ನಿಯಂತ್ರಣ ತಪ್ಪಿ ಪಲ್ಟಿಯಾದ ಡಬಲ್ ಡೆಕ್ಕರ್ ಬಸ್: ಇಬ್ಬರು ದುರ್ಮರಣ, 23 ಜನರಿಗೆ ಗಾಯ!

ನವದೆಹಲಿ: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮಂಗಳವಾರ ತಡ ರಾತ್ರಿ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದಾರೆ. ರಾಜಸ್ಥಾನದಿಂದ ಬರುತ್ತಿದ್ದ ಬಸ್, ಝಂಡೆವಾಲನ್ ದೇವಸ್ಥಾನದ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ದೃಶ್ಯಗಳಲ್ಲಿ ಬಸ್ ತೀವ್ರವಾಗಿ ಹಾನಿಗೊಳಗಾಗಿದ್ದು, ಹಾನಿಗೊಳಗಾದ ಸೀಟುಗಳು ಮತ್ತು ಚಕ್ರಗಳು ವಾಹನದ ಬಳಿ ಬಿದ್ದಿರುವುದು ಕಾಣಬಹುದು.
