Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಡ್ರಗ್ ಕ್ವೀನ್’ ಅಕ್ರಮಗಳಿಂದ ಲಕ್ಸ್ಯೂರಿ ಮನೆ, 2 ಕೋಟಿ ರೂಪಾಯಿ ಹಣ ವಶಕ್ಕೆ

Spread the love

ದೆಹಲಿ:ಹಲವು ವರ್ಷಗಳಿಂದ ಕುಸುಮ್ ಎಂಬ ಮಹಿಳೆಯ ನಡೆಸುತ್ತಿದ್ದ ಅಕ್ರಮ ವ್ಯವಹಾರ, ಮಾದಕವಸ್ತು ಸಿಂಡಿಕೇಟ್‌ಗೆ ಸಂಬಂಧಿಸಿದ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಡೆಗೂ ದೆಹಲಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಾಯುವ್ಯ ದೆಹಲಿಯ ಸುಲ್ತಾನಪುರಿ ಪ್ರದೇಶದ ನಿವಾಸಿಯಾಗಿರುವ ಆರೋಪಿ ಕುಸುಮ್​ ಅಲಿಯಾಸ್​ ‘ಡ್ರಗ್​ ಕ್ವೀನ್’​, ಹಲವು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಸುಲ್ತಾನಪುರಿಯ ಡ್ರಗ್​ ಕ್ವೀನ್​ ಎಂದೇ ಕುಖ್ಯಾತಿ ಪಡೆದಿರುವ ಈಕೆಯ ಜಾಲವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದೇ ಆದರೂ ಬಂಧಿಸುವಲ್ಲಿ ಎಡವಿದ್ದಾರೆ. ಕಳೆದ ಮಾರ್ಚ್‌ನಿಂದ ಆಕೆಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಪ್ರಸ್ತುತ, ಖಾಕಿ ಕಣ್ಣಿಗೆ ಮಣ್ಣೆರಚಿ ಕುಸುಮ್​ ಪರಾರಿಯಾಗಿದ್ದಾಳೆ. ಆಕೆಯ ಮನೆಯ ಮೇಲೆ ದಾಳಿ ನಡೆಸಿ ಆಕೆಯ ಮಗನನ್ನು ಬಂಧಿಸಿದ ಪೊಲೀಸರು, ಅಪಾರ ಪ್ರಮಾಣದ ಮಾದಕವಸ್ತು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಆಕೆಯ ಅಕ್ರಮ ಕೋಟೆಯಿಂದ ಒಟ್ಟು ಎಂಟು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಏಳು ಸುಲ್ತಾನಪುರಿಯಲ್ಲಿಯೇ ಇದ್ದರೆ, ಉಳಿದದ್ದು ರೋಹಿಣಿಯ ಸೆಕ್ಟರ್ 24 ರಲ್ಲಿದೆ. ಆರೋಪಿ ಕುಸುಮ್ ಈಗಾಗಲೇ NDPS ಕಾಯ್ದೆಯಡಿಯಲ್ಲಿ ದಾಖಲಾಗಿರುವ 12 ಪ್ರಕರಣಗಳಲ್ಲಿ ಸಿಲುಕಿದ್ದು, ಬಂಧನದ ಭೀತಿಯಲ್ಲಿ ತಲೆಮರಿಸಿಕೊಂಡಿದ್ದಾಳೆ ಎಂದು ಪೊಲೀಸ್ ದಾಖಲೆಗಳು ಬಹಿರಂಗಪಡಿಸಿವೆ.

ಈ ವರ್ಷದ ಮಾರ್ಚ್​ನಲ್ಲಿ ನಡೆದ ದಾಳಿಯಲ್ಲಿ, ಕುಸುಮ್ ಪುತ್ರ ಅಮಿತ್​ನನ್ನು ಅರೆಸ್ಟ್​ ಮಾಡಲಾಯಿತು. ಈ ಸ್ಥಳವನ್ನು ರೇಡ್ ಮಾಡಿದ ಅಧಿಕಾರಿಗಳು, 550 ಹೆರಾಯಿನ್ ಪ್ಯಾಕೆಟ್‌ಗಳು ಸೇರಿ ಇನ್ನಿತರ ಮಾದಕವಸ್ತುಗಳು, ಒಂದು ಬೈಕ್, ಎರಡು ಮೊಬೈಲ್, ಒಂದು ಐಪ್ಯಾಡ್, 13,24,788, 80 ಗ್ರಾಂ ಚಿನ್ನ, 319 ಗ್ರಾಂ ಬೆಳ್ಳಿ, 14 ಲಕ್ಷ ರೂ. ನಗದು ಮತ್ತು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ವಶಕ್ಕೆ ಪಡೆದಿದ್ದಾರೆ.

Spread the love
Share:

administrator

Leave a Reply

Your email address will not be published. Required fields are marked *