Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳ: ಹಳಿ ಮೇಲೆ ಆಟೋ ನಿಲ್ಲಿಸಿ ಪರಾರಿಯಾಗಿದ್ದ ಕುಡುಕ ಚಾಲಕ; ವಂದೇ ಭಾರತ್ ರೈಲು ಡಿಕ್ಕಿ, ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ!

Spread the love

ತಿರುವನಂತಪುರ: ಕೇರಳದ ತಿರುವನಂತಪುರಂ ಜಿಲ್ಲೆಯ ಅಕತುಮುರಿ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಆಟೋ ಚಾಲಕನೊಬ್ಬ ತನ್ನ ವಾಹನವನ್ನು ರೈಲ್ವೆ ಹಳಿ ಮೇಲೆ ಬಿಟ್ಟು ಪರಾರಿಯಾದ ಪರಿಣಾಮ, ವೇಗವಾಗಿ ಬಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಟೋಗೆ ಡಿಕ್ಕಿ ಹೊಡೆದಿದೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ರೈಲು ರಾತ್ರಿ 10.10ರ ಸುಮಾರಿಗೆ ವರ್ಕಲಾ-ಕಡಕ್ಕಾವೂರು ವಿಭಾಗದ ಬಳಿ ಬರುತ್ತಿದ್ದಾಗ, ಹಳಿ ಮೇಲೆ ಆಟೋ ಇರುವುದನ್ನು ಕಂಡು ಲೋಕೋ ಪೈಲಟ್ ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದಾರೆ.

ಆದರೂ ರೈಲಿನ ವೇಗಕ್ಕೆ ಮುಂಭಾಗವು ಆಟೋಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಸಕಾಲದಲ್ಲಿ ತೋರಿದ ಸಮಯಪ್ರಜ್ಞೆಯಿಂದಾಗಿ ಭೀಕರ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದ್ದು, ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ನಂತರ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಆಟೋದೊಳಗೆ ಯಾರೂ ಇರಲಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದ ಆಟೋ ಹಳಿಗೆ ಉರುಳಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ ಆಟೋ ಚಾಲಕ ಸುಧಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ತೀವ್ರವಾಗಿ ಮದ್ಯಪಾನ ಮಾಡಿರುವುದು ಕಂಡುಬಂದಿದೆ. ಸುಮಾರು ಒಂದು ಗಂಟೆಗಳ ಕಾಲ ಹಳಿಗಳ ಸುರಕ್ಷತೆಯನ್ನು ಪರಿಶೀಲಿಸಿದ ನಂತರ, ವಂದೇ ಭಾರತ್ ಎಕ್ಸ್‌ಪ್ರೆಸ್ ರಾತ್ರಿ 11.15ಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿ ಸುರಕ್ಷಿತವಾಗಿ ತಿರುವನಂತಪುರಂ ತಲುಪಿದೆ. ಈ ಘಟನೆಯು ಕೇರಳದ ಮದ್ಯಪಾನ ನೀತಿ ಮತ್ತು ಕುಡಿದು ವಾಹನ ಚಲಾಯಿಸುವವರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅಪಾಯದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.


Spread the love
Share:

administrator

Leave a Reply

Your email address will not be published. Required fields are marked *