Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾನೂನು ಕಾಲೇಜಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ – ಭದ್ರತಾ ಸಿಬ್ಬಂದಿ ಸೇರಿ ನಾಲ್ವರ ಬಂಧನ, ರಾಜಕೀಯ ಕೆಸರೆರಚಾಟ ಶುರು!

Spread the love

rape survivor: 'Would spoil the atmosphere': Private school bars rape  survivor from appearing for Class 12 board exams in Ajmer - The Economic  Times

ಕೋಲ್ಕತ್ತಾ: ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ ಪೊಲೀಸರು ಬಂಧಿಸಿದ್ದು, ಇಲ್ಲಿಯವರೆಗೂ ನಾಲ್ವರನ್ನು ಈ ಘಟನೆಯಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೊತೆಗೆ ಈ ಘಟನೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಟಿಡಂಸಿ ನಾಯಕರ ಮಧ್ಯೆ ವಾಗ್ಯುದ್ಧ ಜೋರಾಗಿದೆ.

ಸೌತ್ ಕ್ಯಾಲ್ಕಟಾ ಕಾನೂನು ಮಹಾವಿದ್ಯಾಲಯದಲ್ಲಿ ಸಾಮೂಹಿಕ ಅತ್ಯಾಚಾರವಾದ ಬಗ್ಗೆ ಖುದ್ದಾಗಿ ಆಕೆಯೇ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮನೋಜಿತ್ ಮಿಶ್ರಾ, ಜೈಬ್ ಅಹ್ಮದ್ ಮತ್ತು ಪ್ರಮೀತ್ ಮುಖೋಪಾಧ್ಯಾಯ್ ಎಂಬುವವರನ್ನು ಬಂಧಿಸಿದ್ದರು. ಘಟನೆ ನಡೆದಾಗ ಸ್ಥಳದಲ್ಲಿದ್ದ ಕಾರಣ, ಭದ್ರತಾ ಸಿಬ್ಬಂದಿ ಪಿನಾಕಿ ಬ್ಯಾನರ್ಜಿ ಅವರನ್ನು ಇಂದು ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿದ್ಯಾರ್ಥಿನಿ ಕೂಗಿದ್ರೂ ಸಹಾಯಕ್ಕೆ ಬಾರದ ಸಿಬ್ಬಂದಿ

ಭದ್ರತಾ ಸಿಬ್ಬಂದಿ ಪಿನಾಕಿ ಬ್ಯಾನರ್ಜಿ ಆರೋಪಿ ಸೂಚನೆಯಂತೆ ತಮ್ಮ ಕೋಣೆ ತೊರೆದು ಹೋಗಿದ್ದರು. ಈಕಾರಣದಿಂದಲೇ ಮಹಿಳೆ ಮಹಿಳೆ ಒಂಟಿಯಾಗಿ ಸಿಕ್ಕಿಬಿದ್ದಳು. ಆಕೆ ಸಹಾಯಕ್ಕಾಗಿ ಪದೇ ಪದೇ ಬೇಡಿಕೊಂಡರೂ, ಭದ್ರತಾ ಸಿಬ್ಬಂದಿ ಸಹಾಯ ಮಾಡಲಿಲ್ಲ.ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಟಿಎಂಸಿ ನಾಯಕನ ಪಾತ್ರದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಅಥವಾ ಪೊಲೀಸರಿಗೆ ವರದಿ ಮಾಡುವುದು ಅವರ ಜವಾಬ್ದಾರಿಯಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ವಿಚಾರಣೆಯ ಸಮಯದಲ್ಲಿ ಅವರ ನಿರ್ಲಕ್ಷ್ಯತನವು ಸಾಬೀತಾಯಿತು. ನಂತರ ಅವರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.

24 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲವಾರು ಗಂಟೆಗಳ ಕಾಲ ಹಲ್ಲೆ ನಡೆಸಲಾಯಿತು. ಈ ಕೃತ್ಯವನ್ನು ಪ್ರಮುಖ ಆರೋಪಿ ಮೊನೊಜಿತ್ ಮಿಶ್ರಾ ಎಸಗಿದ್ದಾನೆ. ಈತ ಕಾಲೇಜಿನ ಟಿಎಂಸಿ ಚಾತ್ರ ಪರಿಷತ್ ಘಟಕದ ಮಾಜಿ ಅಧ್ಯಕ್ಷ ಮತ್ತು ಟಿಎಂಸಿಯ ವಿದ್ಯಾರ್ಥಿ ಘಟಕದ ದಕ್ಷಿಣ ಕೋಲ್ಕತ್ತಾ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿದ್ದನು ಎಂದು ವರದಿಯಾಗಿದೆ. ಕೃತ್ಯ ನಡೆಯುವಾಗ ಇಬ್ಬರು ವಿದ್ಯಾರ್ಥಿಗಳು ನೋಡುತ್ತಾ ನಿಂತಿದ್ದರು ಎನ್ನಲಾಗಿದೆ.

ಆರೋಪಿ ಟಿಎಂಸಿ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಸದ್ಯ ಈ ಹೇಳಿಕೆಯನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಖಂಡಿಸಿದ್ದಾರೆ.
ಸ್ನೇಹಿತರಿಂದಲೇ ಹೀಗಾದ್ರೆ ಏನು ಮಾಡೋಕೆ ಸಾಧ್ಯ

ಸ್ನೇಹಿತನಿಂದ ಅತ್ಯಾಚಾರ ನಡೆದರೆ ಅಂತಹ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳು ಹೇಗೆ ರಕ್ಷಣೆ ನೀಡುತ್ತಾರೆ? ಶಾಲೆಗಳಲ್ಲಿ ಪೊಲೀಸರು ಇರಲು ಸಾಧ್ಯವೇ? ಲೀಸರು ಪ್ರತಿಯೊಂದು ಮೂಲೆಯಲ್ಲೂ ಇರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಇನ್ನೊಬ್ಬ ವಿದ್ಯಾರ್ಥಿನಿಗೆ ಈ ರೀತಿ ಮಾಡಿದ್ದಾರೆ. ಆಕೆಯನ್ನು ಯಾರು ರಕ್ಷಿಸುತ್ತಾರೆ? . ಮಹಿಳೆಯರು ಇಂತಹ ಮನಸ್ಸಿನ ಪುರುಷರ ವಿರುದ್ಧ ಹೋರಾಡಬೇಕುʼ ಎಂದು ಶ್ರೀರಾಮಪುರದ ಸಂಸದರಾದ ಬ್ಯಾನರ್ಜಿ ಹೇಳಿದ್ದಾರೆ.

ಯಾರು ತಪ್ಪು ಮಾಡಿದ್ದಾರೋ ಅವರನ್ನು ತಕ್ಷಣ ಬಂಧಿಸಬೇಕು. ಆದರೆ ಸ್ನೇಹಿತನಿಂದ ಅತ್ಯಾಚಾರ ನಡೆದರೆ ಅದು ಹೇಗೆ ಭ್ರಷ್ಟಾಚಾರವಾಗುತ್ತದೆ?” ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಎಲ್ಲೆಡೆ ಸುರಕ್ಷತೆ ಮತ್ತು ಭದ್ರತೆಯ ಸ್ಥಿತಿ ಒಂದೇ ರೀತಿ ಇರುತ್ತದೆ. ಪುರುಷರ ಮನಸ್ಥಿತಿ ಹೀಗಿರುವವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದರು.
ಯಾರ ನೋವನ್ನು ರಾಜಕೀಯಗೊಳಿಸಲ್ಲ

ಮಹಿಳೆಯರ ನೋವನ್ನು ರಾಜಕೀಯಗೊಳಿಸಲು ನಾವು ಬಯಸುವುದಿಲ್ಲ. ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿ ಯಾರೇ ಆಗಿರಲಿ, ಅವರನ್ನು ಬಿಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿ ಪಂಜಾ ಹೇಳಿದರು.

ವಿದ್ಯಾರ್ಥಿನಿಯ ದೂರಿನ ಪ್ರಕಾರ, ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕ್ಯಾಂಪಸ್‌ಗೆ ಬಂದಾಗ ಆಕೆಯ ಮೇಲೆ ಹಲ್ಲೆ ಮಾಡಲಾಯಿತು. ಆಕೆಯನ್ನು ಬಲವಂತವಾಗಿ ಕಾವಲು ಕೋಣೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ಬಟ್ಟೆಗಳನ್ನು ಕಳಚಿ ಅತ್ಯಾಚಾರ ಮಾಡಲಾಯಿತು. ಮಿಶ್ರಾ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ. ಅತ್ಯಾಚಾರದ ಕೃತ್ಯ ರೆಕಾರ್ಡ್ ಮಾಡಿ ನಂತರ ಆ ವಿಡಿಯೋ ಇರುವ ಬಗ್ಗೆ ಮಿಶ್ರಾಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *