ತಮಿಳುನಾಡು ಉದ್ಯಮಿಯ ವಂಚಿಸಿದ ಸೈಬರ್ ಪೋಲಿಸ್ ತಂಡ

ತಮಿಳುನಾಡು: ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಹಾಗೂ ಟೀಂ ಸೇರಿ ಹಣ (Money) ಡಬ್ಬಲ್ ಮಾಡುವುದಾಗಿ ತಮಿಳುನಾಡು ಉದ್ಯಮಿಯೊಬ್ಬರಿಗೆ 3.70 ಲಕ್ಷ ರೂ.

ವಂಚಿಸಿ, ಎಸ್ಕೇಪ್ ಆಗಿದ್ದಾರೆ.
ಪಿಎಸ್ಐ ಅಯ್ಯನಗೌಡ ಅದೇ ಠಾಣೆಯ ಕಾನ್ಸ್ಟೇಬಲ್ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್ಟೇಬಲ್ ಬಸವಣ್ಣರ ಮೇಲೆ ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು. ನಾಲ್ಕು ಮಂದಿ ಆರೋಪಿಗಳು ಈಗ ತಲೆ ಮರೆಸಿಕೊಂಡಿದ್ದಾರೆ.
ಇನ್ನು, ಎಸ್ಪಿ ಡಾ.ಬಿ.ಟಿ ಕವಿತಾ ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ.ಜು.26 ರಂದು ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಕರೆ ಮಾಡಿ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ 3 ಲಕ್ಷ ರೂ. ತನ್ನಿ ಆ ಹಣವನ್ನ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡ್ತೀವಿ ಎಂದು ನಂಬಿಸಿದ್ದಾರೆ. ಈ ವಿಚಾರ ನಂಬಿ ಉದ್ಯಮಿ ಚಾಮರಾಜನಡರದ ಹೋಟೆಲ್ ಗೆ ಬಂದಿದರು ಈ ವೇಳೆ ಮೊದಲೇ ಬಂದ PSI ಅಯ್ಯನಗೌಡ ಅಂಡ್ ಟೀಮ್ ಕೇಸ್ ಮುಚ್ಚಿಹಾಕೋಕೆ 3 ಲಕ್ಷದ 70 ಸಾವಿರ ಪಡೆದು ಹೊರಟಿದ್ದಾರೆ. ಇದೆಲ್ಲವೂ ಪಕ್ಕಾ ಪ್ಲ್ಯಾನ್ ಮಾಡಿ ಕೃತ್ಯ ಎಸಗಲಾಗಿದೆ.
ಉದ್ಯಮಿ ಸಚ್ಚಿದಾನಂದ ನೇರವಾಗಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್ ಬಂಧನ ಆಗುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಬಸವಣ್ಣ, ರಮೇಶ್ ಹಾಗೂ ಮೋಹನ್ ಈಗ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರ ಪತ್ತೆಗೆ ಪೊಲೀಸರೇ ಇದೀಗ ಬಲೆ ಬೀಸಿದ್ದಾರೆ.
ಇನ್ನು, ದಾವಣಗೆರೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಆನ್ಲೈನ್ ಜೂಜಾಟದಿಂದ ಹೆಡ್ ಕಾನ್ಸ್ಟೇಬಲ್ ಒಬ್ಬರು ಸೂಸೈಡ್ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಹೌದು.. ಆನ್ಲೈನ್ ಗೇಮ್ ಬಗ್ಗೆ ಜಾಗೃತಿ ಮೂಡಿಸಬೇಕಾದ ಪೊಲೀಸ್ ಸಿಬ್ಬಂದಿಯೇ ಅದಕ್ಕೆ ಬಲಿಯಾಗಿರುವುದು ನಿಜಕ್ಕೂ ವಿಪರ್ಯಾಸ. ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್. ಇವರು ಚಿಕ್ಕಬಳ್ಳಾಪುರದ ಪೊಲೀಸ್ ಕ್ವಾಟರ್ಸ್ ನಲ್ಲಿ ಮಂಚೇನಹಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವೃತ್ತಿಯಲ್ಲಿ ಪೊಲೀಸ್ ಆದರೂ ರಾಜಶೇಖರ್ ಆನ್ಲೈನ್ ಗೇಮ್ ಗೀಳಿಗೆ ಬಿದ್ದಿದ್ದರು. ಜೂಜಾಟ ಆಡುವ ಮೂಲಕ ಅವರು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಈ ಕುರಿತು ತಂದೆ-ತಾಯಿಯ ಬಳಿಯೂ ಕಷ್ಟ ಹೇಳಿದ್ದರು. ಇತ್ತ ಮಗನ ಕಷ್ಟ ಅರಿತ ತಂದೆ-ತಾಯಿ ತಮ್ಮ ಕೈಲಾದಷ್ಟು ಹಣ ನೀಡಿದ್ದಾರೆ. ಆದರೂ ಕೂಡ ಸಾಲ ತೀರಿಸಲಾಗಿಲ್ಲ. ಅಲ್ಲದೇ ಸಾಲ ತೀರಿಸುವುದಕ್ಕೆ ಪತ್ನಿಯ ಚಿನ್ನಾಭರಣವನ್ನು ಕೂಡ ರಾಜಶೇಖರ್ ಅಡವಿಟ್ಟಿದ್ದರು ಎನ್ನಲಾಗಿದೆ.
ಗೇಮ್ ಗೀಳಿನಿಂದ ಸಾಲ ತೀರಿಸಲಾಗಿದೆ ರಾಜಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಎಸ್ ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
