ್ಸುಲೇಟ್ ಗೆ ದೂರು ನೀಡಿದ್ದರು. ಇದನ್ನು ಕೇರಳ ಪೊಲೀಸರಿಗೆ ವರ್ಗಾಯಿಸಿದ ನಂತರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು. ಮೊಹಮ್ಮದ್ ಅಲಿಯನ್ನು ಹುಡುಕಲು ಬ್ರಿಟನ್ ಗೆ ಹೋಗಲು ಕೇರಳ ಪೊಲೀಸರು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.
7 ವರ್ಷ ನಾಪತ್ತೆ ಆಗಿದ್ದ ಬಾದಾಮಿ ಮಹಿಳೆ ಮಾಹಾರಾಷ್ಟ್ರದಲ್ಲಿ ಪತ್ತೆ
ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಫಿಲ್ಮಿ ಶೈಲಿಯಲ್ಲಿ ತಮ್ಮ ಬಂಧುಗಳ ಜತೆ ಒಂದಾದ ಹೃದಯಸ್ಪರ್ಶಿ ಪ್ರಸಂಗ ಮುಂಬೈನಲ್ಲಿ ನಡೆದಿದೆ. ಕಸ್ತೂರಿ ಪಾಟೀಲ (50) ಎಂಬಾಕೆಯೇ ಕುಟುಂಬಸ್ಥರ ಜತೆ ಒಂದಾಗಿರುವ ಮಹಿಳೆ. ಎನ್‌ಜಿಒ ಕಾರ್ಯಕರ್ತರ ಮುಂದೆ ಈ ಮಹಿಳೆ ‘ಬಾದಾಮಿ’ ಎಂಬ ಕೀವರ್ಡ್ ಬಳಸಿದ್ದು ಹಾಗೂ ಆ ಎನ್‌ಜಿಒ ನೆರವಿನಿಂದ ಬಳಿಕ ನಡೆದ ಬಾದಾಮಿ ಪೊಲೀಸರ ಕಾರ್ಯಾಚರಣೆ ಈಕೆಯ ಮೂಲದ ಶೋಧಕ್ಕೆ ನೆರವಾಗಿದೆ.
ಮಹಾರಾಷ್ಟ್ರದ ರಾಯಗಡದಲ್ಲಿ ದಯನೀಯ ಸ್ಥಿತಿಯಲ್ಲಿದ್ದ ಹಾಗೂ ಅಸ್ತವ್ಯಸ್ತ ಬಟ್ಟೆ ಧರಿಸಿದ್ದ ಮಹಿಳೆಯೊಬ್ಬರು ಪನ್ವೇಲ್ ಮೂಲದ ಸ್ವಯಂಸೇವಾ ಸಂಸ್ಥೆಯಾದ ‘ಸೋಶಿಯಲ್ ಅಂಡ್ ಇವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ ‘ (ಸೀಲ್) ಕಣ್ಣಿಗೆ ಬಿದ್ದಿದ್ದರು. ತನ್ನ ಹೆಸರು ಕಸ್ತೂರಿ ಪಾಟೀಲ ಎಂದಷ್ಟೇ ಹೇಳಿದ್ದ ಮಹಿಳೆ, ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ
