ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮತ್ತು ಯುವತಿ ಸಾವನ್ನಪ್ಪಿದ್ದಾರೆ.

ಜೂನ್ 12ರ ಗುರುವಾರ ಅಹಮದಾಬಾದ್‌ನಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಈ ದುರಂತ ಅಪಘಾತದಲ್ಲಿ, ಪ್ರಯಾಣಿಕರು, ಸಿಬ್ಬಂದಿ, ಪೈಲಟ್‌ಗಳು ಮತ್ತು ವಿಮಾನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಜನರು ಸೇರಿದಂತೆ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತ ನಡೆದ ಒಂದು ದಿನದ ಬಳಿಕ ಹೃದಯ ಬಿರಿಯುವಂಥ ವಿಚಾರಗಳು ಬೆಳಕಿಗೆ ಬರಲು ಆರಂಭಿಸಿದೆ. ಅಂತಹ ಒಂದು ಕಥೆ ಗಧಾಡಾ ತಾಲ್ಲೂಕಿನ ಅಡ್ತಾಲಾ ಗ್ರಾಮದ ಒಬ್ಬ ಯುವಕ ಮತ್ತು ಯುವತಿಯದ್ದಾಗಿದೆ.

ಲಂಡನ್‌ನಲ್ಲಿ ವಾಸಿಸುವ ಮತ್ತು ಮೂಲತಃ ಬೋಟಾಡ್ ಜಿಲ್ಲೆಯ ಗಧಾಡಾ ತಾಲ್ಲೂಕಿನ ಅಡ್ತಾಲಾ ಗ್ರಾಮದವರಾದ 27 ವರ್ಷದ ಹಾರ್ದಿಕ್ ದೇವರಾಜ್‌ಭಾಯ್ ಅವಯ್ಯಾ ಮತ್ತು ಅವರ ನಿಶ್ಚಿತ ವಧು ವಿಭೂತಿಬೆನ್ ಪಟೇಲ್ ಕೂಡ ಜೂನ್ 12 ರಂದು ಏರ್ ಇಂಡಿಯಾ ವಿಮಾನದಲ್ಲಿ ಅಹಮದಾಬಾದ್‌ನಿಂದ ಲಂಡನ್‌ಗೆ ವಾಪಾಸಾಗಲು ಹೊರಟಿದ್ದರು. ಈ ಜೋಡಿ ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೂಲತಃ ಸೂರತ್‌ನವರಾಗಿದ್ದಾರೆ. ಗುರುವಾರ ಬೆಳಗ್ಗೆ ಸೂರತ್‌ನಿಂದ ಅಹಮದಾಬಾದ್‌ಗೆ ವಿಮಾನ ಪ್ರಯಾಣಕ್ಕಾಗಿ ಬಂದಿದ್ದರು. ಸಂತೋಷದ ಭವಿಷ್ಯದ ಕನಸುಗಳೊಂದಿಗೆ ಲಂಡನ್‌ಗೆ ಮರಳುತ್ತಿದ್ದ ಈ ಜೋಡಿ ತಮ್ಮ ಕುಟುಂಬವನ್ನು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.