Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಯಾಂಗ್ ಬೆದರಿಕೆ ನಡುವೆಯೇ ಸಲ್ಮಾನ್ ಖಾನ್ ಹೊಸ ಕಾರು ಖರೀದಿ – 3.4 ಕೋಟಿ ಮರ್ಸಿಡೀಸ್ ಮೇಬ್ಯಾಕ್

Spread the love

ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಕಾರನ್ನ ಖರೀದಿಸಿದ್ದಾರೆ. ಅವರು ಬಳಿ ಸಾಕಷ್ಟು ಐಶಾರಾಮಿ ಕಾರ್‌ಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ಕಾಳಜಿ. ಹೀಗಾಗಿ ಮರ್ಸಿಡೀಸ್ ಮೇಬ್ಯಾಕ್ ಜಿಎಸ್‌ಎಲ್ 600 ಎಸ್‌ಯುವಿ ಕಾರನ್ನ ಬ್ಯಾಡ್‌ಬಾಯ್ ಇದೀಗ ಖರೀದಿಸಿದ್ದಾರೆ.

ಇದು ಕಪ್ಪು ಬಣ್ಣದ ವಾಹನವಾಗಿದ್ದು ಸಂಪೂರ್ಣ ಬುಲೆಟ್‌ಪ್ರೂಫ್ ಆಗಿದೆ. ಇದರ ಬೆಲೆ 3.4 ಕೋಟಿ ರೂ. ನಿಂದ ಆರಂಭವಾಗುತ್ತದೆ. ಕಾರಿನ ಒಳಗಡೆ ತನಗೆ ಬೇಕಾದಂತೆ ವಿನ್ಯಾಸ ಮಾಡಿದ್ದರಿಂದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

ಕೃಷ್ಣಮೃಗ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದೆ. ಹಲವು ಬಾರಿ ಅವರ ಮನೆ ಮೇಲೂ ಗುಂಡಿನ ದಾಳಿ ಆಗಿತ್ತು. ಕ್ರಮೇಣವಾಗಿ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಹೀಗಾಗಿ ಸಲ್ಮಾನ್ ಖಾನ್‌ಗೆ ಸರ್ಕಾರದಿಂದಲೇ ವೈ+ ಭದ್ರತೆಯನ್ನು ನೀಡಲಾಗಿದೆ.

ಈ ನಡುವೆಯೂ ಇನ್ನೂ ಹೆಚ್ಚಿನ ಭದ್ರತೆಗಾಗಿ ಸಲ್ಮಾನ್ ಖಾನ್ ಹೊಸ ಕಾರ್‌ನ್ನು ಖರೀದಿಸಿದ್ದು ಇಂದು ಗುಂಡು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ಸದ್ಯ ಜೈಲಲ್ಲಿರುವ ಲಾರೆನ್ಸ್ ಬಿಷ್ಣೋಯ್ ಜೈಲಲ್ಲಿದ್ದುಕೊಂಡೇ ತನ್ನ ಗ್ಯಾಂಗ್ ಮೂಲಕ ಸಲ್ಮಾನ್ ಖಾನ್ ಮೇಲೆ ಕಣ್ಣಿಟ್ಟಿದ್ದಾನೆ. ಸಲ್ಮಾನ್ ಖಾನ್‌ರನ್ನ ಹೊಡೆದುಹಾಕ್ತೀವಿ ಎಂದು ಬಿಷ್ಣೋಯ್ ಗ್ಯಾಂಗ್ ಹಲವು ಬಾರಿ ಬಹಿರಂಗವಾಗೇ ಹೇಳಿಕೊಂಡಿದೆ. ಹೀಗಾಗಿ ಮನೆಯಿಂದ ಸಲ್ಮಾನ್ ಖಾನ್ ಹೊರಟರೆ ಅವರಿಗೆ ವೈ+ ಭದ್ರತೆ ಕೊಡಲಾಗಿದ್ದು, ಮನೆ ಮುಂದೆಯೂ ಅತಿ ಹೆಚ್ಚಿನ ಭದ್ರತೆ ನೀಡಲಾಗಿದೆ.

ಸಲ್ಮಾನ್ ಖಾನ್ ಸೆಲೆಬ್ರಿಟಿ ಆಗಿರುವುದರಿಂದ ಅವರ ಕಾರು ಗುರುತು, ನಂಬರ್ ಹಾಗೂ ಬಣ್ಣ ತಿಳಿದಿರುವುದು ಸಾಮಾನ್ಯ. ಹೀಗಾಗೇ ಗುರುತು ಪತ್ತೆಯಾಗದಿರಲು ಸಲ್ಮಾನ್ ಖಾನ್ ಹಲವು ಬಾರಿ ಕಾರು ಬದಲಿರುಸುತ್ತಿರುತ್ತಾರೆ. ಹೀಗಾಗಿ ಭದ್ರತಾ ಕಾಳಜಿಯಿಂದ ಹೊಸ ಕಾರನ್ನು ಸಲ್ಮಾನ್ ಖಾನ್ ಖರೀದಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *