Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖ್ಯಾತ ಮಲಯಾಳಂ ರ‍್ಯಾಪ್ ಸ್ಟಾರ್ ವಿರುದ್ಧ ಅತ್ಯಾಚಾರ ಪ್ರಕರಣ

Spread the love

ನವದೆಹಲಿ: ಮಲಯಾಳಂನ ಫೇಮಸ್ ರ‍್ಯಾಪ್ ಸಿಂಗರ್ ವೇದನ್ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಪ್ರತಿಭೆಯಿಂದ ಹಾಡಿನ ಸಾಹಿತ್ಯ ರಚಿಸುವ ಮೂಲಕ ಆಲ್ಬಂ ಸಾಂಗ್ ಹಾಡಿ ಸೋಶಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟಿಗೆ ಮಲಯಾಳಂ ರ‍್ಯಾಪ್ ಸ್ಟಾರ್ ಎಂದೇ ಇವರು ಖ್ಯಾತಿ ಪಡೆದಿದ್ದಾರೆ. ಇದೀಗ ರ‍್ಯಾಪ್ ಸ್ಟಾರ್ ಹಿರಣ್ ದಾಸ್ ಮುರಳಿ ವೇದನ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಸುಳ್ಳು ಭರವಸೆಯನ್ನು ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕಾರ ಪೊಲೀಸರು ಆತನನ್ನು ಸೆ. 10ರಂದು ಪ್ರಕರಣದ ಆಧಾರದ ಮೇಲೆ ಆತನನ್ನು ಬಂಧಿಸಿದ್ದಾರೆ. ಕೇರಳ ಹೈಕೋರ್ಟ್‌ನಿಂದ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ, ಬಂಧನ ಕ್ಕೊಳಗಾದ ಕೆಲವೇ ಗಂಟೆಯಲ್ಲಿ ಅಂದರೆ ಅದೇ ದಿನ ಸಂಜೆ ಪೊಲೀಸ್ ಠಾಣೆಯಿಂದ ಬಿಡುಗಡೆಯಾಗಿದ್ದಾರೆ.

ಮಲಯಾಳಂನ ಜನಪ್ರಿಯ ರ‍್ಯಾಪರ್ ಹಿರಂದಾಸ್ ಮುರಳಿ ಅಲಿಯಾಸ್ ವೇದನ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈತನ ಮೇಲೆ ಪ್ರಕರಣ ದಾಖಲಾಗಿದ್ದು ಇದೇ ಮೊದಲೇನಲ್ಲ‌ ಈ ಹಿಂದೆ ಗಾಂಜಾ ಕೇಸ್ ನಲ್ಲಿಯೂ ಕೂಡ ಈತನನ್ನು ಬಂಧಿಸಲಾಗಿತ್ತು. ಇದೀಗ ವೇದನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದನ್ನು ಮತ್ತೆ ಪುನಃ ತನಿಖೆ ಮಾಡಿದ್ದು ಈ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ‘ಮಧ್ಯಂತರ ಜಾಮೀನು’ ನೀಡಿದೆ.

2025ರ ಎಪ್ರಿಲ್ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿದ್ದ ಬೆನ್ನಲ್ಲೆ ಆತ ತಲೆ ಮರೆಸಿಕೊಂಡಿದ್ದನು. ದೇಶ ಬಿಟ್ಟು ಹೋಗಲು ಪ್ರಯತ್ನಿಸಬಹುದೆಂಬ ನಿಟ್ಟಿನಲ್ಲಿ ಪೊಲೀಸರು ಈ ಹಿಂದೆಯೇ ಆತನಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಬಳಿಕ ಅತ್ಯಾಚಾರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಆಗಸ್ಟ್ 27ರಂದು ಕೇರಳ ಹೈಕೋರ್ಟ್ ವೇದನ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆ ಪ್ರಕಾರ ಸೆ. 8 ಹಾಗೂ 9 ಒಟ್ಟು ಎರಡು ದಿನಗಳ ಕಾಲ ತನಿಖೆಗೆ ಹಾಜರಾಗುವಂತೆ ಸೂಚನೆ ಸಹ ನೀಡಲಾಗಿತ್ತು. ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಸೆ. 9ರಂದು ಆತನನ್ನು ಬಿಡುಗಡೆ ಮಾಡಲಾಯಿತು. ಬಳಿಕ ಹೆಚ್ಚುವರಿ ತನಿಖೆಗೆ ಸೆ. 10ರಂದು ಮತ್ತೆ ಹಾಜರಾಗುವಂತೆ ಕೋರ್ಟ್ ಸೂಚಿಸಿದ್ದು ಈ ವೇಳೆ ವಿಚಾರಣೆಯ ಸಮಯದಲ್ಲಿ ಆತನ ಬಂಧಿಸಿ ಜಾಮೀನು ನೀಡಲಾಗಿತ್ತು.

2021 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ವೇದನ್ ತನ್ನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾನೆ. ಬಳಿಕ ಈ ಸಂಬಂಧ ಪ್ರೀತಿಯಾಗಿ ಬದಲಾಗಿದ್ದು ಮದುವೆಯಾಗುದಾಗಿ ನಂಬಿಸಿ 2021 ಮತ್ತು 2023ರ ನಡುವೆ ಕೋಳಿಕ್ಕೋಡ್, ಕೊಚ್ಚಿ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಬಾರಿ ದೈಹಿಕ ಸಂಪರ್ಕ ದಲ್ಲಿ ತೊಡಗಿದ್ದನು ಬಳಿಕ ಮದುವೆಯನ್ನು ಆತ ನಿರಾಕರಿಸಿದ್ದಾನೆ ಎಂದು ಆರೋಪಿಸಿ ವೈದ್ಯರೊಬ್ಬರು ಪ್ರಕರಣ ದಾಖಲಿಸಿದ್ದರು.

ಇಬ್ಬರೂ ಲಿವ್ ಇನ್ ಸಂಬಂಧದಲ್ಲಿದ್ದು ಆ ಸಮಯದಲ್ಲಿ ಯುವತಿಯು ವೇದನ್ ಗೆ ಆರ್ಥಿಕ ಸಹಾಯವನ್ನು ಸಹ ನೀಡಿದ್ದಾರೆ. ವೇದನ್ ಇತರ ಯುವತಿಯರನ್ನು ಇದೇ ರೀತಿ ವಂಚಿಸಿದ್ದಾರೆ ಎಂದು ವಾದಿಸಿ ಆತನಿಗೆ ಯಾವುದೆ ಕಾರಣಕ್ಕೂ ಜಾಮೀನು ನೀಡದಂತೆ ಹಾಗೂ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸುವಂತೆ ಸಂತ್ರಸ್ತೆ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ವೇದನ್ ಪರ ವಕೀಲರು, ದೂರುದಾರರು ಅಭಿಮಾನಿಯಾಗಿ ಅವರನ್ನು ಸಂಪರ್ಕಿಸಿದ ನಂತರ ಈ ಸಂಬಂಧವು ಸಮ್ಮತಿಯಿಂದ ಆರಂಭವಾಗಿದೆ ಹೀಗಾಗಿ ಇದು ಅತ್ಯಾಚಾರವಲ್ಲ ಎಂದು ಪ್ರತಿವಾದಿಸಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಈ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಕ್ಕೆ ಕೋರ್ಟ್ ಸಮ್ಮತಿಸಿ ನಿರೀಕ್ಷಣಾ ಜಾಮೀನು ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *