ಜಿ7 ಶೃಂಗಸಭೆ: ಭಾರತ ಮತ್ತು ದಕ್ಷಿಣ ಕೊರಿಯಾಕ್ಕೆ ಫ್ರಾನ್ಸ್‌ನಿಂದ ವಿಶೇಷ ಆಹ್ವಾನ

ಪ್ಯಾರಿಸ್: ಫ್ರಾನ್ಸ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಜಿ7 ನಾಯಕರ ಶೃಂಗಸಭೆಯಲ್ಲಿ ಭಾರತ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಕೆನ್ಯಾದ ನಾಯಕರು ಪಾಲ್ಗೊಳ್ಳಲಿದ್ದಾರೆ. ಆದರೆ ಚೀನಾ ಪಾಲ್ಗೊಳ್ಳುವುದಿಲ್ಲ ಎಂದು ಫ್ರಾನ್ಸ್ ಸರಕಾರ ಗುರುವಾರ ಹೇಳಿದೆ.
ಜೂನ್ 15ರಿಂದ 17ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಭಾಗವಹಿಸುವುದಿಲ್ಲ ಮತ್ತು `ಶ್ರಿಮಂತ ದೇಶಗಳ ಕ್ಲಬ್ ಎಂದು ಕೆಲವರು ಟೀಕಿಸುವ ಜಿ7ರ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವುದನ್ನು ಮುಂದುವರಿಸಿದೆ ಎಂದು ಫ್ರಾನ್ಸ್‌ನ ಅಧಿಕಾರಿಗಳು ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
