ನಕಲಿ ಅಂಕಪಟ್ಟಿ, ಆಧಾರ್ ಕಾರ್ಡ್ ದಂಧೆ: ಇಬ್ಬರ ಬಂಧನ

ಇತ್ತೀಚಿನ ದಿನಗಳಲ್ಲಿ ಹಣವಿದ್ದರೆ ಏನು ಬೇಕಾದರೂ ಸಿಗುತ್ತಿದೆ ಎನ್ನುವುದಕ್ಕೆ ಪೂರಕವಾಗಿಯೇ, ಡಿಗ್ರಿ ಮತ್ತು ಡಬಲ್ ಡಿಗ್ರಿ ಮಾರ್ಕ್ಸ್ ಕಾರ್ಡ್‌ಗಳನ್ನು (Crime) ಮೂಲದಂತೆಯೇ ಮುದ್ರಿಸಿ (Fake docements) ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಜೊತೆಗೆ ಓಯೊ ರೂಮ್‌ಗಳಿಗೆ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸುತ್ತಿದ್ದ (Bengaluru) ಖತರ್ನಾಕ್ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಇದೀಗ ಸೈಬರ್ ಸೆಂಟರ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದ ಇಬ್ಬರನ್ನು ಹೆಬ್ಬಗೋಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಯಶವಂತ್, ರಘುವೀರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಹೆಬ್ಬಗೋಡಿಯಲ್ಲಿ ಗುರುದತ್ತ ಸೈಬರ್ ಸೆಂಟರ್ ಹೆಸರಲ್ಲಿ ಈ ಫೇಕ್ ದಂಧೆ ನಡೆಸುತ್ತಿದ್ದರು. ಒಂದೊಂದು ಮಾರ್ಕ್ಸ್ ಕಾರ್ಡ್ಗಳಿಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೆ ಆರೋಪಿಗಳು ಓಯೋ ದಂತಹ ರೂಮ್ ಗಳಿಗೆ ಹೋಗುವವರಿಗೆ ನಕಲಿ ಆಧಾರ್ ಕಾರ್ಡ್ ಗಳನ್ನು ನೀಡುತ್ತಿದ್ದರು ಎನ್ನಲಾಗಿದೆ. ಯಾವುದೇ ವಿಶ್ವವಿದ್ಯಾಲಯದ ಮಾರ್ಕ್ಸ್ ಕಾರ್ಡ್ ಬೇಕಿದ್ದರೂ ಈ ಖತರ್ನಾಕ್ ಗ್ಯಾಂಗ್ ಮಾಡಿಕೊಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಪ್ರಸಿದ್ಧ ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ಪ್ರೌಡ ಶಿಕ್ಷಣ ಪರೀಕಾ ಮಂಡಳಿ ಸೇರಿದಂತೆ ಅನೇಕ ಸರ್ಕಾರಿ ಸೀಲುಗಳು ಪತ್ತೆಯಾಗಿದೆ. ಸದ್ಯ ಆರೋಪಿಗಳ ಈ ಕೆಲಸ ನೋಡಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ.
ಒಂದು sslc ಮಾರ್ಕ್ಸ್ ಕಾರ್ಡ್ ಗೆ ಸುಮಾರು 5 ರಿಂದ 30 ಸಾವಿರಕ್ಕೆ ಬೇಡಿಕೆ ಇಡುತ್ತಿದ್ದರು. ಅಷ್ಟೇ ಅಲ್ಲದೆ 2 ರಿಂದ 10 ಸಾವಿರ ಪಡೆಯುತ್ತಿದ್ದರು, ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೈಬರ್ ಮೇಲೆ ದಾಳಿ ಮಾಡಿ ಎಂಟು ಮಾಕ್ಸ್ ಕಾರ್ಡ್, ಏಳು ಆಧಾರ್ಗಳು, ಸಿಪಿಯು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾರಿಗೆಲ್ಲ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ.. ನಕಲಿ ದಾಖಲೆ ಸೃಷ್ಟಿಸಿಕೊಂಡು ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿ ಜೀವಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ ವುಡ್ ನಿರ್ಮಾಪಕನ ವಿರುದ್ದ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ್ದಾರೆ ಎಂದು ರೈತರೊಬ್ಬರು ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ಹಾಗೂ ಅವರ ಸಹಚರರ ವಿರುದ್ದ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.