Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಮತ್ತೆ ಡ್ರಗ್ಸ್ ಬೇಟೆ: ಫುಟ್‌ಪಾತ್‌ನಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನ; ₹10 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ಸೀಜ್

Spread the love

ಬೆಂಗಳೂರಿನಲ್ಲಿ ಇತ್ತೀಚಿಗೆ ಗಾಂಜಾ, ಡ್ರಗ್ಸ್ ದಂಧೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇತ್ತೀಚೆಗಷ್ಟೇ ಪೊಲೀಸರು ನಗರದ ಹಲವೆಡೆ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಇದೀಗ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಫುಟ್​ಪಾತ್​​ನಲ್ಲಿ ಗಾಂಜಾ ಮಾರುತ್ತಿದ್ದಾತನನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ಸೀಜ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಇತ್ತೀಚಿಗೆ ಗಾಂಜಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇತ್ತೀಚೆಗಷ್ಟೇ ಪೊಲೀಸರು ನಗರದ ಹಲವೆಡೆ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಈಗ ನಗರದಲ್ಲಿ ಮತ್ತೊಮ್ಮೆ ಗಾಂಜಾ ಮಾರಾಟದ ಖಚಿತ ಮಾಹಿತಿಯ ಮೇರೆಗೆ ಹಲಸೂರು ಗೇಟ್ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಕುಶಾಲ್, ನಗರದ ಕೆ.ಜಿ ರಸ್ತೆಯ ಫುಟ್ ಪಾತ್ ಮೇಲೆ 1 ಕೆ.ಜಿ ತೂಕದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಮತ್ತೊಬ್ಬ ವ್ಯಕ್ತಿಯಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ಕುಶಾಲ್ 1 ಕೆ.ಜಿಯಷ್ಟು ಗಾಂಜಾವನ್ನು ಮಾರಲು ಪ್ರಯತ್ನಿಸಿದರೆ, ಇನ್ನೂ 9 ಕೆಜಿ ಗಾಂಜಾ ಮತ್ತೋರ್ವನ ಮನೆಯಲ್ಲಿರುವುದು ತಿಳಿದು ಬಂತು. ಕೋಡಲೆ ಅವನ ಮನೆಗೆ ನುಗ್ಗಿದ ಪೊಲೀಸರು ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ನಡುವೆ ಮನೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಸದ್ಯ ಒಬ್ಬನನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು, ತಪ್ಪಿಸಿಕೊಂಡವನನ್ನು ಹುಡುಕುತ್ತಿದ್ದಾರೆ.ಆರೋಪಿ ಕುಶಾಲ್, ನಗರದ ಕೆ.ಜಿ ರಸ್ತೆಯ ಫುಟ್ ಪಾತ್ ಮೇಲೆ 1 ಕೆ.ಜಿ ತೂಕದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಮತ್ತೊಬ್ಬ ವ್ಯಕ್ತಿಯಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ಕುಶಾಲ್ 1 ಕೆ.ಜಿಯಷ್ಟು ಗಾಂಜಾವನ್ನು ಮಾರಲು ಪ್ರಯತ್ನಿಸಿದರೆ, ಇನ್ನೂ 9 ಕೆಜಿ ಗಾಂಜಾ ಮತ್ತೋರ್ವನ ಮನೆಯಲ್ಲಿರುವುದು ತಿಳಿದು ಬಂತು. ಕೋಡಲೆ ಅವನ ಮನೆಗೆ ನುಗ್ಗಿದ ಪೊಲೀಸರು ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ನಡುವೆ ಮನೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಸದ್ಯ ಒಬ್ಬನನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು, ತಪ್ಪಿಸಿಕೊಂಡವನನ್ನು ಹುಡುಕುತ್ತಿದ್ದಾರೆ.

ಬೆಂಗಳೂರಿನಲ್ಲಿ ಈ ಹಿಂದೆಯೂ ಗಾಂಜಾ ಪ್ರಕರಣ ಬೇಧಿಸಿದ್ದ ಪೊಲೀಸರು
ಇದೇ ವರ್ಷ ಬೆಂಗಳೂರಿನಲ್ಲಿ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಹಲವರ ಬಂಧನವೂ ಆಗಿದೆ. ಇದೇ ಆಗಸ್ಟ್ ತಿಂಗಳಲ್ಲಿ ಜಾಲಹಳ್ಳಿ ವ್ಯಾಪ್ತಿಯಲ್ಲಿ ಒಡಿಶಾದಿಂದ ಆಮದು ಮಾಡಿಕೊಂಡಿದ್ದ ಸುಮಾರು 41 ಕೆಜಿಯಷ್ಟು ಗಾಂಜಾ ಸಿಕ್ಕಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೊಪಿಗಳನ್ನು ಬಂಧಿಸಿದ್ದರು. ಬೆಂಗಳೂರಿನ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದಲ್ಲಿ ಇದೇ ವರ್ಷ 3 ಕೋಟಿ ರೂಪಾಯಿ ಮೌಲ್ಯದ 100 ಕೆಜಿ ಗಾಂಜಾ ಪತ್ತೆಯಾದಾಗ ಪೊಲೀಸರು ಕೇರಳ ಮೂಲದ ಆರೋಪಿಯನ್ನು ಬಂಧಿಸಿದ್ದರು.

ಈ ಹಿಂದೆ ಸಂಪಿಗೇಹಳ್ಳಿ, ಹೆಚ್​​ಎಸ್​​ಆರ್​​, ಯಲಹಂಕ ಸೇರಿದಂತೆ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಹೀಗೆ ಬೆಂಗಳೂರಿನಲ್ಲಿ ಈ ವರ್ಷ 60 ಕ್ಕೂ ಹೆಚ್ಚು ಮಾದಕ ವಸ್ತುಗಳ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *