ಕೋತಮಂಗಲಂನಲ್ಲಿ ಸಂಭವಿಸಿದ ಫುಟ್‌ಬಾಲ್ ಗ್ಯಾಲರಿ ಕುಸಿತ, 15 ಜನರಿಗೆ ಗಾಯ, ಪ್ರೇಕ್ಷಕರ ಆತಂಕ

ಕೋತಮಂಗಲಂ: ಫುಟ್‌ಬಾಲ್ ಪಂದ್ಯಾವಳಿ ವೇಳೆ ಏಕಾಏಕಿ ಫುಲ್‌ಬಾಲ್ ಗ್ಯಾಲರಿ ಕುಸಿದ ಘನಘೋರ ಘಟನೆ ನಡೆದಿದೆ. ಕೋತಮಂಗಲಂನಲ್ಲಿ ಭಾನುವಾರ ಸಂಜೆ ನಡೆದ ಅಡಿವಾಡ್ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಂದ್ಯ ಪ್ರಾರಂಭವಾಗುವ ಸುಮಾರು 10 ನಿಮಿಷಗಳ ಮೊದಲು ಈ ಘಟನೆ ಸಂಭವಿಸಿದೆ.

ಘಟನೆ ಸಂದರ್ಭದಲ್ಲಿ 4,000 ಕ್ಕೂ ಹೆಚ್ಚು ಪ್ರೇಕ್ಷಕರು ಸ್ಥಳದಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.ಮಾಧ್ಯಮ ವರದಿಗಳ ಪ್ರಕಾರ, ಗಾಯಾಳುಗಳಲ್ಲಿ ಹದಿನೈದು ಜನರನ್ನು ಕೋತಮಂಗಲಂನ ಬಸೆಲಿಯೋಸ್ ವೈದ್ಯಕೀಯ ಮಿಷನ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಇತರ ಐವರನ್ನು ಧರ್ಮಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೆನ್ನುಮೂಳೆಯ ಗಾಯದಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ರಾಜಗಿರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸ್ಥಳೀಯ ಅಧಿಕಾರಿಗಳು ಮತ್ತು ತುರ್ತು ಸೇವೆಗಳು ತ್ವರಿತವಾಗಿ ಪ್ರತಿಕ್ರಿಯಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
