ಪೆಸಿಫಿಕ್ ಮಹಾಸಾಗರದಲ್ಲಿ ಮುಳುಗಿದ್ದ ಹಡಗಿನಲ್ಲಿ ಫೋರ್ಡ್ ಕಾರು ಪತ್ತೆ: ಅನ್ವೇಷಕರಿಗೆ ಅಚ್ಚರಿ

ವಾಷಿಂಗ್ಟನ್: ಎರಡನೇ ಮಹಾಯುದ್ಧದ ಸಂದರ್ಭ ಪೆಸಿಫಿಕ್ ಮಹಾಸಾಗರದಲ್ಲಿ ಮುಳುಗಿದ್ದ ಹಡಗನ್ನು ಅನ್ವೇಷಿಸಲು ಹೊರಟ ತಂಡಕ್ಕೆ ಅಚ್ಚರಿ ಉಂಟಾಗಿದೆ. 1942 ರಲ್ಲಿ ಮುಳುಗಿದ್ದ ಹಡಗಿನಲ್ಲಿ ಫೋರ್ಡ್ ಕಾರೊಂದನ್ನು ಪಾರ್ಕ್ ಮಾಡಿರುವುದನ್ನು ಅನ್ವೇಷಕರು ಪತ್ತೆ ಮಾಡಿದ್ದಾರೆ.
ಇದು ಇತಿಹಾಸಕಾರರಲ್ಲೂ ಗೊಂದಲ ಮೂಡಿಸಿದೆ.
ಏಪ್ರಿಲ್ 19 ರಂದು ಮೊದಲ ಬಾರಿಗೆ ಪೆಸಿಫಿಕ್ ಮಹಾಸಾಗರದಲ್ಲಿ ಯುಎಸ್‌ಎಸ್ ಯಾರ್ಕ್‌ಟೌನ್ ವಿಮಾನವಾಹಕ ನೌಕೆಯ ಧ್ವಂಸಗೊಂಡ ಸ್ಥಳಕ್ಕೆ ರಿಮೋಟ್ ಕ್ಯಾಮೆರಾವನ್ನು ಕಳುಹಿಸಿದ ನಂತರ ಎನ್‌ಒಎಎ ಸಾಗರ ಪರಿಶೋಧನಾ ಸಂಶೋಧಕರು ಈ ಕಾರನ್ನು ಕಂಡುಹಿಡಿದಿದ್ದಾರೆ. ಜೂನ್ 1942 ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭ ಜಪಾನಿನ ಜಲಾಂತರ್ಗಾಮಿ ನೌಕೆ ಮುಳುಗಿತ್ತು. ಅದೇ ಹಡಗಿನಿಂದ ಫೋರ್ಡ್ ಕಾರನ್ನು ಪತ್ತೆ ಮಾಡಲಾಗಿದೆ.
809 ಅಡಿ ಉದ್ದದ ಯುಎಸ್‌ಎಸ್ ಯಾರ್ಕ್‌ಟೌನ್ ಈಗ ವಾಯುವ್ಯ ಹವಾಯಿಯನ್ ದ್ವೀಪಗಳಲ್ಲಿರುವ ಪಾಪಹಾನೌಮೋಕುವಾಕಿಯಾ ಸಾಗರ ರಾಷ್ಟ್ರೀಯ ಸ್ಮಾರಕದಲ್ಲಿ ಪೆಸಿಫಿಕ್ ಮಹಾಸಾಗರದ ಮೇಲ್ಮೈಯಿಂದ ಸುಮಾರು ಮೂರು ಮೈಲುಗಳಷ್ಟು ಆಳದಲ್ಲಿ ಅವಶೇಷವಾಗಿ ಉಳಿದಿದೆ. ಇದು 90 ವಿಮಾನಗಳನ್ನು ನಿರ್ವಹಿಸುವ ಮತ್ತು 2,200 ನಾವಿಕರನ್ನು ನೇಮಿಸುವ ಸಾಮರ್ಥ್ಯವನ್ನು ಹೊಂದಿತ್ತು.
ಅನ್ವೇಷಕರು ಹಡಗನ್ನು ವೀಕ್ಷಿಸುತ್ತಿದ್ದ ಸಂದರ್ಭ ಅಚ್ಚರಿ ಎಂಬಂತೆ ಮಿಲಿಟರಿ ಜೀಪ್‌ನಂತೆ ಕಾಣುವ ವಾಹನವನ್ನು ಪತ್ತೆ ಮಾಡಿ ಆಘಾತಕ್ಕೊಳಗಾಗಿದ್ದಾರೆ. ಅಷ್ಟಕ್ಕೂ ಆ ಹಡಗಿನಲ್ಲಿ ಕಾರು ಏಕೆ ಇತ್ತು ಎಂಬ ಪ್ರಶ್ನೆ ಅವರನ್ನು ಕಾಡಿದೆ. ಎನ್‌ಒಎಎ ಸಿಬ್ಬಂದಿ ಯುಎಸ್‌ಎಸ್ ಯಾರ್ಕ್‌ಟೌನ್‌ಗೆ ಹೇಗೆ ಅಥವಾ ಏಕೆ ಬಂದಿತು ಎಂದು ತಿಳಿದಿಲ್ಲ ಎಂದಿದ್ದಾರೆ. ಈ ನಿಗೂಢ ವಾಹನವನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೇಳಿದ್ದಾರೆ. ಯಾರಿಗಾದರೂ ಈ ಬಗ್ಗೆ ತಿಳಿದಿದ್ದರೆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ತಿಳಿಸುವಂತೆ ಕೇಳಲಾಗಿದೆ