Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವತಿಯರ ಸ್ನೇಹವೇ ಬಂಡವಾಳ: ಆ್ಯಪ್ ಮೂಲಕ ಪರಿಚಯಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಬಂಧನ

Spread the love

ರಾಮನಗರ: ಆ್ಯಪ್​​ ಒಂದರ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಬಳಿಕ ಅವರನ್ನು ಬ್ಲ್ಯಾಕ್​ಮೇಲ್​​ ಮಾಡುತ್ತಿದ್ದ ಆರೋಪಿಯನ್ನು ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ, ಸದ್ಯ ಬೆಂಗಳೂರಿನ ಮಲ್ಲೇಶ್ವರಂ ವಾಸಿ ಶಿವಶಂಕರ್ ಬಂಧಿತ ಆರೋಪಿಯಾಗಿದ್ದಾನೆ. ಯುವತಿಯರಿಗೆ ವರ್ಕ್‌ ಫ್ರಮ್‌ ಹೋಮ್‌ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ ಈತ ಅವರಿಂದ ಫೋಟೋ ಪಡೆದುಕೊಳ್ಳುತ್ತಿದ್ದ. ಬಳಿಕ ಅದನ್ನು ಅಶ್ಲೀಲವಾಗಿ ಎಡಿಟ್​​ ಮಾಡಿ ಬೆದರಿಸುತ್ತಿದ್ದ ಎನ್ನಲಾಗಿದೆ.

ಕಗ್ಗಲಿಪುರ ಮೂಲದ ಯುವತಿಗೆ ಬ್ಲ್ಯಾಕ್​​ಮೇಲ್​​

ಕೆಲ ದಿನಗಳ ಕೆಳಗೆ ಬೆಂಗಳೂರು ಹೊರವಲಯದ ಕಗ್ಗಲಿಪುರ ಮೂಲದ ಯುವತಿಯೊಬ್ಬಳಿಗೆ ಈ ಶಿವಶಂಕರ್ ಎಂಬಾತನ ಪರಿಚಯ ಆಗಿತ್ತು. ಈಕೆಗೂ ಈತ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಅಲ್ಲದೆ ಆಕೆಯಿಂದ 500 ರೂಪಾಯಿ ಹಣ ಮತ್ತು ಫೋಟೋ ಸೇರಿ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದ. ಯುವತಿ ನೀಡಿದ್ದ ಫೋಟೋವನ್ನು ಅಶ್ಲೀಲವಾಗಿ ಎಡಿಟ್​​ ಮಾಡಿದ್ದ ಆರೋಪಿ ಅದನ್ನು ಆಕೆಯ ಪರಿಚಯಸ್ಥರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ನೊಂದ ಯುವತಿ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಯುವತಿಯ ದೂರಿನ ಅನ್ವಯ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಲವರಿಗೆ ಕಿರುಕುಳ ನೀಡಿರುವ ಆರೋಪ

ಅಂದಹಾಗೆ ಬಳ್ಳಾರಿ ಮೂಲದ ಶಿವಶಂಕರ್ ಬೆಂಗಳೂರಿನಲ್ಲಿ ಕೊರಿಯರ್ ಹಾಗೂ ಓಲಾ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆ್ಯಪ್ ಮೂಲಕ ಸಾಕಷ್ಟು ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಈತ ಹಲವರಿಗೆ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಮನೆಯಿಂದಲೇ ಮಾಡುವ ಕೆಲಸ ಕೊಡಿಸುವುದಾಗಿ ಹೇಳುವ ಈತನನ್ನು ನಂಬಿ ಮೋಸ ಹೋದವರು ಹಲವರಿದ್ದು, ಇಂತಹ ವ್ಯಕ್ತಿಗಳಿಂದ ಆದಷ್ಟು ದೂರವಿರುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಯುವತಿಯರ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ಕಿರುಕುಳ ನೀಡುತ್ತಿದ್ದ ಪಾಪಿ ಕೊನೆಗೂ ಅಂದರ್ ಆಗಿದ್ದು, ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.


Spread the love
Share:

administrator

Leave a Reply

Your email address will not be published. Required fields are marked *