Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫೋರ್ಜರಿ ಚೆಕ್ ನಗದೀಕರಣ: ಬ್ಯಾಂಕ್ ನಿರ್ಲಕ್ಷ್ಯಕ್ಕೆ ಬ್ಯಾಂಕ್ ಮಾತ್ರ ಹೊಣೆ, ಕೇರಳ ಹೈಕೋರ್ಟ್ ಮಹತ್ವದ ತೀರ್ಪು

Spread the love

Law may be an ass But is it kicking in in India? - Star of Mysore

ಕೇರಳ : ಫೋರ್ಜರಿ ಮಾಡಿದ ಚೆಕ್ ಗಳನ್ನು ಸರಿಯಾಗಿ ಗಮನಿಸದೇ, ಬ್ಯಾಂಕ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕ್ಯಾಶ್ ಮಾಡಿದಲ್ಲಿ, ಈ ತಪ್ಪಿಗೆ ಆ ಬ್ಯಾಂಕ್ ಮಾತ್ರವೇ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಒಂದುವೇಳೆ ಬ್ಯಾಂಕಿನ ಗ್ರಾಹಕರಿಗೆ ಚೆಕ್ ನಕಲಿ ಎಂದು ಮೊದಲೇ ತಿಳಿದಿತ್ತು ಎಂದು ಸಾಬೀತಾದಲ್ಲಿ, ಪುರಾವೆಗಳಿದ್ದಲ್ಲಿ ಮಾತ್ರ ಬ್ಯಾಂಕ್‌ಗಳು ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.

ಆರ್.ರಮೇಶ್ ಮತ್ತು ಬ್ಯಾಂಕ್ ಆಫ್ ಬರೋಡಾ (ಹಿಂದಿನ ವಿಜಯ ಬ್ಯಾಂಕ್) ನಡುವಿನ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದ್ದು ಅಧಿಕೃತ ಸಹಿದಾರರ ಸಹಿಯನ್ನು ಫೋರ್ಜರಿ ಮಾಡಲಾಗಿದ್ದ ಚೆಕ್‌ ಅನ್ನು ಬ್ಯಾಂಕ್ ನಗದೀಕರಿಸಿ ಬ್ಯಾಂಕ್‌ ನಿರ್ಲಕ್ಷ್ಯ ತೋರಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *