Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚುನಾವಣಾ ಸೋಲಿನ ಸೇಡು: ಗ್ರಾಮದ ನೀರಿನ ಸಂಪರ್ಕ ಕಡಿತಗೊಳಿಸಿದ ಬಿಜೆಪಿ ಅಭ್ಯರ್ಥಿ

Spread the love

ಅಹ್ಮದಾಬಾದ್: ಗುಜರಾತ್‌ನ ಭರೂಚ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಪಂಚಾಯತ್ ಚುನಾವಣೆಯಲ್ಲಿ ತನಗೆ ಮತ ಹಾಕಿಲ್ಲ ಎಂದು ಬಿಜೆಪಿ ಅಭ್ಯರ್ಥಿಯೋರ್ವ ಗ್ರಾಮದ ಜನರಿಗೆ ನೀರಿನ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದ ಕುಡಿಯುವ ನೀರಿಲ್ಲದೆ ಗ್ರಾಮದ ಸಾವಿರಾರು ಮಂದಿ ಪರದಾಟ ನಡೆಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿ ಬಿಜೆಪಿ ಸ್ಥಳೀಯ ನಾಯಕ ಖಾಲಿದ್ ಮಾಲೆಕ್ ಮತ್ತು ಅವರ ಪುತ್ರ ಶಕೀಲ್ ಮಾಲೆಕ್ ಅವರನ್ನು ಬಂಧಿಸಲಾಗಿದೆ. ನಂತರ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಜಂಬೂಸ‌ರ್ ತಾಲೂಕು ಪಂಚಾಯತ್‌ಗೆ ದೆಹಗಾಮ್ ಸ್ಥಾನದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕೀಲ್ ಮಾಲೆಕ್ ಚುನಾವಣೆಯಲ್ಲಿ ಸೋಲನುಭವಿಸಿದ್ದ.
ಗುಜರಾತ್‌ನ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಘೋಷಣೆಯಾದ ದಿನ 10,000 ಜನಸಂಖ್ಯೆಯನ್ನು ಹೊಂದಿರುವ ದೆಹಮ್ ಗ್ರಾಮಕ್ಕೆ ನೀರು ಸರಬರಾಜು ಕಡಿತಗೊಳಿಸಲಾಗಿದೆ. ಶುಕ್ರವಾರ ಸಂಜೆ ಪೊಲೀಸರ ಮಧ್ಯಪ್ರವೇಶದ ನಂತರ ನೀರು ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ.
ಇತ್ತೀಚೆಗೆ ನಡೆದ ಗುಜರಾತ್‌ ನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿತ್ತು. 22 ಸ್ಥಾನಗಳ ಜಂಬೂಸ‌ರ್ ತಾಲೂಕು ಪಂಚಾಯತ್‌ನಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತ್ತು.

ಶಕೀಲ್ ದೆಹಗಾಮ್ ಸ್ಥಾನದಿಂದ ಸ್ಪರ್ಧಿಸಿದ್ದರು. ಈ ವಾರ್ಡ್‌ಲ್ಲಿ ಆಪ್ ಅಭ್ಯರ್ಥಿ ಸೊಹೆಲ್ ಶೇಖ್ 2,100 ಮತಗಳಿಂದ ಗೆಲುವನ್ನು ಸಾಧಿಸಿದ್ದರು. ಚುನಾವಣೆಯಲ್ಲಿ ಸೋಲಿನ ನಂತರ, ಶಕೀಲ್ ಮತ್ತು ಖಾಲಿದ್ ಮಾಲೆಕ್ ಕತ್ತಿಗಳನ್ನು ಹಿಡಿದುಕೊಂಡು ಹಳ್ಳಿ ಹಳ್ಳಿ ಸುತ್ತಾಡಿದರು. ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ್ದರು.
ಗ್ರಾಮದ ಸರಪಂಚ್ ಮೊಕ್ಸಿನ್ ಮಾಲೆಕ್ ಅವರ ಪ್ರಕಾರ, ಎಪ್ರಿಲ್ 28 ರಂದು ನೀರು ಸರಬರಾಜು ಸ್ಥಗಿತಗೊಂಡ ನಂತರ, ನೀರಾವರಿ ಸಮಿತಿಯ ಇತರ ಸದಸ್ಯರು ಖಾಲಿದ್ ಅವರಿಗೆ ನೀರಿನ ಪೂರೈಕೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದರು, ಆದರೆ ಅವರು ಮತ್ತು ಅವರ ಮಗ ತಮ್ಮ ನಿರ್ಧಾರಕ್ಕೆ ದೃಢವಾಗಿದ್ದರು.
ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವೀಡಿಯೊಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಪ್ರಕರಣ ದಾಖಲಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *