Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಲಾಸಿ ಜೀವನಕ್ಕಾಗಿ ಡ್ರಗ್ಸ್ ದಂಧೆ

Spread the love

ಉಳ್ಳಾಲ:ಕೋಟೆಕಾರು ಮತ್ತು ಪೆರ್ಮನ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಒಟ್ಟು ಮೂವರನ್ನು ಉಳ್ಳಾಲ ಪೊಲೀಸರು ನವೆಂಬರ್ 9 ರಂದು ಬಂಧಿಸಿ, ಸುಮಾರು ₹59,300 ಮೌಲ್ಯದ 1.511 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿಯಾಗಿರುವ ಮಹಾರಾಷ್ಟ್ರದ ಮೊಹಮ್ಮದ್ ನಿಗಾರೀಸ್ (22) ಎಂಬಾತನನ್ನು ಬಂಧಿಸಲಾಗಿದೆ. ಐಷಾರಾಮಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನೊಂದು ಪ್ರಕರಣದಲ್ಲಿ, ನಾಟೆಕಲ್‌ನ ಅಬ್ದುಲ್ ಶಕೀಬ್ ಯಾನೆ ಶಾಕಿ (22) ಮತ್ತು ಪೆರ್ಮನ್ನೂರು ನಿವಾಸಿ ಸಬೀರ್ ಅಹಮ್ಮದ್ (24) ಎಂಬವರನ್ನು ಬಂಧಿಸಲಾಗಿದೆ. ಶಕೀಬನು ಬಿಸಿ ರೋಡ್‌ನ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದ.

ಇವರಿಂದ 420 ಗ್ರಾಂ ಗಾಂಜಾ ಮತ್ತು ₹6,000 ನಗದು ವಶಪಡಿಸಿಕೊಳ್ಳಲಾಗಿದೆ.

ಒಟ್ಟಾರೆಯಾಗಿ, ಪೊಲೀಸರು ಗಾಂಜಾ ಜೊತೆಗೆ ಕೃತ್ಯಕ್ಕೆ ಬಳಸಿದ ಎರಡು ತೂಕ ಮಾಪಕಗಳು, ಎರಡು ಮೊಬೈಲ್‌ಗಳು ಮತ್ತು ಒಂದು ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದಾರೆ.

ಈ ದಾಳಿಯನ್ನು ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನಿರ್ದೇಶನದಂತೆ ಎಸ್‌ಐ ಸಿದ್ದಪ್ಪ ನರನೂರ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *