Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೈಲಿನಲ್ಲಿ ಟಿಸಿ ಮೇಲೆಯೇ ಕ್ರಶ್: ವಿಡಿಯೋ ವೈರಲ್, ನೆಟ್ಟಿಗರಿಂದ ಹಾಸ್ಯದ ಕಾಮೆಂಟ್‌ಗಳು

Spread the love

ನಮಗ್ಯಾರಿಗೆ ಆಗಲಿ ರೈಲಿನಲ್ಲಿ ಅಪರಿಚಿತರ ಭೇಟಿಯಾಗುವುದು ಕಾಮನ್. ಕೆಲವೊಮ್ಮೆ ಆ ಪರಿಚಿತರೇ ಮುಂದೆ ಸ್ನೇಹಿತರಾಗುತ್ತಾರೆ. ಆದರೆ ಇಲ್ಲೋರ್ವ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಹೌದು ಆಕೆಗೆ ಟಿಸಿ ಮೇಲೆಯೇ ಕ್ರಶ್ ಆಗಿದೆ. ಯಾವ ಲೆವೆಲ್‌ಗೆ ಅಂದರೆ ಆಕೆ ಕದ್ದು ಮುಚ್ಚಿ ಟಿಸಿ ವಿಡಿಯೋ ಮಾಡಿದ್ದಲ್ಲದೆ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾಳೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದಲ್ಲದೆ, ಜನರು ಇದೀಗ ಈ ಹ್ಯಾಂಡ್‌ಸಂ ಟಿಕೆಟ್ ಕಲೆಕ್ಟರ್‌ ಅನ್ನ ಹುಡುಕಲು ಪ್ರಾರಂಭಿಸಿದ್ದಾರೆ.

ಕದ್ದು ಮುಚ್ಚಿ ವಿಡಿಯೋ ಮಾಡಿದ ಯುವತಿ
ಗಡ್ಡಧಾರಿ ಟಿಕೆಟ್ ಕಲೆಕ್ಟರ್ (ಟಿಸಿ) ರೈಲಿನ ಎಸಿ ವಿಭಾಗದಲ್ಲಿ ಬಹುಶಃ ವಂದೇ ಭಾರತ್ ಕೋಚ್ ಅನ್ಸುತ್ತೆ. ಟಿಕೆಟ್ ಪರಿಶೀಲಿಸುತ್ತಿರುವುದು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಒಂದು ಸಣ್ಣ ರೀಲ್ಸ್ ಆಗಿದೆ. ಅಂದಹಾಗೆ ಕ್ಲಿಪ್‌ ನೋಡಿದಾಗ ಟಿಸಿ ರೈಲಿನೊಳಗೆ ನಡೆದುಕೊಂಡು ಹೋಗುತ್ತಿರುವಾಗ ಟಿಕೆಟ್‌ಗಳನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಅವನ ಮುಂದೆ ಕುಳಿತಿದ್ದಾಳೆ. ಸುಂದರ ಟಿಸಿ ತನ್ನ ಕೆಲಸದಲ್ಲಿ ಮಗ್ನನಾಗಿ ಕಾಣುತ್ತಾರೆ. ಅವರನ್ನು ನೋಡಿದೊಡನೆ ಕಂಪಾರ್ಟ್‌ಮೆಂಟ್‌ನಲ್ಲಿರುವ ಅನೇಕ ಹೆಣ್ಮಕ್ಕಳ ಹೃದಯಗಳು ವೇಗವಾಗಿ ಬಡಿಯುತ್ತಿರುವಂತೆ ಕಾಣುತ್ತಿದೆ. ವಿಡಿಯೋ ಶೇರ್ ಮಾಡಿರುವ ಯುವತಿ, “ನಾನು ಇನ್ಮೇಲೆ ದಿನಾ ರೈಲಿನಲ್ಲಿ ಓಡಾಡ್ತೀನಿ ” ಎಂದು ಕ್ಯಾಪ್ಷನ್ ಕೊಟ್ಟಿದ್ದಾಳೆ. ವಿಡಿಯೋದ ಹಿನ್ನೆಲೆಯಲ್ಲಿ ‘ಕಮಾಂಡೋ 3’ ಚಿತ್ರದ ಅರಿಜಿತ್ ಸಿಂಗ್‌ರ “ಅಖಿಯಾನ್ ಮಿಲವಂಗಾ” ಹಾಡು ಪ್ಲೇ ಆಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋಗೆ ಕೆಲವು ಬಳಕೆದಾರರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಟಿಸಿ ಲುಕ್‌ ನೋಡಿ “ಟಿಕೆಟ್ ಅನ್ನು ಕಿಟಕಿಯಿಂದ ಎಸೆಯಿರಿ, ನಂತರ ಅವರು ನಿಮ್ಮನ್ನು ಹಿಡಿದು ಕರೆದುಕೊಂಡು ಹೋಗುತ್ತಾರೆ.” ಎಂದರೆ ಮತ್ತೆ ಕೆಲವರು “ಅವರು ಸರ್ಕಾರಿ ಸೇವಕ, ಅವರಿಗೆ ತುಂಬಾ ಸುಂದರವಾದ ಹೆಂಡತಿ ಸಿಗುತ್ತಾಳೆ, ಕನಸು ಕಾಣಬೇಡ.” ಎಂದಿದ್ದಾರೆ. ಹಾಗೆಯೇ, “ಇತರರ ಸಹೋದರ, ಮಗ, ಗೆಳೆಯನನ್ನು ನೋಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಅಂದಹಾಗೆ, ಇದು ಯಾವ ಮಾರ್ಗದ ರೈಲು?”, “ನನ್ನ ಬಳಿ ಟಿಕೆಟ್ ಇಲ್ಲ, ದಯವಿಟ್ಟು ನನ್ನನ್ನು ಹಿಡಿಯಿರಿ.” “ನನಗೆ ಅವರು ಗೊತ್ತು, ಅವರು ಮದುವೆಯಾಗಿದ್ದಾರೆ.” ಎಂದೆಲ್ಲಾ ಪ್ರತಿಕ್ರಿಯೆ ಕೊಟ್ಟಿರುವುದುನ್ನು ನೀವಿಲ್ಲಿ ನೋಡಬಹುದು. ವಿಡಿಯೋ ವೈರಲ್ ಆದ ತಕ್ಷಣ ಈ ಟಿಸಿ ಪ್ರಸಿದ್ಧವಾದರು. ಸದ್ಯ ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *