Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆನ್‌ಲೈನ್ ಹೂಡಿಕೆ ಹೆಸರಲ್ಲಿ ಕೋಟ್ಯಂತರ ರೂ. ಲೂಟಿ: ಬೆಂಗಳೂರಿನಲ್ಲಿ 8 ಸೈಬರ್ ವಂಚಕರ ಬಂಧನ; ದೇಶ-ವಿದೇಶಗಳ ಜನರಿಗೆ ಬಲೆ ಬೀಸಿದ್ದ ಜಾಲ ಪತ್ತೆ

Spread the love

ಬೆಂಗಳೂರು: ಇತ್ತೀಚೆಗೆ ಆನ್​ಲೈನ್ ವಂಚನೆಗಳು, ಸೈಬರ್ ಅಪರಾಧಗಳು ( Cyber fraud) ಹೆಚ್ಚುತ್ತಲೇ ಇವೆ. ದಿನ ಬೆಳಗಾದರೆ ಒಬ್ಬರಲ್ಲ ಒಬ್ಬರು ಈ ಅಪರಾಧ ಜಾಲಕ್ಕೆ ಸಿಲುಕಿ ಹಣವನ್ನು ಕಳೆದುಕೊಳ್ಳುತ್ತಾರೆ. ಇದೀಗ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂಥದ್ದೇ ಪ್ರಕರಣ ದಾಖಲಾಗಿದ್ದು, 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆನ್​ಲೈನ್ ಹೂಡಿಕೆಯ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಗಳು ದೇಶ ವಿದೇಶದ ಜನರನ್ನು ತಮ್ಮ ಜಾಲದಲ್ಲಿ ಬೀಳಿಸುತ್ತಿದ್ದರು.

ಲಾಭದ ಆಮಿಷವೊಡ್ಡಿ ಕೋಟ್ಯಂತರ ಹಣ ಲೂಟಿ
ಬೆಂಗಳೂರಿನಲ್ಲಿ ಆನ್​​ಲೈನ್​​ನಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಫೇಸ್​​ಬುಕ್​​, ವಾಟ್ಸಾಪ್​, ಇನ್​​ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆಗೆ ಆಮಿಷವೊಡ್ಡಲಾಗುತ್ತಿತ್ತು. ದೇಶ ವಿದೇಶಗಳ ಜನರಿಗೆ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚು ಲಾಭ ನೀಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ.

ನಿನ್ನೆ (ಅ.6) 7 ಕಡೆ ದಾಳಿ ನಡೆಸಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 19 ಲ್ಯಾಪ್​​ಟಾಪ್​​​, 40 ಮೊಬೈಲ್‌, 11 ಪೆನ್ ಡ್ರೈವ್, 42 ಸಿಮ್ ಕಾರ್ಡ್, 4 ಐಪ್ಯಾಡ್, 2 ಹಾರ್ಡ್ ಡಿಸ್ಕ್, 5 ಸಿಪಿಯು, 13 ಸೀಲುಗಳು, 10 ಮೆಮೊರಿ ಕಾರ್ಡ್ ಹಾಗೂ ವಿದೇಶಿ ಕರೆನ್ಸಿ, ಕರೆನ್ಸಿ ಕೌಟಿಂಗ್ ಮಷಿನ್, 6 ಕೋಟಿ ಬೆಲೆಬಾಳುವ ಸ್ಥಿರಾಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಯ ಪ್ರಕರಣಗಳು
ಈ ಹಿಂದೆಯೂ ಕರ್ನಾಟಕದ ಹಲವೆಡೆ ಸೈಬರ್ ವಂಚನೆಯ ಪ್ರಕರಣಗಳು ಕಂಡುಬಂದಿವೆ. ಇದೇ ತಿಂಗಳಿನಲ್ಲಿ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳು ನಕಲಿ ಆನ್​ಲೈನ್ ಟ್ರೇಡಿಂಗ್ ಆ್ಯಪ್​ಗಳನ್ನು ನಂಬಿ ಸೈಬರ್ ವಂಚನೆಗೆ ಒಳಗಾಗಿದ್ದರು. ಇಬ್ಬರೂ ಸೇರಿ ಒಟ್ಟೂ 2.28 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದರು. ಅದಲ್ಲದೇ ಮ್ಯಾಟ್ರಿಮೊನಿಯಲ್ಲಿ 59 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರು ವ್ಯಕ್ತಿಯೊಬ್ಬನಿಂದ 2.3 ಕೋಟಿ ರೂ.ಗಳ ವಂಚನೆಗೆ ಒಳಗಾಗಿದ್ದರು.


Spread the love
Share:

administrator

Leave a Reply

Your email address will not be published. Required fields are marked *