ಚಿನ್ನ ಬಿಡಿ,ಬೆಳ್ಳಿ ಖರೀದಿಸಿ-ಬೆಲೆಯ ರಹಸ್ಯ ಬಿಚ್ಚಿಟ್ಟ ವರದಿ

ನೀವು ಇದುವರೆಗೂ ಬೆಳ್ಳಿ ಮೇಲೆ ಹೂಡಿಕೆ ಮಾಡಿಲ್ಲವಾ? ಹಾಗಾದ್ರೆ Citi ನೀಡಿರುವ ವರದಿ ನಿಮ್ಮನ್ನು ಬೆಳ್ಳಿ ಹೂಡಿಕೆಯತ್ತ ಸೆಳೆಯಬಹುದು. ಮುಂದಿನ ಕೆಲವೇ ತಿಂಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ $40 ಏರಿಕೆಯಾಗುವ ಸಾಧ್ಯತೆಗಳಿವೆ ಎಂದು Citi ವರದಿ ಮಾಡಿದೆ.

ಕಳೆದ ಕೆಲ ದಿನಗಳಿಂದ ಬೆಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದ್ದು, ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದ್ಯ ಬೆಳ್ಳಿ ಬೆಲೆ (Silver Price) $38 ಆಗಿದ್ದು, ಒಂದು ತಿಂಗಳಲ್ಲಿ ಶೇ.3 ಮತ್ತು ವರ್ಷದಲ್ಲಿಯೇ ಶೇ.24ರಷ್ಟು ಏರಿಕೆ ಕಂಡು ಬಂದಿದೆ. 2025ರಲ್ಲಿ ಈವರೆಗೆ ಬೆಳ್ಳಿ ಬೆಲೆ ಶೇ.30ರಷ್ಟು ಹೆಚ್ಚಳಗೊಂಡಿದೆ. ಈ ಏರಿಕೆ 13 ವರ್ಷಗಳಲ್ಲಿ ಅತಿ ಹಚ್ಚು ಏರಿಕೆಯಾಗಿದ್ದು, ಅತ್ಯಧಿಕ ಬೆಲೆಯಲ್ಲಿ ಬೆಳ್ಳಿಯ ವಹಿವಾಟು ನಡೆಯುತ್ತಿದೆ. Citi ವರದಿ ಪ್ರಕಾರ, ಮುಂದಿನ 3 ತಿಂಗಳಲ್ಲಿ $38 ರಿಂದ್ $40 ಹೆಚ್ಚಾಗಬಹುದು. ನಂತರದ 6 ರಿಂದ 12 ತಿಂಗಳಲ್ಲಿ ಬೆಳ್ಳಿ ಬೆಲೆ $43ರಷ್ಟು ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಬೆಳ್ಳಿ ಮೇಲಿನ ಹೂಡಿಕೆ ಲಾಭದಾಯಕ (Silver Investment)
Citi ವಿಶ್ಲೇಷಕರ ಪ್ರಕಾರ, ಹಂತ ಹಂತವಾಗಿ ಬೆಳ್ಳಿಯ ಉಪಲಬ್ದತೆಯಲ್ಲಿ ಕುಸಿತ ಕಾಣಿಸುತ್ತಿದೆ. ನಿರಂತರವಾಗಿ 5 ವರ್ಷದಿಂದ ಬೆಳ್ಳಿಯ ಬೇಡಿಕೆಯನ್ನು ಪೂರ್ಣ ಮಾಡಲಾಗುತ್ತಿಲ್ಲ. 2025ರಲ್ಲಿ ಜಗತ್ತಿನ ಬೇಡಿಕೆ 1.20 ಬಿಲಿಯನ್ ಔನ್ಸ್ ಆಗಿರಲಿದೆ. ಆದ್ರೆ ಪೂರೈಕೆ ಮಾತ್ರ ಕೇವಲ 1.05 ಬಿಲಿಯನ್ ಮಾತ್ರ ಆಗಿದೆ. ಇದರರ್ಥ ಷೇರುದಾರರು ಬೆಲೆ ಏರಿಕೆಯಾಗುವರೆಗೂ ತಮ್ಮಲ್ಲಿಯ ಬೆಳ್ಳಿಯನ್ನು ಮಾರಾಟ ಮಾಡಲ್ಲ. ಹೂಡಿಕೆದಾರರು ಬೆಳ್ಳಿಯನ್ನು ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳಲು ಬಯಸುತ್ತಾರೆ. ಇದರಿಂದ ಬೆಳ್ಳಿ ಬೇಡಿಕೆ ಪ್ರಮಾಣ ಏರಿಕೆಯಾಗುತ್ತಲಿರುತ್ತದೆ.
ಕೇವಲ ಚಿನ್ನ ಮಾತ್ರವಲ್ಲ ಇಂದು ಬೆಳ್ಳಿ ಮೇಲಿನ ಹೂಡಿಕೆ ಲಾಭದಾಯಕವಾಗಲಿದೆ.
ಚಿನ್ನ ಮತ್ತು ಬೆಳ್ಳಿ ಅನುಪಾತ ಎಷ್ಟು? (Gold And Silver Price Ratio)
ಜನವರಿಯಲ್ಲಿ ಚಿನ್ನ ಮತ್ತು ಬೆಳ್ಳಿ ಅನುಪಾತ 100ರ ಆಸುಪಾಸಿನಲ್ಲಿತ್ತು. ಇದೀಗ ಅನುಪಾತ ಇಳಿಕೆಯಾಗಿ 85ಕ್ಕೆ ತಲುಪಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ತೋರಿಸುತ್ತಿದೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ದೀರ್ಘ ಸಮಯದವರೆಗೆ ಚಿನ್ನ-ಬೆಳ್ಳಿ ಅನುಪಾತ 70ರಷ್ಟಾಗಿತ್ತು.
ಬೆಳ್ಳಿ ಬೇಡಿಕೆ ಹೆಚ್ಚಾಗಲು ಕಾರಣ ಏನು? (Silver Demand Increased in Global Market)
ಬೆಳ್ಳಿ ಇಂದು ಕೇವಲ ಆಭರಣ ಮಾತ್ರವಾಗಿ ಉಳಿದಿಲ್ಲ. ಇದೀಗ ಉದ್ದಿಮೆದಾರು ಮತ್ತು ಹೂಡಿಕೆದಾರರ ಪ್ರಮುಖ ವಸ್ತುವಾಗಿ ಬದಲಾಗಿದೆ. ಸೋಲಾರ್ ಎನರ್ಜಿ, ಇಲೆಕ್ಟ್ರಾನಿಕ್ ಮತ್ತು ನೂತನ ತಂತ್ರಜ್ಞಾನ ಸೇರಿದಂತೆ ಉತ್ಪದನಾ ಕ್ಷೇತ್ರಗಳಲ್ಲಿ ಬೆಳ್ಳಿ ಬಳಕೆ (Silver Use) ಮಾಡಲಾಗುತ್ತದೆ. ಈ ಕಾರಣದಿಂದ ವಿಶ್ವದಾದ್ಯಂತ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ.
ಚಿನ್ನದ ಬೆಲೆ ಇಳಿಕೆ ಭವಿಷ್ಯ (Gold Price Prediction)
Citi ತನ್ನ ವರದಿಯಲ್ಲಿ ಬೆಳ್ಳಿ ಹೂಡಿಕೆಯ ಸಲಹೆ ನೀಡಿದ್ರೆ, ಮತ್ತೊಂದೆಡೆ ಚಿನ್ನದ ಕುರಿತು ಸಹ ಮಾಹಿತಿಯನ್ನು ನೀಡಿದೆ.
ಈ ವರ್ಷ 2025ರಲ್ಲಿ ಚಿನ್ನದ ಬೆಲೆ ಶೇ.27ರಷ್ಟು ಏರಿಕೆಯಾಗಿರಬಹುದು. ಆದ್ರೆ ಈ ಏರಿಕೆ ವೇಗ ನಿಧಾನವಾಗಿ ಇಳಿಕೆಯಾಗಲಿದೆ. Citi ತಜ್ಞರ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ ಚಿನ್ನದ ಬೆಲೆ $3,000 ಗಡಿ ದಾಟಬಹುದು. ಆದ್ರೆ 2026ರ ಎರಡನೇ ತ್ರೈಮಾಸಿಕ ವೇಳೆಗೆ ಚಿನ್ನದ ಬೆಲೆ $2,500 ರಿಂದ $2,700 ರೂ.ಗೆ ಇಳಿಕೆಯಾಗಬಹುದು ಎಂದು ಭವಿಷ್ಯ ನುಡಿದಿದೆ.
