ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆ ಅಮಾನತುಗೊಂಡಿದ್ದ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅವರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ!

ಪಾಟ್ನಾ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅಮಾನತುಗೊಂಡಿದ್ದ ಕೇಂದ್ರ ಮಾಜಿ ಸಚಿವ ಆರ್.ಕೆ.ಸಿಂಗ್ (R.K.Singh) ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಬಿಜೆಪಿ ಬಿಹಾರದ ತನ್ನ ಬಂಡಾಯ ನಾಯಕರ ಮೇಲೆ ಗಮನ ಹರಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಹಾರದ ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಸಚಿವ ಆರ್.ಕೆ.ಸಿಂಗ್, ಶಾಸಕಾಂಗ ಸದಸ್ಯರಾದ ಅಶೋಕ್ ಅಗರ್ವಾಲ್ ಮತ್ತು ಕಟಿಹಾರ್ ಮೇಯರ್ ಉಷಾ ಅಗರ್ವಾಲ್ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು
ಬಿಹಾರದ ಅರ್ರಾ ಕ್ಷೇತ್ರದ ಮಾಜಿ ಸಂಸದ ಸಿಂಗ್, 2024 ರ ಚುನಾವಣೆಯಲ್ಲಿ ಸೋತಾಗಿನಿಂದ ಬಿಜೆಪಿ ಮತ್ತು ಬಿಹಾರ ಸರ್ಕಾರದ ವಿರುದ್ಧ ಟೀಕಾಕಾರರಾಗಿದ್ದರು. ಬಿಹಾರದಲ್ಲಿ ಎನ್ಡಿಎ ನಾಯಕತ್ವ ಮತ್ತು ಕೆಲವು ಮಿತ್ರಪಕ್ಷಗಳ ಅಭ್ಯರ್ಥಿಗಳ ವಿಶ್ವಾಸಾರ್ಹತೆಯನ್ನು ಸಿಂಗ್ ಪ್ರಶ್ನಿಸುತ್ತಿದ್ದರು.