Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

70 ವರ್ಷ ಲಿವ್‌ ಇನ್‌ ರಿಲೇಷನ್‌ ನಂತರ ಮದುವೆ ಮಾಡಿಕೊಂಡ ದಂಪತಿ: ಫೋಟೋ, ವೀಡಿಯೋ ವೈರಲ್

Spread the love

70 ವರ್ಷದ ಲಿವ್‌ ಇನ್‌ ರಿಲೇಷನ್‌ಗೆ ಕಂಕಣ ಭಾಗ್ಯ, ಆ ಮದುವೆಗೆ ಮಕ್ಕಳು, ಮೊಮ್ಮಕಳೇ ಸಾಕ್ಷಿ!

ಜೈಪುರ: ರಾಜಸ್ಥಾನದ ಡುಂಗರಪುರ ಜಿಲ್ಲೆಯ ಗಾಲಂದರ್‌ ಗ್ರಾಮದಲ್ಲಿ ನಡೆದ ಆ ಮದುವೆ ಬಹಳ ವಿಶೇಷವಾಗಿತ್ತು. ಏಕೆಂದರೆ ಅದನ್ನು ಸಾಕ್ಷೀಕರಿಸಿದ್ದು ಹಸೆಮಣೆ ಮೇಲೆ ಕುಳಿತಿದ್ದ ವಧು-ವರರ ಮಕ್ಕಳು ಮತ್ತು ಮೊಮ್ಮಕ್ಕಳು! ಗೊಂದಲಕ್ಕೆ ಬೀಳಬೇಡಿ, ರಾಮ ಅಂಗರಿ (95) ಹಾಗೂ ಜೀವಲಿ ದೇವಿ (90) ಜೋಡಿ 70 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ನಲ್ಲಿತ್ತು.

ಈಗ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮಕ್ಕಳಿಂದ ಹೆತ್ತವರ ಮದುವೆ

ಈ ಪ್ರೇಮಿಗಳಿಗೆ ಕಾರಣಾಂತರಗಳಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ಆದರೆ ಸಹಜೀವನದ ಮೂಲಕ ಪ್ರೀತಿಯನ್ನು ಕಾಪಿಟ್ಟುಕೊಂಡರು. ಮದುವೆಯಾಗಬೇಕು ಅಂದುಕೊಂಡಾಗಲೆಲ್ಲಏನಾದರೂ ಸಮಸ್ಯೆ ಎದುರಾಗುತ್ತಿತ್ತು. ಈ ಜೋಡಿಗೆ 4 ಗಂಡು ಹಾಗೂ 4 ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಮಕ್ಕಳು ಸರಕಾರಿ ಉದ್ಯೋಗದಲ್ಲಿದ್ದಾರೆ. ಕೊನೆ ಉಸಿರು ಎಳೆಯುವುದರೊಳಗೆ ಮದುವೆಯಾಗಬೇಕು ಎಂಬ ಹೆತ್ತವರ ಕನಸನ್ನು ಮಕ್ಕಳು ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ನೆರವೇರಿಸಿದ್ದಾರೆ. ಇಡೀ ಕುಟುಂಬ ಮದುವೆಯಲ್ಲಿ ಭಾಗವಹಿಸಿತ್ತು. ಎಲ್ಲಾ ಯುವ ಜೋಡಿಗಳ ವಿವಾಹದಂತೆ ಹಳದಿ, ಮೆಹಂದಿ ಮತ್ತು ಬಿಂದೋರಿಯಂತಹ ಎಲ್ಲಾ ಆಚರಣೆಗಳನ್ನು ನಡೆಸಲಾಯಿತು. ಅಬ್ಬರದ ಡಿಜೆಗೆ ಗ್ರಾಮಸ್ಥರೂ ವಿವಾಹ ಮಹೋತ್ಸವಕ್ಕೆ ಕಳೆ ತಂದರು.

ರಾಮಾ ಭಾಯಿ ಮತ್ತು ಜೀವಾಲಿ ದೇವಿ ಎಂದಿಗೂ ವಿಧ್ಯುಕ್ತವಾಗಿ ಮದುವೆಯಾಗಿರಲಿಲ್ಲ. “ನಾವು ಮದುವೆಯಾಗಬೇಕು ಎಂದು ಅನಿಸಿತು. ಮಕ್ಕಳು ನಮ್ಮ ಆಸೆಯನ್ನು ಈಡೇರಿಸಿದರು” ಎಂದು ರಾಮಾ ಭಾಯಿ ಹೇಳಿದರು. ಅವರ ಮಕ್ಕಳು ಈ ನಿರ್ಧಾರವನ್ನು ಬೆಂಬಲಿಸಿದರು. ಅಷ್ಟೇ ಅಲ್ಲ, ಮದುವೆಯನ್ನು ಅದ್ಧೂರಿಯಾಗಿ ಆಚರಿಸಲು ಮುಂದಾದರು.
ಅಜ್ಜ-ಅಜ್ಜಿ ಮದುವೆ ಫೋಟೋ ವೈರಲ್

ದಂಪತಿಗಳ ಮದುವೆಯಲ್ಲಿ ಹಳದಿ ಶಾಸ್ತ್ರ, ಮೆಹೆಂದಿ ಮತ್ತು ಡಿಜೆ, ನೃತ್ಯ ಮತ್ತು ಗ್ರಾಮದ ತುಂಬಾ ಸಂಭ್ರಮದೊಂದಿಗೆ ಬಿಂದೋರಾ ಮೆರವಣಿಗೆ ಸೇರಿದಂತೆ ಎಲ್ಲಾ ಸಾಮಾನ್ಯ ಸಂಪ್ರದಾಯ ಪ್ರಕಾರ ಮದುವೆ ನಡೆಯಿತು. ಗ್ರಾಮಸ್ಥರು ಹಬ್ಬದಲ್ಲಿ ಪಾಲ್ಗೊಂಡರು. ಸಾವಿರಾರು ಜನರು ಸಮಾರಂಭವನ್ನು ವೀಕ್ಷಿಸಲು ಜಮಾಯಿಸಿದ್ದರು. ಈವೆಂಟ್‌ನ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ಅವರ ಗಂಡು ಮತ್ತು ಹೆಣ್ಣು ಮಕ್ಕಳು ಪ್ರತಿಯೊಂದು ಸಂಪ್ರದಾಯವನ್ನು ಅನುಸರಿಸುವಂತೆ ನೋಡಿಕೊಂಡರು. ಸಪ್ತಪದಿ ತುಳಿಯುವುದರಿಂದ ಹಿಡಿದು, ಅತಿಥಿಗಳಿಗೆ ಊಟ ಬಡಿಸುವವರೆಗೆ, ಸಮಾರಂಭವು ಯಾವುದೇ ಇತರ ಮದುವೆಯಂತೆ ಅದ್ದೂರಿಯಾಗಿತ್ತು.

“ಮದುವೆಯು ಅದ್ಧೂರಿಯಾಗಿತ್ತು. ಇಡೀ ಗ್ರಾಮವೇ ಸಂಭ್ರಮಿಸಿತು” ಎಂದು ಗ್ರಾಮಸ್ಥರೊಬ್ಬರು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಮಗ, “ನಮ್ಮ ತಂದೆ ತಾಯಿಯ ಆಸೆಯಂತೆ ನಾವು ಮದುವೆ ಮಾಡಿದ್ದೇವೆ. ನಮಗೆ ತುಂಬಾ ಸಂತೋಷವಾಗಿದೆ” ಎಂದರು.


Spread the love
Share:

administrator

Leave a Reply

Your email address will not be published. Required fields are marked *