Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್ ಮೇಲಿನ ದಾಳಿ ಗಡುವು ಏಪ್ರಿಲ್ 6ಕ್ಕೆ ವಿಸ್ತರಣೆ: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ

Spread the love

ವಾಷಿಂಗ್ಟನ್: ಇರಾನ್ ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಏಪ್ರಿಲ್ 6ರವರೆಗೆ ಮುಂದೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್ ನ ವಿನಂತಿಯನ್ನು ಪರಿಗಣಿಸಿ, ಸುಮಾರು 10 ದಿನಗಳ ಕಾಲ ದಾಳಿಗೆ ವಿರಾಮ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಟ್ರುತ್ ಸೋಷಿಯಲ್ ನಲ್ಲಿನ ಪೋಸ್ಟ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ‘ತುಂಬಾ ಚೆನ್ನಾಗಿ’ ಸಾಗುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಮಾತುಕತೆಗಳು ಯಶಸ್ವಿಯಾಗುತ್ತವೆಯೇ ಎಂಬುದರ ಬಗ್ಗೆ ಇರಾನ್‌ನ ನಿಲುವು ಸ್ಪಷ್ಟವಾಗಿಲ್ಲವೆಂದೂ ತಿಳಿಸಿದ್ದಾರೆ.
ಈ ಮೊದಲು, ಸೋಮವಾರ ಟ್ರಂಪ್ ಅವರು ಇರಾನ್‌ ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಶುಕ್ರವಾರದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಆ ಗಡುವನ್ನು ಮತ್ತೆ ಏಪ್ರಿಲ್ 6ರವರೆಗೆ ವಿಸ್ತರಿಸಿದ್ದಾರೆ.
‘ಮಾತುಕತೆಗಳು ನಡೆಯುತ್ತಿವೆ. ನಕಲಿ ಸುದ್ದಿ ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡುತ್ತಿದ್ದರೂ, ವಾಸ್ತವದಲ್ಲಿ ಅವು ಉತ್ತಮವಾಗಿ ಸಾಗುತ್ತಿವೆ’ ಎಂದು ಟ್ರಂಪ್ ಅವರು ‘ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *