Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾತ್ರಿ‌ ಮಗುವಿಗೆ ಜನ್ಮ, ಬೆಳಗ್ಗೆ ಹೆಣ್ಣು ಮಗು ಬಿಟ್ಟು ಅಮ್ಮ ಎಸ್ಕೇಪ್! ಇವರೆಂಥಾ ತಾಯಿ?

Spread the love

ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ರಾತ್ರಿ ಹೆಣ್ಣು ಮಗುವೊಂದಕ್ಕೆಜನ್ಮ ನೀಡಿದ ತಾಯಿಯೊಬ್ಬಳು ಮರುದಿನ ಬೆಳಗ್ಗೆ ಮಗುವನ್ನು ಅನಾಥವಾಗಿಸಿ ಪರಾರಿಯಾಗಿದ್ದಾಳೆ . ಇದೀಗ ಈ ವಿಷಯ ಕೋಲಾರ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲಾರ ಜಿಲ್ಲೆಯಾದ್ಯಂತ ಈ ತಾಯಿ-ಮಗು ವಿಚಾರ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಈ ಸರಣಿ ಘಟನೆಗಳಿಂದ ಆಸ್ಪತ್ರೆಯ ಸಿಬ್ಬಂದಿ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮೊನ್ನೆ ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ಬಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಮೌನಿಕಾ ಎಂಬ 19 ವರ್ಷದ ಯುವತಿ, ಕುಟುಂಬದ ಮದುವೆಗೆ ಬಂದಿದ್ದಾಗ ತುರ್ತು ಹೆರಿಗೆ ನೋವಿನಿಂದ ಆಸ್ಪತ್ರೆಗೆ ಆಗಮಿಸಿದ್ದಳು. ನಂತರ ಸಂಜೆ 7:30ಕ್ಕೆ ಡಾ. ಶಾಂತ ಅವರ ನೇತೃತ್ವದಲ್ಲಿ ನಾರ್ಮಲ್ ಡೆಲಿವರಿ ಆಯಿತು. ನಾರ್ಮಲ್​​ ಡೆಲಿವರಿ ಮೂಲಕ ಹೆಣ್ಣು ಮಗುವಿಗೆ ಮೌನಿಕ ಜನ್ಮ ನೀಡಿದ್ದಾಳೆ.

ಗಂಡನ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ತಾಯಿ ಮೌನಿಕ!

ಆದರೆ, ಮಗುವಿಗೆ ಜನ್ಮ ಕೊಟ್ಟ ತಾಯಿ ಮೌನಿಕಾ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರ ಗ್ರಾಮದವಳು, ಗಂಡ ಶ್ರೀನಿವಾಸ್ ಎಂದು ತಪ್ಪು ಮಾಹಿತಿ ನೀಡಿದ್ದಾಳೆ ಎಂಬುದು ತಿಳಿದುಬಂದಿದೆ. ಮರುದಿನ ಬೆಳಗ್ಗೆ “ಟೀ ಕುಡಿದು ಬರುತ್ತೇನೆ” ಎಂದು ಹೇಳಿ ಹೊರಗೆ ಹೋದವಳು, ತನ್ನ ಜೊತೆಗಿದ್ದ ವೃದ್ಧೆಯೊಂದಿಗೆ ಆಕೆ ಪರಾರಿಯಾಗಿದ್ದಾಳೆ. ಆಕೆ ನೀಡಿದ ಸಂಪರ್ಕ ಸಂಖ್ಯೆ ತಪ್ಪಾಗಿದ್ದು, ವಿಳಾಸವೂ ಸುಳ್ಳು ಎಂದು ತಿಳಿದುಬಂದಿದೆ.

ಸದ್ಯ ತಾಯಿಯ ಆಶ್ರಯವಿಲ್ಲದೇ ಆಸ್ಪತ್ರೆಯಲ್ಲಿ ನವಜಾತ ಶಿಶು ಗೋಳಾಟ!

ಸದ್ಯ 1.5 ಕೆ.ಜಿ. ತೂಕದ ನವಜಾತ ಶಿಶು ತಾಯಿಯ ಆಶ್ರಯವಿಲ್ಲದೆ ಆಸ್ಪತ್ರೆಯಲ್ಲಿ ನರಳುತ್ತಿದೆ. ಇದನ್ನು ಕಂಡ ವೈದ್ಯರು ಬೇರೆಯವರ ಎದೆಹಾಲು ಕುಡಿಸಿ ಮಗುವನ್ನು ಆರೈಕೆ ಮಾಡುತ್ತಿದ್ದಾರೆ. ಸದ್ಯ ಪೊಲೀಸ್​​ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೋಲಾರ ನಗರ ಪೊಲೀಸರು ತಾಯಿಯ ಹುಡುಕಾಟದಲ್ಲಿ ತೊಡಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *