ಕಿಚ್ಚ ಸುದೀಪ್‌ಗೆ ಸಲ್ಮಾನ್ ಖಾನ್ ಕೊಟ್ಟ ದುಬಾರಿ ಉಡುಗೊರೆಗಳು

ಕಿಚ್ಚ ಸುದೀಪ್ ಅಭಿಮಾನಿಗಳ ವಲಯದಲ್ಲಿ ಇಂದು (ಸೆಪ್ಟೆಂಬರ್ 2) ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಸುದೀಪ್ ಅವರಿಗೆ ಈಗ 52 ವರ್ಷ. ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರು ‘ತಾಯವ್ವ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಹಿಟ್ ಚಿತ್ರ ನೀಡಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿದ್ದರು. ಆಗ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಸಲ್ಲು ಕಡೆಯಿಂದ ಹಲವು ಗಿಫ್ಟ್ಗಳು ಕಿಚ್ಚನಿಗೆ ಸಿಕ್ಕಿದ್ದವು.

ಸುದೀಪ್ ಅವರಿಗೆ ಬಾಲಿವುಡ್ ಹೊಸದಲ್ಲ. 2008ರಲ್ಲಿ ರಿಲೀಸ್ ಆದ ‘ಫೂಂಕ್’ ಚಿತ್ರದ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದರು. ಸಲ್ಮಾನ್ ಖಾನ್ ಅವರ ‘ದಬಂಗ್ 3’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದರು. ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ ಸುದೀಪ್ ಹಾಗೂ ಸಲ್ಲು ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು.
‘ದಂಬಂಗ್ 3’ ಸಿನಿಮಾ 2019ರಲ್ಲಿ ರಿಲೀಸ್ ಆಯಿತು. ನಟ, ಕೊರಿಯೋಗ್ರಾಫರ್ ಪ್ರಭುದೇವ ಅವರು ಈ ಸಿನಿಮಾ ನಿರ್ದೇಶನ ಮಾಡಿದರು. ಈ ಚಿತ್ರದ ಶೂಟ್ ವೇಳೆ ಸುದೀಪ್‌ಗೆ ಸಲ್ಲು ಅವರು ತಮ್ಮ ಫೇವರಿಟ್ ಜಾಕೆಟ್ ನೀಡಿದ್ದರು. ಈ ಜಾಕೆಟ್ನಲ್ಲಿ ಸಲ್ಲು ಅವರ ಫೇವರಿಟ್ ಶ್ವಾನದ ಚಿತ್ರ ಪ್ರಿಂಟ್ ಇತ್ತು.
ಸುದೀಪ್ ಕಾರು ಪ್ರಿಯರು. ಅವರ ಬಳಿ ವಿಶೇಷ ಕಾರುಗಳ ಸಂಗ್ರಹ ಇದೆ. ಅವರಿಗೆ ಸಲ್ಲು ಬಿಎಂಡಬ್ಲ್ಯೂ ಎಂ 5 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆ ಸಮಯದಲ್ಲಿ ಈ ಕಾರಿನ ಬೆಲೆ 1.7 ಕೋಟಿ ರೂಪಾಯಿ ಇದ್ದವು ಎನ್ನಲಾಗಿದೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.
ಯಾರಿಗೂ ಗೊತ್ತಿರದ ಮತ್ತೊಂದು ವಿಚಾರ ಇದೆ. ಸುದೀಪ್ ಅವರು ಜಿಮ್ ಫ್ರೀಕ್. ನಿತ್ಯ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಈ ಕಾರಣಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳೋ ಜಿಮ್ ಸೆಟ್ಗಳನ್ನು ಸಲ್ಮಾನ್ ಖಾನ್ ಅವರು ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಇದನ್ನು ಸುದೀಪ್ ಈಗಲೂ ಕಾಯ್ದುಕೊಂಡು ಬಂದಿದ್ದಾರೆ. ಅವರು ಶೂಟ್ಗಾಗಿ ಹೊರಗೆ ಇರುವ ವೇಳೆ ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ.